Monday, 25th September 2017  

Vijayavani

1. ಸಿಲಿಕಾನ್​ ಸಿಟಿಯಲ್ಲಿ ಮತ್ತೆ ಅಬ್ಬರಿಸಿದ ವರುಣ- ಕೆರೆಯಂತಾಗಿದ್ದವು ಅಂಡರ್​ಪಾಸ್​- ಮೈಸೂರು ಬ್ಯಾಂಕ್​ ಸರ್ಕಲ್​ನಲ್ಲಿ ಪಲ್ಟಿಯಾಯ್ತು ವಾಹನ 2. ಇಂದು ದೀನ್​ ದಯಾಳ್​​ ಜನುಮ ದಿನ- ಲೋಕಾರ್ಪಣೆಗೊಳ್ಳಲಿದೆ ವಿದ್ಯುತ್​ ಭವನ- ಕುಸಿದ ಅರ್ಥವ್ಯವಸ್ಥೆಗೆ ಮೋದಿ ನೀಡ್ತಾರಾ ಟಾನಿಕ್​ 3. ಬಾರ್ಡರ್​ ವಿಸಿಟ್​ಗೆ ಹೊರಟ ಹೋಮ್​ ಮಿನಿಸ್ಟರ್​- ಸೆ.28 ರಿಂದ 4 ದಿನಗಳ ಪ್ಲಾನ್​- ಡೋಕ್ಲಾಂ ಪ್ರದೇಶಕ್ಕೆ ಮೊದಲ ಭೇಟಿ 4. ಜರ್ಮನಿ ಸಂಸತ್ತಿನ ಚುನಾವಣೋತ್ತರ ಸಮೀಕ್ಷೆ- ಮಾರ್ಕೆಲ್​ ಮತ್ತೆ ಚಾನ್ಸಲರ್​ ಆಗೋ ಸಾಧ್ಯತೆ- ಅಲ್ಟರ್​ನೇಟಿವ್​ ಜರ್ಮನಿಗಿಲ್ಲ ಮನ್ನಣೆ 5. 3ನೇ ಪಂದ್ಯದಲ್ಲೂ ಕಾಂಗರೂ ಪಡೆ ಉಡೀಸ್‌- ರೋಹಿತ್, ಪಾಂಡ್ಯ ಆಟಕ್ಕೆ ಆಸೀಸ್‌ ಪೀಸ್‌ ಪೀಸ್‌- ಟೀಂ ಇಂಡಿಯಾ ಪಾಲಾಯ್ತು ಸಿರೀಸ್‌
Breaking News :

ನಿರ್ಮಾಣ ಪೂರ್ಣಗೊಂಡಿಲ್ಲ ಆಗ್ಲೇ ಬೀದರ್​ನ BRIMS ಆಸ್ಪತ್ರೆ ಉದ್ಘಾಟನೆ

Thursday, 17.08.2017, 9:04 AM       No Comments

ಬೆಂಗಳೂರು: ವಿಜಯವಾಣಿ- ದಿಗ್ವಿಜಯ ನ್ಯೂಸ್ ಸಾದರಪಡಿಸುವ ಗುರುವಾರ ಬೆಳಗಿನ ಮುಖ್ಯಾಂಶಗಳು ಹೀಗಿವೆ:

1. ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೌಂಟ್‌ಡೌನ್‌- ಇಂದು ಹೈಕಮಾಂಡ್‌ನಿಂದ ಮುಹೂರ್ತ ಫಿಕ್ಸ್- ಮೂರರಲ್ಲಿ ಗೃಹ ಖಾತೆಯ ಮೇಲೆ ಡಿಕೆಶಿ ಕಣ್ಣು..?

2. ದಿಲ್ಲಿಯಲ್ಲಿ ಜೆಡಿಎಸ್‌ ರೆಬೆಲ್ ಶಾಸಕರು- ಕಾಂಗ್ರೆಸ್‌ ಸೇರ್ಪಡೆಗೆ ಹೈಕಮಾಂಡ್‌ನಿಂದ ಇಂಟರ್‌ವ್ಯೂ- ಇತ್ತ ಸ್ಪೀಕರ್‌ಗೆ ಮಂಡ್ಯ ಜೆಡಿಯು ದೂರು

3. ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ- ಲಾರಿ, ಆಟೋ ಮುಖಾಮುಖಿಗೆ ನಾಲ್ವರ ಸಾವು- ಅಪಘಾತದ ಬಳಿಕ ಲಾರಿ ಬಿಟ್ಟು ಚಾಲಕ ಪರಾರಿ

4. ವಿಶ್ವವಿಖ್ಯಾತ ಮೈಸೂರು ದಸರಾಗೆ ಭರದ ಸಿದ್ಧತೆ- ಅಂಬಾರಿ ಗಜಪಡೆ ಅಂಬಾವಿಲಾಸ ಅರಮನೆ ಪ್ರವೇಶ- ಅರ್ಜುನ ಟೀಂಗೆ ಸ್ವಾಗತಿಸಲು ಸಜ್ಜು

5. ಕೂಸು ಹುಟ್ಟೋ ಮುನ್ನ ಕುಲಾವಿ ಹೊಲಿಸಿದ ಬೀದರ್ ಜಿಲ್ಲಾಡಳಿತ- ನಿರ್ಮಾಣ ಹಂತದ ಬೀಮ್ಸ್ ಆಸ್ಪತ್ರೆ ಕಟ್ಟಡ ತರಾತುರಿ ಉದ್ಘಾಟನೆ- ರಿಯಾಲಿಟಿ ಚೆಕ್‌ನಲ್ಲಿ ಸತ್ಯ ಬಯಲು

ಬೀದರ್‌: ಬೀದರ್​ ಜಿಲ್ಲೆಯ ಜನತೆ ನಿರೀಕ್ಷೆ ಇಟ್ಟುಕೊಂಡಿರೋ ಬ್ರಿಮ್ಸ್‌ ಆಸ್ಪತ್ರೆಗೆ ಚಾಲನೆಯೇನೋ ಸಿಕ್ಕದೆ. ಆದರೆ ಇಂದಿನವರೆಗೂ ಆಸ್ಪತ್ರೆಯಲ್ಲಿ ಕಾಮಗಾರಿಗಳು ನಡೆಯುತ್ತಲೇ ಇವೆಯೇ ಹೊರತು ರೋಗಿಗಳಿಗೆ ಚಿಕಿತ್ಸೆ ಸಿಗ್ತಿಲ್ಲ.

ಅಸಲಿಗೆ 450 ಹಾಸಿಗೆಯ ನೂತನ ಬ್ರಿಮ್ಸ್‌ ಆಸ್ಪತ್ರೆಯನ್ನ 130 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಬಿಜೆಪಿ ವಿರೋಧದ ನಡುವೆಯೇ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್‌ ಖಂಡ್ರೆ, ಜಿಲ್ಲಾಡಳಿತ ಒಂದಾಗಿ ಸಿಎಂ ಸಿದ್ದರಾಮಯ್ಯರಿಂದ ಉದ್ಘಾಟನಾ ಭಾಗ್ಯ ಕಲ್ಪಿಸಿಕೊಟ್ಟಿದ್ದಾರೆ.

ಆದರೆ, ಕಟ್ಟಡದ ಮೂರು ಅಂತಸ್ತಿನಲ್ಲಿ ಬಹಳಷ್ಟು ಕಾಮಗಾರಿ ಬಾಕಿ ಉಳಿದಿದೆ. ಇದೆಲ್ಲ ಪೂರ್ಣಗೊಳ್ಳಲು ಕನಿಷ್ಠ 6 ತಿಂಗಳು ಬೇಕಾಗುತ್ತೆ ಅಂತಾ ಸ್ವತಃ ಬ್ರಿಮ್ಸ್‌ ನಿರ್ದೇಶಕರು ಹಾಗೂ ಆಸ್ಪತ್ರೆ ಮುಖ್ಯಸ್ಥರೇ ಒಪ್ಪಿಕೊಳ್ತಾರೆ. ಅಷ್ಟೇ ಅಲ್ಲದೇ ಆಸ್ಪತ್ರೆಯ ನೂತನ ಕಟ್ಟಡದಲ್ಲಿ ವಿದ್ಯುತ್‌ ಸಂಪರ್ಕವೇ ಇಲ್ಲ. ಉಳಿದಂತೆ ಫಾಯರ್ ವ್ಯವಸ್ಥೆ, ಪೈಪಲೈನ್ ವ್ಯವಸ್ಥೆಯನ್ನೂ ಮಾಡಬೇಕಿದೆ.

ಗುತ್ತಿಗೆದಾರರಿಂದ ಹಸ್ತಾಂತರವಾಗದ, ಸಾಕಷ್ಟು ಕಾಮಗಾರಿಗಳು ಬಾಕಿ ಇರೋವಾಗಲೇ ತರಾತುರಿಯಲ್ಲಿ ಉದ್ಘಾಟನೆ ಮಾಡಿಸಿದ್ದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top