Sunday, 24th June 2018  

Vijayavani

ಆಪ್ತರ ಜತೆ ಮಾಜಿ ಸಿಎಂ ಸಭೆ ಹಿನ್ನೆಲೆ - ಸಿದ್ದರಾಮಯ್ಯ ಭೇಟಿಗೆ ತೆರಳಿದ ಪರಂ - ರಾಜಕೀಯ ವಿಚಾರಗಳ ಬಗ್ಗೆ ನಾಯಕರ ಚರ್ಚೆ ಸಾಧ್ಯತೆ        ಪ್ರಕೃತಿ ಚಿಕಿತ್ಸಾಲಯದಿಂದ ಹೊರ ಬಂದ ಸಿದ್ದು - ಅಭಿಮಾನಿಗಳ ಜತೆ ಮಾಜಿ ಸಿಎಂ ಚರ್ಚೆ - ಕೈ ಕಾರ್ಯಕರ್ತರ ಜತೆ ಸೆಲ್ಫಿಗೆ ಫೋಸ್​​        ಶಿವಮೊಗ್ಗದಲ್ಲಿ ಮತ್ತೆ ಝಳಪಿಸಿದ ಮಾರಕಾಸ್ತ್ರ - ರೌಡಿ ಶೀಟರ್​​​ ಹಬೀಬ್​ ಬರ್ಬರ ಹತ್ಯೆ - ತುಂಗಾನಗರ ಠಾಣೆಯಲ್ಲಿ ಪ್ರಕರಣ        ಖಾತೆ ಹಂಚಿಕೆಯಾಯ್ತು, ಈಗ ಬಂಗಲೆ ಸರದಿ - ಒಂದೊಂದು ಬಂಗಲೆಗೆ ಮೂವರ ಪೈಪೋಟಿ - ಸಿಎಂ ಕುಮಾರಸ್ವಾಮಿಗೆ ಬಂಗಲೆ ಕೊಡೋದೇ ಚಿಂತೆ        ಹಿಟ್​​ಲಿಸ್ಟ್​​ನಲ್ಲಿದ್ದ 20 ಉಗ್ರರ ಪೈಕಿ ಇಬ್ಬರು ಫಿನಿಶ್ - ಕುಲ್ಗಾಮದಲ್ಲಿ ಇಬ್ಬರು ಎಲ್​​ಇಟಿ ಉಗ್ರರು ಉಡೀಸ್​ - ಶಸ್ತ್ರ ಸಹಿತ ಒಬ್ಬ ಟೆರರ್​ ಸರೆಂಡರ್        ಮನೆಗಾಗಿ ಕಣ್ಣೀರಿಟ್ಟ ವೃದ್ಧೆಗೆ ಶಾಸಕರ ಸಹಾಯ - 20 ಸಾವಿರ ಹಣ ನೀಡಿದ ಡಾ.ರಂಗನಾಥ - ದಿಗ್ವಿಜಯ ನ್ಯೂಸ್​ ವರದಿಗೆ ಸ್ಪಂದಿಸಿದ ಕುಣಿಗಲ್​ ಶಾಸಕ       
Breaking News

ಸಿದ್ದು ಇಚ್ಛಿಸಿದ್ರೆ 2 ನಿಮಿಷದಲ್ಲೇ ಸಕರ್ಾರ ಪತನ !

Saturday, 09.06.2018, 7:44 PM       No Comments

ಬೀದರ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಯಾರೂ ಕಡೆಗಣಿಸಲು, ಮೂಲೆಗುಂಪು ಮಾಡಲು ಸಾಧ್ಯವಿಲ್ಲ. ಅವರು ಮನಸ್ಸು ಮಾಡಿದರೆ ರಾಜ್ಯದ ಸಮ್ಮಿಶ್ರ ಸಕರ್ಾರವನ್ನು ಎರಡೇ ನಿಮಿಷದಲ್ಲಿ ಉರುಳಿಸಬಲ್ಲರು! ಹೀಗೆಂದು ಮೈತ್ರಿ ಸಕರ್ಾರಕ್ಕೆ ಎಚ್ಚರಿಸಿದವರು ಬಸವಕಲ್ಯಾಣ ಕಾಂಗ್ರೆಸ್ ಶಾಸಕ ಬಿ.ನಾರಾಯಣರಾವ್.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸಕರ್ಾರದಲ್ಲಿ ಸಿದ್ದರಾಮಯ್ಯ ಮತ್ತವರ ಟೀಮ್ಗೆ ಮೂಲೆಗುಂಪು ಮಾಡಲಾಗುತ್ತಿದೆಯೇ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಪ್ರಶ್ನಿಸಿದಾಗ ಕೆಂಡಮೆಂಡಾಲರಾದ ಸಿದ್ದು ಆಪ್ತರೂ ಆದ ಬಿ.ನಾರಾಯಣರಾವ್, ಕಾಂಗ್ರೆಸ್ನಲ್ಲಾಗಲಿ ಅಥವಾ ಸಮ್ಮಿಶ್ರ ಸಕರ್ಾರದಲ್ಲಾಗಲಿ ಯಾರಿಗೂ (ಯಾವ ನನ್ನ ಮಗನೂ) ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಲು ಸಾಧ್ಯವಿಲ್ಲ. ಸಿದ್ದ್ದರಾಮಯ್ಯ ಕೂದಲಿಗೂ ಧಕ್ಕೆ ತರುವುದಕ್ಕೂ ನಾವು ಬಿಡಲ್ಲ ಎಂದು ಹೂಂಕರಿಸಿದರು.

ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರು ಸಿದ್ದರಾಮಯ್ಯ ಆಪ್ತರು ಎಂಬ ಕಾರಣಕ್ಕಾಗಿಯೇ ಡಿಸಿಎಂ ಡಾ.ಪರಮೇಶ್ವರ್ ಅವರು ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ್ ಅವರಿಗೆ ಸಚಿವ ಸ್ಥಾನ ಕೊಡಿಸಿದ್ದಾರೆ ಎಂಬ ಪ್ರಶ್ನೆ ತೂರಿಬಂದಾಗ, ಅವರನ್ನು ಯಾರೂ ಕಡೆಗಣಿಸಲು ಆಗದು. ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಲು ಹೊರಟವರು ಅಥವಾ ಅಗೌರವ ತೋರುವವರೇ ಮನೆಗೆ ಹೋಗುತ್ತಾರೆ ಎಂದು ಡಾ.ಪರಮೇಶ್ವರ್ ಅವರಿಗೂ ಪರೋಕ್ಷವಾಗಿ ಟಾಂಗ್ ನೀಡಿದರು.

ಯಾವತ್ತಾದರೂ ಸಿದ್ದರಾಮಯ್ಯ ಸಿದ್ದರಾಮಯ್ಯನೇ. ಅವರು ಮನಸ್ಸು ಮಾಡಿದರೆ ಎರಡೇ ನಿಮಿಷದಲ್ಲಿ ಸಕರ್ಾರ ಉಳಿಯಲ್ಲ. ಅವರಿಗೆ ಯಾವ ಶಕ್ತಿಯಿಂದಲೂ ಮೂಲೆಗುಂಪು ಮಾಡಲಿಕ್ಕಾಗದು ಎಂದು ರೋಷಾವೇಶದಿಂದ ಹೇಳುವ ಮೂಲಕ ಮಾಧ್ಯಮದವರ ಎದುರು ಸಿದ್ದು ಪರವಾದ ಸ್ವಾಮಿನಿಷ್ಠೆ ಪ್ರದಶರ್ಿಸಿದರು.

ಸಿದ್ದರಾಮಯ್ಯ ಮೈತ್ರಿ ಸಕರ್ಾರದ ಸಮನ್ವಯ ಸಮಿತಿ ಅಧ್ಯಕ್ಷರಿದ್ದಾರೆ. ಅವರ ನೇತೃತ್ವದಲ್ಲೇ ಸಕರ್ಾರ ನಡೆಯುತ್ತದೆ. 5 ವರ್ಷ ಪೂರ್ಣವೂ ಮಾಡಲಿದೆ. ರಾಜಶೇಖರ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ನಾನು ಸ್ವಾಗತಿಸಿರುವೆ. ಅವರಿಗೆ ಖುದ್ದು ಭೇಟಿಯಾಗಿ ಹೂಗುಚ್ಛ ಸಹ ನೀಡಿ ಅಭಿನಂದಿಸಿ ಬಂದಿರುವೆ ಎಂದರು.

ಶಾಸಕ ಈಶ್ವರ ಖಂಡ್ರೆ, ರಹೀಮ್ ಖಾನ್ ಇದ್ದರು

Leave a Reply

Your email address will not be published. Required fields are marked *

Back To Top