Friday, 17th August 2018  

Vijayavani

Breaking News

ಧರ್ಮದರ್ಶಿ ಮುಖಕ್ಕೆ ರಾಸಾಯನಿಕ ಸಿಂಪಡಿಸಿ ಕಾರು, ನಗದು ದೋಚಿದ ದುಷ್ಕರ್ಮಿಗಳು

Sunday, 10.06.2018, 9:15 AM       No Comments

ತುಮಕೂರು: ದುಷ್ಕರ್ಮಿಗಳ ಗುಂಪೊಂದು ಧರ್ಮದರ್ಶಿ ಮುಖಕ್ಕೆ ರಾಸಾಯನಿಕ ಸಿಂಪಡಿಸಿ ಲಕ್ಷಾಂತರ ರೂ. ನಗದು ಹಾಗೂ ಕಾರನ್ನು ದರೋಡೆ ಮಾಡಿರುವ ಘಟನೆ ಕುಣಿಗಲ್​ ತಾಲೂಕಿನ ಬಿದನಗೆರೆಯಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.

ಶನಿಮಹಾತ್ಮ ದೇವಾಲಯದ ಧರ್ಮದರ್ಶಿಯಾಗಿರುವ ಧನಂಜಯ ಸ್ವಾಮೀಜಿ ದೇವಾಲಯದಲ್ಲಿ ಪೂಜೆ ಮುಗಿಸಿ ಕಾರಿನಲ್ಲಿ ವಾಪಸಾಗುತ್ತಿದ್ದರು. ಆರು ಜನ ದರೋಡೆಕೋರರು ದಾಳಿ ನಡೆಸಿ, ಮುಖಕ್ಕೆ ರಾಸಾಯನಿಕ ಸಿಂಪಡಿಸಿ, ಕಾರು ಹಾಗೂ 20 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ. ಇವರೆಲ್ಲ ಭಕ್ತರ ಸೋಗಿನಲ್ಲಿ ದೇಗುಲಕ್ಕೆ ಬಂದಿದ್ದರು ಎನ್ನಲಾಗಿದೆ.

ಧನಂಜಯ ಸ್ವಾಮೀಜಿಯನ್ನು ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಣಿಗಲ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Back To Top