Friday, 21st September 2018  

Vijayavani

Breaking News

ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದ ಸ್ವಾಮೀಜಿ ಮೇಲೆ ಹಲ್ಲೆ

Friday, 08.12.2017, 1:24 PM       No Comments

<< ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ ಆರೋಪ >>

ಜುನಾಗಢ: ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದ ಇಲ್ಲಿನ ಸ್ವಾಮಿ ನಾರಾಯಣ ಪೀಠದ ಮುಖ್ಯಸ್ಥ ಭಕ್ತಿಪ್ರಸಾದ್​ ಸ್ವಾಮಿಯ ಮೇಲೆ ಹಲ್ಲೆ ನಡೆದಿದ್ದು, ಬಿಜೆಪಿ-ಕಾಂಗ್ರೆಸ್ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.

ಗುರುವಾರ ರಾತ್ರಿ ಜುನಾಗಢದಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದ ಸ್ವಾಮಿಯ ಮೇಲೆ ಹಲ್ಲೆಯಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕೃತ್ಯ ಕಾಂಗ್ರೆಸಿಗರು ಎಸಗಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ. ಆದರೆ, ಇದನ್ನು ತಳ್ಳಿ ಹಾಕಿರುವ ಕಾಂಗ್ರೆಸ್​ ತನಿಖೆಗೆ ಆದೇಶಿಸುವಂತೆ ಹೇಳಿದೆ.

ಪ್ರಚಾರ ಕಾರ್ಯದ ವೇಳೆ ಸ್ವಾಮೀಜಿ ಹಾಗೂ ಕಾಂಗ್ರೆಸ್​ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದೇ ವೇಳೆ ಹಲ್ಲೆ ಕೂಡ ನಡೆದಿದೆ ಎನ್ನಲಾಗಿದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top