Friday, 21st September 2018  

Vijayavani

ಸಂಕಷ್ಟ ತಂದ ದಂಗೆ ಹೇಳಿಕೆ - ಬಿಜೆಪಿ ನಿಯೋಗದಿಂದ ರಾಜ್ಯಪಾಲರಿಗೆ ದೂರು - ರಾಷ್ಟ್ರಪತಿಗಳಿಗೆ ಮಾಹಿತಿ ರವಾನೆ ಸಾಧ್ಯತೆ        ಸಿಎಂ ಬೇಜವಾಬ್ಧಾರಿ ಹೇಳಿಕೆಗೆ ರಾಜ್ಯಾದ್ಯಂತ ಖಂಡನೆ - ಬಿಜೆಪಿ ಕಾರ್ಯಕರ್ತರ ಪ್ರೊಟೆಸ್ಟ್​ - ಬಾಗಲಕೋಟೆಯಲ್ಲಿ ಬ್ಯಾನರ್​ ದಹನ        ಮಲೆನಾಡಲ್ಲಿ ಪ್ರವಾಹದ ಬೆನ್ನಲ್ಲೇ ಮತ್ತೊಂದು ಬರೆ - ನೆರೆ ಬಳಿಕ ಬತ್ತುತ್ತಿವೆ ನದಿಗಳು - ಆತಂಕದಲ್ಲಿ ಚಿಕ್ಕಮಗಳೂರು ಜನತೆ        ಶತಮಾನದ ಆಸ್ಪತ್ರೆಗೆ ಸರ್ಕಾರದ ಬೀಗ - ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಜಾಗ - ಉಡುಪಿಯಲ್ಲಿ ಉಚಿತ ಚಿಕಿತ್ಸೆ ಇನ್ನು ಮರೀಚಿಕೆ..?        ಮೈಸೂರಲ್ಲಿ ನಾಡಹಬ್ಬಕ್ಕೆ ತಯಾರಿ - ಮಾವುತರಿಗೆ ಜಿಲ್ಲಾಡಳಿತದ ಭೂರಿ ಭೋಜನ - ಕೇರಂ ಆಡಿ ಸಂತಸಪಟ್ಟ ಕಾವಾಡಿಗರು        ಹುಬ್ಬಳ್ಳಿಯಲ್ಲಿ ಅಷ್ಟವಿನಾಯಕ ಸ್ಪರ್ಧೆ - ಅಲಂಕಾರದಲ್ಲಿ ಹಿರೇಪೇಟೆಯ ವಿನಾಯಕ ಪ್ರಥಮ- ಗಾಂಧಿ ಚೌಕ್ ಗಣಪ ಉತ್ತಮ ವಿಗ್ರಹ       
Breaking News

ನೀಟ್ನಲ್ಲಿ ಶಾಹೀನ್ಗೆ 342ನೇ ರ್ಯಾಂಕ್

Monday, 04.06.2018, 7:10 PM       No Comments

ಬೀದರ್: ಸಿಇಟಿ ಪಶು ವೈದ್ಯಕೀಯದಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿದ ಶಾಹೀನ್ ಕಾಲೇಜಿನ ವಿದ್ಯಾಥರ್ಿ ವಿನೀತ್ ಮೇಗೂರೆ, ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ನಲ್ಲೂ 342ನೇ ರ್ಯಾಂಕ್ ಗಳಿಸಿ ಸಾಧನೆ ಮೆರೆದಿದ್ದಾನೆ.
ಪಶು ವೈದ್ಯಕೀಯದಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ವಿನೀತ್ಗೆ ವೆಟರ್ನರಿ ಪ್ರವೇಶದ ಆಸಕ್ತಿ ಹೊಂದಿರಲಿಲ್ಲ. ಬದಲಿಗೆ ವೈದ್ಯರಾಗುವ ಕನಸಿದೆ. ಈಗ ನೀಟ್ನಲ್ಲಿ 634 ಅಂಕ ಗಳಿಸುವ ಮೂಲಕ 342ನೇ ರ್ಯಾಂಕ್ ಪಡೆದಿದ್ದಾರೆ. ಇದರೊಂದಿಗೆ ದೇಶದ ಅತ್ಯುತ್ತಮ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರವೇಶವಕಾಶ ಸಿಗಲಿದೆ.
ಶಾಹೀನ್ ಕಾಲೇಜಿಗೆ 1000 ಒಳಗೆ ಎರಡು ರ್ಯಾಂಕ್ ಬಂದಿವೆ. ವಿನೀತ್ ಮೇಗೂರೆ 342, ಅಶುತೋಷ ಮಿಶ್ರಾ 622ನೇ ರ್ಯಾಂಕ್ ಗಳಿಸಿ ಗಮನ ಸೆಳೆದಿದ್ದಾರೆ. ಆಯೇಶಾ ತಸ್ಕಿನ್ 1926, ಸುಮಯ್ಯ ಬೇಗಂ 3116, ಆದಿಲ್ ಹುಸೇನ್ 3233, ವಾಹೀದ್ ಅಬ್ದುಲ್ಲಾ 3295, ಗುರುರಾಜ ಕಂದಗೂಳ 4621, ಶೇಖ ಮಹ್ಮದ್ ಆದಿಲ್ 4718, ಅಬ್ದುಲ್ ಮುಸ್ವರ್ 4800 ಹಾಗೂ ನಂದಿನಿ ಚವ್ಹಾಣ್ 7243ನೇ ರ್ಯಾಂಕ್ ಪಡೆದಿದ್ದಾರೆ.
ಸ್ಪಧರ್ಾತ್ಮಕ ಶಿಕ್ಷಣದ ಫಲವಾಗಿ ನೀಟ್ ಪರೀಕ್ಷೆಯಲ್ಲಿ ಸತತ ಮೂರನೇ ವರ್ಷವೂ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ ದೊರಕಿದೆ. ಕಾಲೇಜು ಪ್ರತಿವರ್ಷ ತನ್ನ ದಾಖಲೆ ಉತ್ತಮಪಡಿಸಿಕೊಳ್ಳುತ್ತಿದೆ. ನೀಟ್ ಸಾಧನೆಯಿಂದಾಗಿ ರಾಜ್ಯ ಹಾಗೂ ರಾಷ್ಟ್ರದ ಜನ ಹಿಂದುಳಿದ ಬೀದರ್ ಜಿಲ್ಲೆಯತ್ತ ನೋಡುವಂತಾಗಿದೆ. ಇದು ಕಾಲೇಜು ಹಾಗೂ ಜಿಲ್ಲೆಗೆ ಹೆಮ್ಮೆ ಸಂಗತಿ ಎಂದು ಶಾಹೀನ್ ಶಿಕ್ಷಣ ಸಂಸ್ಥೆ ಕಾರ್ಯದಶರ್ಿ ಡಾ.ಅಬ್ದುಲ್ ಖದೀರ್ ತಿಳಿಸಿದ್ದಾರೆ.
ವೈದ್ಯರಾಗಬೇಕೆಂಬ ಜಿಲ್ಲೆಯ ಪ್ರತಿಭಾವಂತ ವಿದ್ಯಾಥರ್ಿಗಳ ಕನಸು ನನಸಾಗಿಸುವಲ್ಲಿ ಕಾಲೇಜು ಶ್ರಮಿಸುತ್ತಿದೆ. ಈ ಸಲ ಕಾಲೇಜಿನ 300 ವಿದ್ಯಾಥರ್ಿಗಳಿಗೆ ಸಕರ್ಾರಿ ಕೋಟಾದಡಿ ಉಚಿತ ವೈದ್ಯಕೀಯ ಸೀಟು ದೊರೆಯುವ ನಿರೀಕ್ಷೆ ಇದೆ. ಕನರ್ಾಟಕದ ಉಚಿತ ವೈದ್ಯಕೀಯ ಸೀಟುಗಳಲ್ಲಿ ಕಾಲೇಜು ಶೇ.7 ಪಡೆಯಲಿದೆ. ಕಳೆದ ವರ್ಷ ಕಾಲೇಜಿನ 201 ವಿದ್ಯಾಥರ್ಿಗಳು ಉಚಿತ ವೈದ್ಯಕೀಯ ಸೀಟು ಪಡೆದಿದ್ದರು ಎಂದು ಖದೀರ್ ಹೇಳಿದ್ದಾರೆ.

ಆಡಳಿತ ಮಂಡಳಿ ಮಾರ್ಗದರ್ಶನ, ಪರಿಣತರ ತರಬೇತಿ, ಉಪನ್ಯಾಸಕರು ಮತ್ತು ವಿದ್ಯಾಥರ್ಿಗಳ ಪರಿಶ್ರಮ ಹಾಗೂ ಪಾಲಕರ ಸಹಕಾರದಿಂದ ನೀಟ್ನಲ್ಲಿ ಒಳ್ಳೆಯ ಫಲಿತಾಂಶ ಬರುತ್ತಿದೆ. ಕಾಲೇಜಿನ ನೀಟ್ ತರಬೇತಿ ವಿಧಾನ, ವೇಳಾಪಟ್ಟಿ ಹಾಗೂ ಸಮಯ ಪರಿಪಾಲನೆ ಈ ಫಲಿತಾಂಶದಲ್ಲಿ ಬಹು ಮುಖ್ಯ ಪಾತ್ರ ವಹಿಸಿದೆ.
| ಡಾ.ಅಬ್ದುಲ್ ಖದೀರ್
ಶಾಹೀನ್ ಸಂಸ್ಥೆ ಕಾರ್ಯದಶಿ

Leave a Reply

Your email address will not be published. Required fields are marked *

Back To Top