Thursday, 20th September 2018  

Vijayavani

Breaking News

ರಾಜ್ಯದಲ್ಲಿ ಮೂವರು ಸಿಎಂಗಳು, ಅವರಲ್ಲಿ ಎಚ್​ಡಿಕೆ ದುರ್ಬಲ ಸಿಎಂ: ಬಿಜೆಪಿ

Monday, 06.08.2018, 12:24 PM       No Comments

ಬೆಂಗಳೂರು: ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರ ಆಡಳಿತದ ಬಗ್ಗೆ ಮತ್ತೆ ಟೀಕೆ ಮಾಡಿರುವ ಬಿಜೆಪಿ ರಾಜ್ಯ ಮೂವರು ಸಿಎಂಗಳನ್ನು ಹೊಂದಿದೆ ಎಂದು ಟ್ವೀಟ್​ ಮಾಡಿದೆ.

ಟ್ವಿಟರ್ ಮೂಲಕ ದೇವೇಗೌಡರ ಕುಟುಂಬವನ್ನು ಮತ್ತೆ ಲೇವಡಿ ಮಾಡಿರುವ ಬಿಜೆಪಿ, ರಾಜ್ಯದಲ್ಲಿ ಸದ್ಯ ಮೂವರು ಮುಖ್ಯಮಂತ್ರಿಗಳು: ಎಚ್​.ಡಿ.ಕುಮಾರಸ್ವಾಮಿ ವಿಕಲಾಂಗ ಸಿಎಂ, ಎಚ್.ಡಿ.ರೇವಣ್ಣ ಸೂಪರ್ ಸಿ.ಎಂ, ಎಚ್.ಡಿ.ದೇವೆಗೌಡ ಸುಪ್ರೀಂ ಸಿಎಂ ಎಂದು ಟ್ವೀಟ್​ ಮಾಡಿದೆ.

ಇಷ್ಟು ಮುಖ್ಯಮಂತ್ರಿಗಳಿದ್ದರು ಸರ್ಕಾರ ಯಾವಾಗ ಕೆಲಸ ಆರಂಭಿಸುತ್ತದೆ ಎಂದು ರಾಜ್ಯ ಕಾಯುವಂತಾಗಿದೆ. ನಿಜವಾದ ಮುಖ್ಯಮಂತ್ರಿ ಯಾರು ಎಂಬುದನ್ನು ಮೊದಲು ದೇವೇಗೌಡರ ಕುಟುಂಬ ನಿರ್ಧಾರ ಮಾಡಲಿ ಎಂದು ಟೀಕಿಸಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ನೂತನ ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​,ವಿಶ್ವನಾಥ್, ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ ವಿವೇಚನೆಯಿಂದ ಮಾತನಾಡಬೇಕು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಏನು ಬೇಕಾದರೂ ಮಾತನಾಡಬಹುದು. ಅವರೂ ಮಾತನಾಡುತ್ತಿದ್ದಾರೆ ಅಷ್ಟೆ ಎಂದಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top