Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಸರ್ಕಾರ ವರ್ಗಾವಣೆ ದಂಧೆಯಲ್ಲಿ ನಿರತ

Saturday, 11.08.2018, 3:03 AM       No Comments

ಯಾದಗಿರಿ/ರಾಯಚೂರು: ರಾಜ್ಯದ ಅಭಿವೃದ್ಧಿ ಸಂಪೂರ್ಣ ಸ್ಥಗಿತಗೊಂಡಿದ್ದು, ಹೊಸದಾಗಿ ಕಾಮಗಾರಿ ಪಡೆಯಲು ಗುತ್ತಿಗೆದಾರರು ಮುಂದೆ ಬರುತ್ತಿಲ್ಲ. ಸಮ್ಮಿಶ್ರ ಸರ್ಕಾರ ಅಧಿಕಾರಿಗಳ ವರ್ಗಾವಣೆಯನ್ನೇ ದಂಧೆಯನ್ನಾಗಿ ಮಾಡಿಕೊಂಡಿದ್ದು, ಅಭಿವೃದ್ಧಿ ಬಗ್ಗೆ ಯಾವೊಬ್ಬ ಸಚಿವರೂ ಮಾತನಾಡುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.

13 ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿ ಬರ ಪರಿಸ್ಥಿತಿ ಎದುರಾಗಿದ್ದರೂ ಸಿಎಂ ಆಗಲಿ, ಕೃಷಿ ಸಚಿವರಾಗಲಿ ಭೇಟಿ ನೀಡಿ ಅನ್ನದಾತರ ಗೋಳು ಆಲಿಸಿಲ್ಲ. 2017-18ರಲ್ಲಿ ಯಾದಗಿರಿ ಜಿಲ್ಲೆಯೊಂದರಲ್ಲೇ 10 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಎಂ ಪ್ರಮಾಣ ವಚನ ಸಮಾರಂಭಕ್ಕೆ ಲಕ್ಷಾಂತರ ರೂ. ಖರ್ಚು ಮಾಡುವ ಮೂಲಕ ದುಂದುವೆಚ್ಚ ಮಾಡಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

ದೇಶದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಸಣ್ಣ ಪುಟ್ಟ ಪ್ರಾದೇಶಿಕ ಪಕ್ಷಗಳು ಸಹ ಕಾಂಗ್ರೆಸ್ ಅನ್ನು ನಂಬದ ಸ್ಥಿತಿಯಲ್ಲಿವೆ. ಲೋಕಸಭಾ ಚುನಾವಣೆಯಲ್ಲಿ ಮತ್ತೆ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ರಾಜ್ಯದಲ್ಲಿ ಬಿಜೆಪಿ ಸಂಘಟನೆ ಬಲಿಷ್ಠವಾಗಿದೆ ಎಂದರು.

ಗುಳೆ ತಡೆಯಲಾಗದ ಸರ್ಕಾರ: ರಾಯಚೂರಿನಲ್ಲಿ ಮಾತನಾಡಿದ ಬಿಎಸ್​ವೈ, ಜಿಲ್ಲೆಯಲ್ಲಿ 2 ನದಿಗಳಿದ್ದರೂ ನೀರಿಲ್ಲದೆ ಬೆಳೆ ಒಣಗುತ್ತಿದೆ. ಜನ ಗುಳೆ ಹೋಗುತ್ತಿದ್ದಾರೆ. ಜನರ ಪಾಲಿಗೆ ಸರ್ಕಾರ ಬದುಕಿದೆಯೋ, ಸತ್ತಿದೆಯೊ ಎನ್ನುವಂತಿದೆ. ಸಿಎಂ ಇಂಥ ಪ್ರದೇಶಕ್ಕೆ ಬಂದು ಅಧಿಕಾರಿಗಳ ಸಭೆ ನಡೆಸಿ ಗುಳೆ ತಡೆಯುತ್ತಿಲ್ಲ ಎಂದರು.

ಕೇಂದ್ರದಿಂದ ಯಾವ ಇಲಾಖೆಗೆ ಅನುದಾನ ನೀಡುವಲ್ಲಿ ಅನ್ಯಾಯವಾಗಿದೆ ಎಂದು ಸಿಎಂ ಹೇಳಲಿ. ಅವರೊಟ್ಟಿಗೆ ತೆರಳಿ ಕೇಂದ್ರದ ಮನವೊಲಿಸಿ ಹಣ ತರಲು ಬಿಜೆಪಿ ಸಿದ್ಧವಿದೆ. ಮೊದಲು ಕುಮಾರಸ್ವಾಮಿ ಕುಂಭಕರ್ಣ ನಿದ್ದೆಯಿಂದ ಹೊರಬರಲಿ ಎಂದು ಟೀಕಿಸಿದರು.

ಸಭೆಯಲ್ಲಿ ಆಕ್ರೋಶ ಸ್ಫೋಟ

ಕಲಬುರಗಿ ಬಿಜೆಪಿ ಪ್ರಮುಖರ ಸಭೆಯಲ್ಲಿ ‘ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ಚುನಾವಣೆಯಲ್ಲಿ ಬೇರೆಯವರಿಗೆ ಟಿಕೆಟ್ ನೀಡುತ್ತೀರಿ’ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕ್ಷಣಕಾಲ ಗೊಂದಲದ ಸ್ಥಿತಿ ನಿರ್ವಣವಾಯಿತು.

ನಾನು ಹೋದ ವಿಮಾನದಲ್ಲಿ ಆಕಸ್ಮಿಕವಾಗಿ ಎಂ.ಬಿ ಪಾಟೀಲ್ ಬಂದಿದ್ದರು. ರಾಜ್ಯದ ರಾಜಕೀಯ ಕುರಿತು ಮಾತನಾಡಿಲ್ಲ. ಕಾಂಗ್ರೆಸ್ ನಾಯಕರಿಗೆ ಅವರ ಶಾಸಕರ ಮೇಲೆ ನಂಬಿಕೆ ಇಲ್ಲ.

| ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

ಚುನಾವಣೆಗೆ ಉಸ್ತುವಾರಿ

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ಜಿಲ್ಲೆಗೊಬ್ಬರಂತೆ ಉಸ್ತುವಾರಿಗಳನ್ನು ನೇಮಕ ಮಾಡಿದೆ.

ಪ್ರಮುಖ ಜಿಲ್ಲೆಗಳ ಉಸ್ತುವಾರಿಗಳು

# ಹಾಸನ-ಸಿ.ಟಿ. ರವಿ

# ಮಂಡ್ಯ-ಅಶ್ವತ್ಥನಾರಾಯಣ ಗೌಡ

# ಮೈಸೂರು-ಫಣೀಶ್

# ಚಾಮರಾಜನಗರ- ರಾಜೇಂದ್ರ, ಬಿ.ವೈ. ವಿಜಯೇಂದ್ರ,

# ತುಮಕೂರು- ವಿ.ಸೋಮಣ್ಣ

# ಉತ್ತರ ಕನ್ನಡ-ಕೆ.ಎಸ್.ಈಶ್ವರಪ್ಪ

# ಕೊಡಗು-ಆರ್.ಅಶೋಕ್

# ದಕ್ಷಿಣ ಕನ್ನಡ- ವಿ.ಸುನೀಲ್​ಕುಮಾರ್

# ಉಡುಪಿ-ಉದಯ್ ಕುಮಾರ್ ಶೆಟ್ಟಿ

# ಚಿತ್ರದುರ್ಗ-ವೈ.ಎ.ನಾರಾಯಣ ಸ್ವಾಮಿ

# ಬೆಳಗಾವಿ-ಜಗದೀಶ ಶೆಟ್ಟರ್

# ದಾವಣಗೆರೆ- ಆಯನೂರು ಮಂಜುನಾಥ್

# ಹಾವೇರಿ- ಎಂ.ನಾಗರಾಜ್

# ವಿಜಯಪುರ- ಲಕ್ಷ್ಮಣ ಸವದಿ

# ಬಾಗಲಕೋಟೆ-ಅರವಿಂದ ಲಿಂಬಾವಳಿ

# ಯಾದಗಿರಿ-ಅಮರನಾಥ ಪಾಟೀಲ್

ಸುಮ್ಮನೇ ಕೂರಲ್ಲ

ಕುಮಾರಸ್ವಾಮಿಯವರೇ, ನೀವು ದುಡ್ಡಿನ ಗಿಡ ನೆಡುತ್ತೀರೋ ಅಥವಾ ಮರ ನೆಡುತ್ತೀರೋ ನಮಗದು ಬೇಕಿಲ್ಲ. ಅಧಿಕಾರ ಇರುವಾಗ ರಾಜ್ಯದ ಅಭಿವೃದ್ಧಿ ಮಾಡಬೇಕು. ಇಲ್ಲವಾದಲ್ಲಿ ಕುರ್ಚಿ ಖಾಲಿ ಮಾಡಿ. ಕೆಲಸ ಮಾಡಲಿಲ್ಲವೆಂದರೆ ನಾವು ಸುಮ್ಮನೆ ಕೂಡು ವುದಿಲ್ಲ ಎಂದು ಯಡಿಯೂರಪ್ಪ ಎಚ್ಚರಿಸಿದರು.

Leave a Reply

Your email address will not be published. Required fields are marked *

Back To Top