Friday, 20th October 2017  

Vijayavani

1. ಲಿಂಗಾಯತ ಪ್ರತಿಪಾದಕರಾಗಿದ್ದಕ್ಕೆ ಕಲಬುರ್ಗಿ ಹತ್ಯೆ – ಲಿಂಗಾಯತ ವಿಚಾರ ಬರೆದಿದ್ದಕ್ಕೆ ಗೌರಿ ಲಂಕೇಶ್​ ಕೊಲೆ ಶಂಕೆ – ಬೆಂಗಳೂರಿನಲ್ಲಿ ಜಾಮದಾರ್​ ವಿವಾದಾತ್ಮಕ ಹೇಳಿಕೆ 2. ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿದಕ್ಕೆ ಮಾರಣಾಂತಿಕ ಹಲ್ಲೆ – ಮಾಜಿ ಕಾರ್ಪೊರೇಟರ್​ ರವೀಂದ್ರ ವಿರುದ್ಧ ಮಹಿಳೆ ಆರೋಪ – ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ 3. ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ – ರಥೋತ್ಸವದ ವೇಳೆ ನೂಕು ನುಗ್ಗಲು – ಭಕ್ತರ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್ 4. ಹಾಲಿವುಡ್, ಬಾಲಿವುಡ್​ ಬೇರೆ ಅಲ್ಲ – ಎರಡೂ ಕಡೆ ಲೈಂಗಿಕ ಶೋಷಣೆ ಇದ್ದೆ ಇದೆ – ಸಂದರ್ಶನದಲ್ಲಿ ಸತ್ಯ ತೆರೆದಿಟ್ಟ ಪ್ರಿಯಾಂಕ ಚೋಪ್ರಾ 5. ದೀಪಾವಳಿಗೆ ಪ್ರಧಾನಿ ತಾಯಿ ಫುಲ್ ಖುಷ್​ – ರಾಮನ ಹಾಡಿಗೆ ಸಖತ್ ಸ್ಟೆಪ್ಸ್​ – 97ರ ಹರೆಯದಲ್ಲೂ ಹೀರಾಬೆನ್​ ಜೀವನ ಪ್ರೀತಿ
Breaking News :

ಇತಿಹಾಸ ಪುಟ ಸೇರಲಿದೆ ಐತಿಹಾಸಿಕ ಬಾದಾಮಿ ಹೌಸ್​

Thursday, 12.10.2017, 7:01 PM       No Comments

ಬೆಂಗಳೂರು: ಹಡ್ಸನ್​ ವೃತ್ತದ ಬಳಿ ಬೆಂಗಳೂರು ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿರುವ ಐತಿಹಾಸಿಕ ಬಾದಾಮಿ ಹೌಸ್​ ಇನ್ನು ಕೆಲವೇ ದಿನಗಳಲ್ಲಿ ಇತಿಹಾಸದ ಪುಟಕ್ಕೆ ಸೇರಲಿದೆ.

ಅನೇಕ ವರ್ಷಗಳಿಂದ ರಾಜ್ಯ ಸರ್ಕಾರ ಮತ್ತು ಬಾದಾಮಿ ಹೌಸ್​ ಕಟ್ಟಡದ ಮಾಲೀಕರ ನಡುವೆ ನಡೆಯುತ್ತಿದ್ದ ಕಾನೂನು ಸಮರ ಅಂತ್ಯಗೊಂಡಿದೆ. ತೀರ್ಪು ಕಟ್ಟಡ ಮಾಲೀಕರ ಪರವಾಗಿ ಬಂದಿರುವ ಹಿನ್ನೆಲೆಯಲ್ಲಿ ಅವರು ಕಟ್ಟಡ ತೆರವುಗೊಳಿಸಲು ಮುಂದಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಟ್ಟಡ ತೆರವುಗೊಳಿಸುವ ಅನಿವಾರ್ಯತೆ ಎದುರಾಗಿದೆ. ಇಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮತ್ತು ವಾರ್ತಾ ಇಲಾಖೆಯ ಸಿನಿಮಾ ವಿಭಾಗದ ಕಚೇರಿಗಳಿದ್ದವು.

ಈ ಕಚೇರಿಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ. ಈಗ ಕಟ್ಟಡದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ವಾರ್ತಾ ಇಲಾಖೆಯ ಸಿನಿಮಾ ವಿಭಾಗದ ಕಚೇರಿ ಮಾತ್ರವಿದೆ. ಇವುಗಳನ್ನು ಶೀಘ್ರದಲ್ಲೇ ನಂದಿನಿ ಲೇಔಟ್​ನಲ್ಲಿರುವ ಅಮೃತೋತ್ಸವ ಭವನಕ್ಕೆ ಸ್ಥಳಾಂತರಿಸಲಾಗುತ್ತಿದೆ. ಎಲ್ಲಾ ಕಚೇರಿಗಳು ಸ್ಥಳಾಂತರವಾದ ನಂತರ ಈ ಐತಿಹಾಸಿಕ ಕಟ್ಟಡ ನೆಲಸಮಗೊಳ್ಳಲಿದೆ.

ಕಳೆದ ನಾಲ್ಕು ದಶಕಗಳಿಂದ ಬಾದಾಮಿ ಹೌಸ್​ ಕನ್ನಡ ಸಿನಿಮಾ ಚಟುವಟಿಕೆಗಳಿಗೆ ಕೇಂದ್ರ ಸ್ಥಾನವಾಗಿತ್ತು. ಇಲ್ಲಿರುವ ಪ್ರಿಯದರ್ಶಿನಿ ಚಿತ್ರ ಮಂದಿರದಲ್ಲಿ 80ರ ದಶಕದಲ್ಲಿ ಕನ್ನಡದ ಎಲ್ಲಾ ನಟರ ಚಿತ್ರಗಳ ಪ್ರದರ್ಶನ ನಡೆಯುತ್ತಿತ್ತು ಕರ್ನಾಟಕ ಚಲನಚಿತರ ಅಕಾಡೆಮಿಯ ಕೆಲಸಗಾರರು ನೆನಪಿಸಿಕೊಳ್ಳುತ್ತಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top