Tuesday, 20th February 2018  

Vijayavani

ಸದನದಲ್ಲಿ ಶಾಸಕರಿಲ್ಲದೆ ಬಣಬಣ - ಇಂದಿನ ಕಲಾಪಕ್ಕೆ ಬರೀ 22 ಮಂದಿ ಹಾಜರ್​ - ಬಜೆಟ್​ ಅಧಿವೇಶನವೂ 3 ದಿನ ಮೊಟಕು.        ಒಬ್ಬರಿಗಿಂತ ಮತ್ತೊಬ್ಬ ಖತರ್ನಾಕ್​​ - ಎಂಎಲ್​ಎ ಪುತ್ರನ ಟೀಂನಲ್ಲಿ 8 ಮಂದಿ - ಇದು ನಲಪಾಡ್​​​​​ ಗ್ಯಾಂಗ್​ನ ಕಂಪ್ಲೀಟ್​ ಕಹಾನಿ.        ವಿದ್ವತ್​ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ - ಮೂಗಿನ ಮೂಳೆ‌ ಕಟ್​​​, ಮೂಖ ಊದಿಕೊಂಡಿದೆ - ಐಸಿಯುನಲ್ಲೇ ಚಿಕಿತ್ಸೆ ಅಂದ್ರು ಮಲ್ಯ ಆಸ್ಪತ್ರೆ ವೈದ್ಯರು.        ವಿದ್ವತ್​​​​​​​​​​ ಬಿಜೆಪಿ ಕಾರ್ಯಕರ್ತ ವಿಚಾರ - ವಿವಾದದ ಬಳಿಕ ತಪ್ಪು ಸರಿಪಡಿಸಿಕೊಂಡ ಬಿಜೆಪಿ - ಅವ್ರು ನಮ್ಮ ಕಾರ್ಯಕರ್ತನಲ್ಲ ಅಂತಾ ಅಮಿತ್ ಷಾ ಸ್ಪಷ್ಟನೆ.        ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ - ಚಲಿಸುತ್ತಿದ್ದ ಲಾರಿಯ ಟಯರ್ ಸ್ಫೋಟ - ಇಬ್ಬರ ದುರ್ಮರಣ, ಲಾರಿ ಚಾಲಕನ ಸ್ಥಿತಿ ಗಂಭೀರ.       
Breaking News

ರಾಜ್ಯಾದ್ಯಂತ ಬಿಜೆಪಿ ಜೈಲ್​ ಭರೋ

Friday, 12.01.2018, 3:03 PM       No Comments

ಬೆಂಗಳೂರು: ಬಿಜೆಪಿ ಹಾಗೂ ಆರ್​ಎಸ್​ಎಸ್​​ನವರು ಉಗ್ರಗಾಮಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿದ್ದ ಹೇಳಿಕೆಯನ್ನು ವಿರೋಧಿಸಿ ಶುಕ್ರವಾರ ರಾಜ್ಯಾದ್ಯಂತ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಜೈಲ್ ಭರೋ ಪ್ರತಿಭಟನೆ ಮಾಡಿದರು.

ವಿಪಕ್ಷ ನಾಯಕ ಜಗದೀಶ್​ ಶೆಟ್ಟರ್​, ಶಾಸಕ ಸಿಟಿ ರವಿ, ಶೋಭಾ ಕರಂದ್ಲಾಜೆ ಸೇರಿದಂತೆ ಹಲವಾರು ನಾಯಕರು ಹಾಗೂ ಕಾರ್ಯಕರ್ತರು ಬೇರೆ ಬೇರೆ ಜಿಲ್ಲೆಗಳಲ್ಲಿ ರಸ್ತೆಗಿಳಿದು ಪ್ರತಿಭಟಿಸಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಜಗದೀಶ್​ ಶೆಟ್ಟರ್​, ಸಿಎಂ ಸಿದ್ದರಾಮಯ್ಯ, ದಿನೇಶ್​ ಗುಂಡುರಾವ್​, ವೇಣುಗೋಪಾಲ ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ಹಾಗೂ ಸಂಘ ಪರಿವಾರವನ್ನು ಯಾವ ಆಧಾರದ ಮೇಲೆ ಉಗ್ರಗಾಮಿಗಳು ಎಂದರು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.

ತುಮಕೂರಿನಲ್ಲಿ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಕಾರ್ಯಕರ್ತರು ಕಾಂಗ್ರೆಸ್​ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ, ಇದನ್ನು ತಡೆದ ಪೊಲೀಸರು ಕರಂದ್ಲಾಜೆ ಸೇರಿದಂತೆ ಎಲ್ಲ ಕಾರ್ಯಕರ್ತರನ್ನು ಬಂಧಿಸಿದರು. ಇನ್ನು, ಚಿಕ್ಕಮಂಗಳೂರಿನಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಶಾಸಕ ಸಿಟಿ ರವಿ ಪ್ರತಿಭಟನೆ ಮಾಡಿದರು. ಕಾಂಗ್ರೆಸ್​ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗಾ ಅವರನ್ನು ಪೊಲೀಸರು ಬಂಧಿಸಿದರು.

ಕಲಬುರಗಿ: ಬ್ಯಾರಿಕೇಡ್​ ಮುರಿದು ಕಾಂಗ್ರೆಸ್​ ಕಚೇರಿಯತ್ತ ನುಗ್ಗಿದ ಕಾರ್ಯಕರ್ತರು

ಇಲ್ಲಿನ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್, ಶಾಸಕ ದತ್ತಾತ್ರೆಯ ಪಾಟೀಲ್ ರೇವೂರ, ಬಿ.ಜಿ.ಪಾಟೀಲ್ ಸೇರಿ ಇನ್ನೂರಕ್ಕೂ ಹೆಚ್ಚು ಜನ ಪ್ರತಿಭಟನೆ ಮಾಡಿದರು. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ಮಧ್ಯೆ ತೀವ್ರ ಮಾತಿನ ಚಕಮಕಿ ಆಯಿತು. ಪೊಲೀಸ್ ಬ್ಯಾರಿಕೇಡ್ ಮುರಿದು ಕಾಂಗ್ರೆಸ್ ಕಚೇರಿಯತ್ತ ನುಗ್ಗಿ ಪ್ರತಿಭಟನೆ ಮಾಡಿದ ನಾಯಕರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಗದಗ: ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನ

ಇಲ್ಲಿನ ಮಹಾತ್ಮಾ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ಮಾಡಿದ ಕಾರ್ಯಕರ್ತರು ಮುಖ್ಯಮಂತ್ರಿಯ ಹೇಳಿಕೆಯನ್ನು ಖಂಡಿಸಿದರು. ಕಾರ್ಯಕರ್ತ ಅರವಿಂದ್​ ಹುಲ್ಲೂರ್​ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದರು.

ಹಾವೇರಿ: ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ನೂಕು ನುಗ್ಗಲು

ಸಿಎಂ ಹೇಳಿಕೆ ಖಂಡಿಸಿ ಇಲ್ಲಿ ನಡೆಸಿದ ಪ್ರತಿಭಟನೆಯ ವೇಳೆ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ನೂಕು ನುಗ್ಗಲು ಸಂಭವಿಸಿತು. ಬಿಜೆಪಿ ಕಚೇರಿಯಿಂದ ಕಾಂಗ್ರೆಸ್​ ಕಚೇರಿವರೆಗೆ ಹೋದ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಸಿಎಂ ಹಾಗೂ ದಿನೇಶ್​ ಗುಂಡುರಾವ್​ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ಪೊಲಿಸರು ಅವರನ್ನು ವಶಕ್ಕೆ ಪಡೆದರು.

ಬೆಳಗಾವಿ: ಮಾಜಿ ಶಾಸಕ ಅಭಯ ಪಾಟೀಲ್​ ಬಂಧನ

ಮಾಜಿ ಶಾಸಕ ಅಭಯ ಪಾಟೀಲ್​ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಇಲ್ಲಿನ ಗರದ ವೃತ್ತದಿಂದ ಕಾಂಗ್ರೆಸ್​ ಕಚೇರಿಗೆ ತೆರಳಿ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸ್​ ಹಾಗೂ ಕಾರ್ಯಕರ್ತರ ಮಧ್ಯೆ ತಳ್ಳಾಟವಾಯಿತು. ಅಭಯ ಪಾಟೀಲ್​ ಸೇರಿದಂತೆ ನೂರಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಚಾಮರಾಜನಗರ: ಬಿಜೆಪಿ ಕಚೇರಿಯಿಂದ ಕಾಂಗ್ರೆಸ್​ ಕಚೇರಿಯತ್ತ ಮೆರವಣಿಗೆ

ಸಿಎಂ ಹೇಳಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದ ಬಿಜೆಪಿ ಕಚೇರಿಯಿಂದ ಕಾಂಗ್ರೆಸ್​ ಕಚೇರಿ ವರೆಗೆ ಮೆರವಣಿಗೆ ಮೂಲಕ ತೆರಳುತ್ತಿದ್ದ ಕಾರ್ಯಕರ್ತರನ್ನು ಪೊಲೀಸರು ಮಾರ್ಗ ಮಧ್ಯೆಯೇ ಬಂಧಿಸಿದರು. ಬುಧವಾರದಂದು ಬಿಜೆಪಿ ಹಾಗೂ ಆರ್​ಎಸ್​ಎಸ್​ನವರು ಉಗ್ರಗಾಮಿಗಳು ಎಂಬ ಹೇಳಿಕೆಯನ್ನು ಸಿಎಂ ಸಿದ್ದರಾಮಯ್ಯ ಇಲ್ಲಿಯೇ ನೀಡಿದ್ದರು.

ಮಂಡ್ಯ: ಬಹಿರಂಗ ಕ್ಷಮೆಗೆ ಆಗ್ರಹ

ಸಿಎಂ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಬಿಜೆಪಿ ಕಾರ್ಯಕರ್ತರು ಬಹಿರಂಗವಾಗಿ ಕ್ಷಮೆ ಕೇಳ ಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಕಾಂಗ್ರೆಸ್​ ಕಚೇರಿ ಎದುರು ಸಿಎಂ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಮಾಡಿದರು.

Leave a Reply

Your email address will not be published. Required fields are marked *

Back To Top