Saturday, 18th August 2018  

Vijayavani

ಭಾರೀ ಮಳೆಗೆ ತತ್ತರಿಸಿದ ಕೇರಳದಲ್ಲಿ ಮೋದಿ ವೈಮಾನಿಕ ಸಮೀಕ್ಷೆ: ಐನೂರು ಕೋಟಿ ನೆರವು ಘೋಷಣೆ        ಕೊಡಗಿಗೆ ಮಳೆ ಸಂಕಷ್ಟ: ಹಾನಿ ಬಗ್ಗೆ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿಗೆ ಮುಖ್ಯಕಾರ್ಯದರ್ಶಿ ವರದಿ        ಕೊಡಗಿನ ಗೋಣಿಕೊಪ್ಪದಲ್ಲಿ ಮಳೆಯ ಅಬ್ಬರಕ್ಕೆ ಕುಸಿದ ಮನೆ: ನಾಲ್ಕು ಮಂದಿ ದುರ್ಮರಣ        ಚಾರ್ಮಾಡಿ ಘಾಟ್​​ನ ತಿರುವಿನಲ್ಲಿ ಕೆಟ್ಟು ನಿಂತ ವಾಹನ: ಧರ್ಮಸ್ಥಳ ಮಾರ್ಗದಲ್ಲಿ ವಿಪರೀತ ಟ್ರಾಫಿಕ್​ ಜಾಮ್        ಅರಕಲಗೂಡನಲ್ಲಿ 200 ಮನೆಗಳು ಜಲಾವೃತ: ದ್ವೀಪದಂತಾದ ರಾಮನಾಥಪುರ, ಮುಳುಗಿದ ನಿಮಿಷಾಂಭ ದೇಗುಲ       
Breaking News

ಹಿಂದು ಯುವಕರ ಮೇಲೆ ಹಲ್ಲೆ

Tuesday, 29.05.2018, 8:20 PM       No Comments

ಕೊಪ್ಪ: ಭಗವಾಧ್ವಜ ಸ್ಥಾಪನೆ ವಿಚಾರದಲ್ಲಿ ಎಂಟು ತಿಂಗಳಿಂದ ನಡೆಯುತ್ತಿದ್ದ ಶೀತಲ ಸಮರ ವಿಕೋಪಕ್ಕೆ ತಿರುಗಿ ಇಬ್ಬರು ಹಿಂದು ಯುವಕರ ಮೇಲೆ ಅನ್ಯಕೋಮಿನ ಯುವಕರ ಗುಂಪು ಅಡ್ಡಗಟ್ಟಿ ಹಲ್ಲೆ ನಡೆಸಿ ಬೆದರಿಕೆ ಹಾಕಿದ ಘಟನೆ ಸೋಮವಾರ ಸಂಜೆ ಪಟ್ಟಣದ ಲಾಲ್​ಬಹದ್ದೂರ್ ಶಾಸ್ತ್ರೀ ಕ್ರೀಡಾಂಗಣದ ಬಳಿ ನಡೆದಿದೆ.

ತೀವ್ರ ಗಾಯಗೊಂಡ ಸಣ್ಣಕೆರೆಯ ಶ್ರೀಕಾಂತ್ ಮತ್ತು ಸುದರ್ಶನ್ ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿ ಸಣ್ಣಕೆರೆಯ ತಾಜಿಲ್(19), ಅಖಿಲ್ ರೆಹಮಾನ್(23), ಹನುಮಾನ್​ನಗರದ ರಿಜ್ವಾನ್(19) ನಿಸಾರ್(23), ರಜೀಂ(19), ಜಟ್​ಪಟ್ ನಗರದ ಅಬ್ಬು(22) ಎಂಬುವರನ್ನು ಕೊಪ್ಪ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಮೇಲಿನಪೇಟೆಯ ರಿಯಾಜ್ ತಲೆಮರೆಸಿಕೊಂಡಿದ್ದಾನೆ. ಬಂಧಿತ ಆರೋಪಿಗಳನ್ನು ಮಂಗಳವಾರ ಸಂಜೆ ಕೊಪ್ಪ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.

Leave a Reply

Your email address will not be published. Required fields are marked *

Back To Top