Sunday, 15th July 2018  

Vijayavani

ಬಾಲಕನ ವಿಡಿಯೋ ಹಿಂದೆ ಬಿಜೆಪಿ ಕೈವಾಡ ಆರೋಪ - ವಿಡಿಯೋ ತನಿಖೆಗೆ ಸದಾನಂದಗೌಡ ಆಗ್ರಹ - ರಾಜಕಾರಣಿಗಳ ಆಟಕ್ಕೆ ಕೊಡವರ ಆಕ್ರೋಶ        26 ವರ್ಷ ಲಿಂಗಾಯತರೇ ರಾಜ್ಯ ಆಳಿದ್ದಾರೆ - ಕುಮಾರಸ್ವಾಮಿ ಸಿಎಂ ಆಗಿ 2 ತಿಂಗಳಾಗಿದೆ - ಉತ್ತರ ಕರ್ನಾಟಕ ನಿರ್ಲಕ್ಷ್ಯ ಆರೋಪಕ್ಕೆ ದೇವೇಗೌಡ ತಿರುಗೇಟು        ಕೊನೆಗೂ ಶಿರಾಡಿ ಘಾಟ್‌ ಲೋಕಾರ್ಪಣೆ - ವಾಸ್ತು ಪ್ರಕಾರ ರೇವಣ್ಣ ಉದ್ಘಾಟನೆ - ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ        ಮಟನ್ ಬಿರಿಯಾನಿ, ಚಿಕನ್ ಚಾಪ್ಸ್, ಬೋಟಿ ಗೊಜ್ಜು, ಮೊಟ್ಟೆ - 25 ಸಾವಿರ ಮಂದಿಗೆ ಭರ್ಜರಿ ಬಾಡೂಟ - ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಜಿಟಿಡಿ ಕೃತಜ್ಞತೆ        ಒಂದು ದೇಶ ಒಂದೇ ಚುನಾವಣೆ - ಮೋದಿ ಪರಿಕಲ್ಪನೆಗೆ ಸೂಪರ್‌ಸ್ಟಾರ್‌ ಬೆಂಬಲ - ಹಣ, ಸಮಯ ಉಳಿತಾಯ ಎಂದ ರಜನಿ        ಉಕ್ಕಿಹರಿಯುತ್ತಿರೋ ಕೃಷ್ಣೆ - ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ - ಇತ್ತ ತಮಿಳುನಾಡಿನಲ್ಲಿ ಕಾವೇರಿ ಭೋರ್ಗರೆತ       
Breaking News

ಹರಿ ಕಥೆಯಲ್ಲಿ ಮೂಡಿ ಬಂತು ಶಿವ ಪಾರ್ವತಿ ಕಲ್ಯಾಣೋತ್ಸವ

Sunday, 01.07.2018, 8:12 PM       No Comments

ಬೀದರ್: ದಕ್ಷಿಣ ಕರಾವಳಿ ಕನ್ನಡ ಸಂಘದಿಂದ ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶಿವಲೀಲೆ ಕಥಾ ಕೀರ್ತನೆ (ಹರಿ ಕಥಾ) ಕಾರ್ಯಕ್ರಮ ನಗರದ ಹೋಟೆಲ್ ಕೃಷ್ಣಾ ರೆಜೆನ್ಸಿಯಲ್ಲಿ ಶನಿವಾರ ನಡೆಯಿತು.

ಹಿರಿಯ ಹೋಟೆಲ್ ಉದ್ಯಮಿ ಪುರುಷೋತ್ತಮ ಕ್ರಮಧಾರಿ ಉದ್ಘಾಟಿಸಿ ಮಾತನಾಡಿ, ಪೌರಾಣಿಕ ಹಿನ್ನೆಲೆ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಚಂಚಲ ಮನಸ್ಸು ಶಾಂತವಾಗಿ ಸಮಾಜದಲ್ಲಿ ಸೌಹಾರ್ದತೆ ಮೂಡುತ್ತದೆ. ಅಧ್ಯಾತ್ಮದಲ್ಲಿ ಮಾತ್ರ ಶಾಂತಿ, ನೆಮ್ಮದಿ ಸಾಧ್ಯ. ಇದನ್ನು ಇಂದಿನ ಮಕ್ಕಳಿಗೆ ಕಲಿಸಿಕೊಡುವ ಕೆಲಸ ಪಾಲಕರ ಮಾಡಬೇಕು ಎಂದು ಹೇಳಿದರು.

ಇಂದಿನ ಆಧುನಿಕ ಕಾಲದಲ್ಲಿ ನಮ್ಮತನ ಮರೆಯುತ್ತಿದ್ದೇವೆ. ವಿದೇಶಿ ವ್ಯಾಮೋಹಕ್ಕೆ ಒಳಗಾಗಿ ಭಾರತೀಯ ಸಂಸ್ಕೃತಿಯಿಂದ ವಿಮುಖ ಆಗುತ್ತಿರುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ನಮ್ಮ ಬದುಕಿನ ಅವಿಭಾಜ್ಯ ಅಂಗಗಳಂತಾಗಿರುವ ಕಲೆ, ಸಾಹಿತ್ಯ, ಸಂಸ್ಕೃತಿ, ಭರತನಾಟ್ಯ, ಕಥಾ ಕೀರ್ತನೆ, ನಾಟಕ ಮುಂತಾದ ಕಲೆಗಳನ್ನು ಉಳಿಸಿ ಬೆಳೆಸುವ ಕೆಲಸ ಇಂದಿನ ಯುವಕರು ಮಾಡಬೇಕು ಎಂದು ಸಲಹೆ ನೀಡಿದರು.

ದಕ್ಷಿಣ ಕರಾವಳಿ ಕನ್ನಡ ಸಂಘದ ಉಪಾಧ್ಯಕ್ಷ ಪ್ರೊ.ಪಿ.ಎನ್. ದಿವಾಕರ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದಶರ್ಿ ರಾಜೇಶರಾವ್, ಪ್ರಮುಖರಾದ ರಾಮಕೃಷ್ಣ ಸಾಳೆ, ರೇವಣಸಿದ್ದಪ್ಪ ಜಲಾದೆ, ಪ್ರೊ.ದೇವೇಂದ್ರ ಕಮಲ, ಪ್ರೊ.ಎಸ್.ಬಿ. ಸಜ್ಜನಶೆಟ್ಟಿ, ಕೆ.ಗುರುಮೂತರ್ಿ, ಬಸವರಾಜ ಸ್ವಾಮಿ, ಉದಯಶೆಟ್ಟಿ, ದಯಾನಂದ ಶೆಟ್ಟಿ, ರಘುರಾಮ ಉಪಾಧ್ಯ, ರವಿಚಂದ್ರ ಮೂತರ್ಿ, ಓಂಪ್ರಕಾಶ ಧಡ್ಡೆ, ರಾಘವೇಂದ್ರ ಅಡಿಗ, ಉಮಾಕಾಂತ ಮೀಸೆ, ಬಸಯ್ಯ ಸ್ವಾಮಿ, ಉತ್ತಮ ಶೆಟ್ಟಿ, ಸತೀಶ ಕೋಟ್ಯಾನ್ ಇತರರಿದ್ದರು.

ನಾಟ್ಯಶ್ರೀ ನೃತ್ಯಾಲಯ ಹಾಗೂ ನೂಪುರ್ ನೃತ್ಯ ಅಕಾಡೆಮಿಯ ಮಕ್ಕಳು ಭರತನಾಟ್ಯ ಸೇರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಕೆ.ಸತ್ಯಮೂತರ್ಿ ನಿರೂಪಣೆ ಮಾಡಿದರು. ಪ್ರಭಾಕರ ಎ.ಎಸ್. ವಂದಿಸಿದರು.

ಮಂಗಳೂರಿನ ಬಹುಮುಖ ಪ್ರತಿಭೆ ಕಲಾ ಸಾರಥಿ ತೋನ್ಸೆ ಪುಷ್ಕಳಕುಮಾರ್ ನೇತೃತ್ವದಲ್ಲಿ ಶಿವಲೀಲೆ ಎಂಬ ಸುಂದರ ಪೌರಾಣಿಕ ಕಥಾ ಭಾಗವನ್ನೊಳಗೊಂಡ ಹರಿಕಥಾ ಕೀರ್ತನೆ ನಡೆಯಿತು. ಎರಡು ಗಂಟೆ ನಡೆದ ಶಿವ ಪಾರ್ವತಿಯ ಕಲ್ಯಾಣ ಮಹೋತ್ಸವ ಹಿನ್ನೆಲೆಯುಳ್ಳ ಕಥಾ ಭಾಗವನ್ನು ಉಪ ಕಥೆ ಹಾಗೂ ಹಾಸ್ಯಕಥೆ ಮೂಲಕ ಹೇಳಿ ನೆರೆದ ಕಲಾಭಿಮಾನಿಗಳನ್ನು ರಂಜಿಸುವ ಜತೆಗೆ ಚಿಂತನೆಗೆ ಹಚ್ಚಿತು.

Leave a Reply

Your email address will not be published. Required fields are marked *

Back To Top