Wednesday, 19th September 2018  

Vijayavani

ಆಸ್ಪತ್ರೆಯಿಂದ ಸಚಿವ ಡಿ.ಕೆ. ಶಿವಕುಮಾರ್​​ ಡಿಸ್ಚಾರ್ಜ್ - ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ - ಎಟಿಎಂ ಆರೋಪಕ್ಕೆ ಉತ್ತರಿಸ್ತಾರಾ?        ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ 600 ಕೋಟಿ ಆಗಿದ್ಯಂತೆ ಡೆಪಾಸಿಟ್ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಇಡಿ ಪ್ರಕರಣದಲ್ಲಿ ಡಿಕೆಶಿ ಬಂಧನ ಖಚಿತ - ಅರೆಸ್ಟ್‌ ಬೆನ್ನಲ್ಲೇ ಮೈತ್ರಿ ಸರ್ಕಾರ ಖತಂ - ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಭವಿಷ್ಯ        ಬೆಂಗ್ಳೂರು ರಸ್ತೆ ಗುಂಡಿಗೆ ಹೈಕೋರ್ಟ್ ಗರಂ - ಬೆಳಗ್ಗೆಯೊಳಗೆ ಗುಂಡಿ ಮುಚ್ಚಿಸಿ - ಕೆಲ್ಸ ಮಾಡದಿದ್ರೆ ಬಿಬಿಎಂಪಿ ಬಂದ್ ಅಂದ್ರು ಸಿಜೆ        ನವಾಜ್​​ ಷರೀಫ್​ಗೆ ರಿಲೀಫ್ - ಜೈಲಿನಿಂದ ಪಾಕ್ ಮಾಜಿ ಪ್ರಧಾನಿ, ಪುತ್ರಿ ಬಿಡುಗಡೆ - ಇಸ್ಲಾಮಾಬಾದ್ ಹೈಕೋರ್ಟ್ ಆದೇಶ        ದುಬೈನಲ್ಲಿ ಏಷ್ಯಾಕಪ್ ಹಣಾಹಣಿ - ಹೈವೋಲ್ಟೇಜ್ ಮ್ಯಾಚ್​ಗೆ ಬದ್ಧ ವೈರಿಗಳು ಸಜ್ಜು - ಟಾಗ್‌ಗೆದ್ದ ಪಾಕ್‌ ಬ್ಯಾಟಿಂಗ್‌ ಆಯ್ಕೆ       
Breaking News

ಸಸ್ಯ ಸಂತೆ ಯಶಸ್ವಿ

Thursday, 12.07.2018, 10:40 PM       No Comments

ಬೀದರ್: ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ತೋಟಗಾರಿಕೆ ಮಹಾವಿದ್ಯಾಲಯದ ವಿಸ್ತರಣಾ ಶಿಕ್ಷಣ ಘಟಕದಿಂದ ಗುರುವಾರ ಇಲ್ಲಿನ ತೋಟಗಾರಿಕೆ ಕಾಲೇಜಿನಲ್ಲಿ ಆಯೋಜಿಸಿದ ಸಸ್ಯ ಸಂತೆ ಸಾರ್ವಜನಿಕರು, ರೈತರನ್ನು ಆಕಷರ್ಿಸಿತು.

ತೋಟಗಾರಿಕೆ ಹಾಗೂ ಕೈ ತೋಟದಲ್ಲಿ ಆಸಕ್ತಿ ಹೊಂದಿರುವ ರೈತರಿಗೆ, ಸಾರ್ವಜನಿಕರಿಗೆ ಸಸ್ಯ ಸಂತೆ ಸೆಳೆಯುವಲ್ಲಿ ಯಶಸ್ವಿಯಾಯಿತು. ಮನೆಯಲ್ಲಿ ಒಂದಿಷ್ಟು ಜಾಗವಿದ್ದರೆ ಅಥವಾ ಮನೆ ಛಾವಣಿ ಮೇಲೆ ಯಾವ ರೀತಿ ತಾರಸಿ/ಕೈ ತೋಟ ಮಸ್ತ್ ಮಾಡಿ ಸಾಕಷ್ಟು ತರಕಾರಿ, ವಿವಿಧ ಹಣ್ಣು, ಹೂವುಗಳನ್ನು ಹೇಗೆ ಪಡೆಯಲು ಸಾಧ್ಯ ಎಂಬುದನ್ನು ತೋರಿಸಿಕೊಡಲಾಯಿತು.

ಮಾವು, ನಿಂಬೆಕಾಯಿ ಸೀತಾಫಲ, ಪೇರಲ(ಜಾಪಳಕಾಯಿ), ಹುಣಸೆ, ನುಗ್ಗೆ, ಕರಿಬೇವು, ಗುಲಾಬಿ, ಚೆಂಡು ಹೂ, ಸೇವಂತಿ ಹಾಗೂ ವಿವಿಧ ಜೈವಿಕ ಗೊಬ್ಬರ, ಮಾವು ಸ್ಪೆಷಲ್, ತಾರಸಿ/ಕೈತೋಟದ ಕಿಟ್ಗಳು ಮತ್ತು ತಾರಸಿ ಕೃಷಿಯ ಪ್ರಾತ್ಯಕ್ಷಿಕೆಗಳು ಸಭಿಕರ ಗಮನ ಸೆಳೆದವು. ವಿಸ್ತರಣಾ ಘಟಕದ ಪ್ರಮುಖರು, ತೋಟಗಾರಿಕೆ ತಜ್ಞರು ಮತ್ತು ವಿದ್ಯಾಥರ್ಿಗಳು ಸೂಕ್ತ ಮಾಹಿತಿ ಕೊಡುವ ಮೂಲಕ ತೋಟಗಾರಿಕೆ ಮಹತ್ವ ತಿಳಿಸಿಕೊಟ್ಟರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆರ್. ಸೆಲ್ವಮಣಿ ಸಸ್ಯ ಸಂತೆಗೆ ಚಾಲನೆ ನೀಡಿ ಮಾತನಾಡಿ, ತೋಟಗಾರಿಕೆ ರೈತರಿಗೆ ಸಾಕಷ್ಟು ಆದಾಯ ತರುವಂಥದ್ದಾಗಿದೆ. ಗಿಡಗಳನ್ನು ಸಹ ಬೆಳೆಸುವುದರಿಂದ ರೈತರು ಲಕ್ಷಾಂತರ ರೂ. ಆದಾಯ ಗಳಿಸಲು ಸಾಧ್ಯವಿದೆ. ತೋಟಗಾರಿಕೆ ಮತ್ತು ಅರಣ್ಯ ಇಲಾಖೆಯಲ್ಲಿ ನಾನಾ ತಳಿಗಳ ವೈವಿಧ್ಯಮಯ ಸಸಿಗಳಿದ್ದು, ಜನತೆ ಸದುಪಯೋಗ ಪಡೆಯಬೇಕು ಎಂದು ಕೋರಿದರು.

ಸಾಮಾಜಿಕ ಅರಣ್ಯ ವಿಭಾಗದಿಂದ ಹೆಬ್ಬೇವು, ಶ್ರೀಗಂಧ, ರಕ್ತ ಚಂದನದಂಥ ಗಿಡಗಳು, ತೋಟಗಾರಿಕೆ ಇಲಾಖೆಯಲ್ಲಿ ಮಾವು ಸೇರಿ ಅನೇಕ ತೋಟಗಾರಿಕೆ ಗಿಡಗಳು ಲಭ್ಯವಿವೆ. ಕೃಷಿಕರು ಸಾಂಪ್ರದಾಯಿಕ ಕೃಷಿ ಜತೆಗೆ ತೋಟಗಾರಿಕೆಯತ್ತ ಚಿತ್ತ ಹರಿಸಿದರೆ ಆಥರ್ಿಕ ಸ್ಥಿತಿ ಸದೃಢಗೊಳಿಸಿಕೊಳ್ಳಬಹುದು. ಕಮ್ಮಿ ಪ್ರದೇಶದಲ್ಲಿ ಸಹ ಹೆಚ್ಚಿನ ಲಾಭ ತಂದುಕೊಡುವ ಕೆಲಸ ತೋಟಗಾರಿಕೆ ಮಾಡುತ್ತದೆ ಎಂದು ಹೇಳಿದರು.

ತೋಟಗಾರಿಕೆ ಕಾಲೇಜಿನ ಡೀನ್ ಡಾ.ರವೀಂದ್ರ ಮೂಲಗೆ ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕೆ ಇಲಾಖೆ ಉಪ ನಿದರ್ೇಶಕ ಡಾ.ಮಲ್ಲಿಕಾಜರ್ುನ ಬಾವುಗೆ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರವಿ ದೇಶಮುಖ, ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ.ಸುನೀಲ ಕುಲಕಣರ್ಿ, ಕೃಷಿ ಇಲಾಖೆ ಉಪ ನಿದರ್ೇಶಕ ಸೋಮಶೇಖರ ಬಿರಾದಾರ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ಡಾ.ಎನ್. ಶ್ರೀನಿವಾಸ, ಡಾ.ಅಶೋಕ ಸೂರ್ಯವಂಶಿ ಇತರರಿದ್ದರು

Leave a Reply

Your email address will not be published. Required fields are marked *

Back To Top