Wednesday, 24th October 2018  

Vijayavani

ರಂಗೇರಿದ ಉಪ ಚುನಾವಣಾ ಕಣ-ಜಮಖಂಡಿಯಲ್ಲಿಂದು ಬಿಎಸ್ ವೈ ಮತಬೇಟೆ-ಸಕ್ಕರೆ ನಾಡು ಮಂಡ್ಯದಲ್ಲಿಂದು ಸಿದ್ದರಾಮಯ್ಯ ಪ್ರಚಾರ        ದೀಪಾವಳಿಯಿಂದ ಲೋಡ್​ ಶೆಡ್ಡಿಂಗ್-ಇಂಧನ ಇಲಾಖೆ ಅಧಿಕಾರಿಗಳ ಜತೆ ಸಿಎಂ ಸಭೆ-ಕತ್ತಲಲ್ಲಿ ಮುಳುಗುತ್ತಾ ಕರ್ನಾಟಕ..?        ಸಾಲಮನ್ನಾವೂ ಇಲ್ಲ, ಬೆಲೆಯೂ ಇಲ್ಲ-ಬೆವರು ಸುರಿಸಿ ಬೆಳೆದ ಬೆಳೆ ಕೇಳೋರೂ ಇಲ್ಲ-ಅನ್ನದಾತನಿಗೆ ಕಣ್ಣೀರು ತರಿಸುತ್ತಿದೆ ಈರುಳ್ಳಿ        ಬೆಂಗಳೂರಲ್ಲಿ ಅನಧಿಕೃತ ಬಿಟ್ ಕಾಯಿನ್ ATM-ಆರೋಪಿ ಹರೀಶ್ ಬಂಧನ-ಕೆಂಪ್ ಫೋರ್ಟ್​ನಲ್ಲಿದ್ದ ಎಟಿಎಂ ಪೊಲೀಸರ ವಶಕ್ಕೆ        ಕೊಳ್ಳೆಗಾಲದಲ್ಲಿ 17 ವರ್ಷಗಳಿಂದ ಕಾಮಗಾರಿ ಅಪೂರ್ಣ-ಇನ್ನೂ ಆಗಿಲ್ಲ ವಾಲ್ಮೀಕಿ ಭವನ ನಿರ್ಮಾಣ-ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ        ವಿಜಯಪುರದಲ್ಲಿ ಗಂಗಾಕಲ್ಯಾಣ ಗೋಲ್ಮಾಲ್-ಫಲಾನುಭವಿಗಳಿಗೆ ಸಿಗದ ಬೋರ್ ವೇಲ್ ಸೌಲಭ್ಯ-ಯಾರದ್ದೋ ಹೆಸರಲ್ಲಿ ಅನುದಾನ ನೀಡಿದ ಅಧಿಕಾರಿಗಳು       
Breaking News

ಬಿಜೆಪಿ ವಿರುದ್ಧ ದಂಗೆ ಏಳಲು ಜನರಿಗೆ ಕರೆ ಕೊಡುತ್ತೇನೆ: ಮುಖ್ಯಮಂತ್ರಿ ಎಚ್ಚರಿಕೆ

Thursday, 20.09.2018, 1:32 PM       No Comments

ಹಾಸನ: ಸಮ್ಮಿಶ್ರ ಸರ್ಕಾರಕ್ಕೆ ತೊಂದರೆ ಕೊಟ್ಟರೆ ನಾನು ಸುಮ್ಮನಿರುವುದಿಲ್ಲ. ಬಿಜೆಪಿ ವಿರುದ್ಧ ದಂಗೆ ಏಳುವಂತೆ ರಾಜ್ಯದ ಜನರಿಗೆ ಕರೆ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ, ಬಿ.ಎಸ್​.ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರಹಾಕಿದರು.

ಜಿಲ್ಲೆಗೆ ಆಗಮಿಸಿದ ವೇಳೆ ಮಾಧ್ಯಮದವರ ಜತೆ ಮಾತನಾಡಿ, ಸರ್ಕಾರದ ವಿರುದ್ಧ ಬಿಜೆಪಿ ಹುಡುಗಾಟ ಆಡೋದನ್ನು ನಿಲ್ಲಿಸಬೇಕು. ನಾನು ರೈತರಿಗೆ ಸ್ಪಂದಿಸಬೇಕು. ಅವರಿಗೆ ಆಸರೆಯಾಗಿ ನಿಲ್ಲಬೇಕು ಎಂದು ಬಯಸುತ್ತೇನೆ. ಆದರೆ, ದಿನ ಬೆಳಗಾದರೆ ಇವರ ಕೀಳುಮಟ್ಟದ ರಾಜಕಾರಣ ನೋಡುವುದೇ ಆಗಿದೆ ಎಂದು ವಾಗ್ದಾಳಿ ನಡೆಸಿದರು.

ಯಡಿಯೂರಪ್ಪನವರಿಗೆ ಬುದ್ಧಿಭ್ರಮಣೆಯಾಗಿರಬೇಕು

ಯಡಿಯೂರಪ್ಪನವರು ಸರ್ಕಾರ ಟೇಕ್​ಆಫ್​ ಆಗಿಲ್ಲ ಎನ್ನುತ್ತಾರೆ. ಆ ಶಬ್ದದ ಅರ್ಥವಾದರೂ ಅವರಿಗೆ ಗೊತ್ತಿದೆಯಾ? ಯಡಿಯೂರಪ್ಪನವರಿಗೆ ಎಲ್ಲೋ ಬುದ್ಧಿ ಭ್ರಮಣೆಯಾಗಿರಬೇಕು. ಯಾವುದೋ ಲೋಕದಲ್ಲಿ ಇದ್ದಾರೆ. ಅವರ ಶಿಷ್ಯನೊಬ್ಬ ಮೊನ್ನೆಮೊನ್ನೆ ರಾತ್ರೋರಾತ್ರಿ ಶ್ರೀಲಂಕಾಕ್ಕೆ ಓಡಿಹೋದನಲ್ಲ. ಸರ್ಕಾರ ಟೇಕ್​ ಆಫ್​ ಆಗಿರುವುದರಿಂದಲೇ ಇಂಥವರೆಲ್ಲ ಊರು ಬಿಟ್ಟು ಹೋಗುತ್ತಿರುವುದು ಉದಯ್​ ಗೌಡ ಹೆಸರು ಹೇಳದೆ ಕುಟುಕಿದರು.

ಬಿಜೆಪಿಯವರು ಮಾತ್ರ ಅಧಿಕಾರದಲ್ಲಿ ಇರಬೇಕಾ? ಅವರು ಮಾತ್ರ ಆಡಳಿತ ನಡೆಸಬೇಕಾ? ಇನ್ನು ಕೆಲವೇ ದಿನಗಳಲ್ಲಿ ದಂಧೆಕೋರರ ಹೆಸರು ಬಯಲು ಮಾಡುತ್ತೇವೆ ಎಂದು ಹೇಳಿದರು.

Leave a Reply

Your email address will not be published. Required fields are marked *

Back To Top