Thursday, 18th January 2018  

Vijayavani

ಹಿರಿಯ ನಟ ನಿರ್ದೇಶಕ ಕಾಶಿನಾಥ್ ಇನ್ನಿಲ್ಲ - ಬೆಂಗಳೂರಿನ ಶಂಕರ ಕ್ಯಾನ್ಸರ್​ ಆಸ್ಪ್ರೆಯಲ್ಲಿ ಕೊನೆಯುಸಿರು- ಕಳಚಿದ ಅನುಭವದ ಕೊಂಡಿ        ಡೈರೆಕ್ಟರ್​ ಎಪಿ ಅರ್ಜುನ್​ ಕಚೇರಿಯಲ್ಲಿ ಕಳ್ಳತನ - ಯಶ್​ ಬರ್ತಡೇ ದಿನ ಕೃತ್ಯ - ಮಾಜಿ ಕಾರು ಡ್ರೈವರ್ ವಿರುದ್ಧ ಅನುಮಾನದ ಹುತ್ತ         ಒಂಟಿ ಮಹಿಳೆಗೆ ಜಡೆ ಹಿಡಿದು ಥಳಿತ - ಕೊಪ್ಪಳ ಬಸ್​ಸ್ಟಾಪ್​ನಲ್ಲಿ ಪುರುಷರ ಅಟ್ಟಹಾಸ - ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್         ನೈಂಟಿ ಕೊಡ್ತೇವೆ ಅಂತ ಹರಕೆ ಹೊರ್ತಾರೆ ಭಕ್ತರು - ದೇವರ ಹೆಸರಲ್ಲಿ ಸಾಮೂಹಿಕ ಮದ್ಯಾರಾಧನೆ - ಕುಣಿಗಲ್‍ನ ಒಡೇಭೈರವನಿಗೆ ಬ್ರಾಂದಿ ವಿಸ್ಕಿಯೇ ನೈವೇದ್ಯ        ಕೃಷ್ಣನಗರಿಯಲ್ಲಿ ಪರ್ಯಾಯ ಸಂಭ್ರಮ - ಕೃಷ್ಣಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು - ಅದ್ಧೂರಿಯಿಂದ ಸರ್ವಜ್ಞ ಪೀಠಾರೋಹಣ       
Breaking News :

722 ಯೋಜನೆಗಳ ಮೇಲೆ ರೇರಾ ಪ್ರಾಧಿಕಾರದ ನಿಗಾ

Sunday, 14.01.2018, 5:36 PM       No Comments

ಬೆಂಗಳೂರು: ಲಕ್ಷಾಂತರ ಹಣ ಕೂಡಿಟ್ಟು ಅಥವಾ ಸಾಲ ಮಾಡಿ ಪ್ರಾಪರ್ಟಿ ಖರೀದಿಸುವ ಜನಸಾಮಾನ್ಯರ ರಕ್ಷಣೆಗೆ ರೇರಾ ಮುಂದಾಗಿದೆ. ರಾಜ್ಯದ 36 ವಸತಿ ಯೋಜನೆಗಳನ್ನು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ(ರೇರಾ) ತಿರಸ್ಕರಿಸಿದೆ. 415 ಯೋಜನೆಗಳ ದಾಖಲಾತಿ ಪರಿಶೀಲನೆ ಕೆಲಸ ನಡೆಯುತ್ತಿದ್ದು, 307 ಯೋಜನೆಗಳ ದಾಖಲೆಗಳು ದೋಷಪೂರಿತವಾಗಿರುವ ಹಿನ್ನೆಲೆಯಲ್ಲಿ ರೇರಾ ಸ್ಪಷ್ಟನೆ ಕೇಳಿದೆ.

ಪ್ರಾಪರ್ಟಿ ಖರೀದಿಗೂ ಮುನ್ನ ಯಾವೆಲ್ಲ ಯೋಜನೆಗಳು ಕಾನೂನುಬದ್ಧವಾಗಿದೆ ಎನ್ನುವುದರ ಮಾಹಿತಿಯನ್ನು ರೇರಾ ಜನರ ಮುಂದಿರಿಸಿದೆ. ಒಟ್ಟಾರೆ 1,116 ಯೋಜನೆಗಳನ್ನು ರೇರಾ ಸಿಂಧುಗೊಳಿಸಿದೆ. ಸಿಂಧು ಹಾಗೂ ಅಸಿಂಧುವಾದ ಯೋಜನೆಗಳ ಪೂರ್ಣ ವಿವರವನ್ನು ತನ್ನ ವೆಬ್​ಸೈಟ್​ನಲ್ಲಿ ರೇರಾ ಪ್ರಕಟಿಸಿದೆ.

ವೆಬ್​ಸೈಟ್​ನಲ್ಲಿರುವ ಅನುಮೋದಿತ ಯೋಜನೆ ಆಯ್ಕೆ ಮಾಡಿದಲ್ಲಿ ಈ ಎಲ್ಲ ವಿವರ ಲಭ್ಯವಾಗಲಿದೆ. ಜ.13ರವರೆಗಿನ ಮಾಹಿತಿಯಂತೆ 1,800ಕ್ಕೂ ಅಧಿಕ ಯೋಜನೆಗಳ ದಾಖಲಾತಿ ರೇರಾಗೆ ಸಲ್ಲಿಕೆಯಾಗಿವೆ. ಯೋಜನೆ ರೂಪು ರೇಷೆ, ವೆಚ್ಚ, ಪ್ರಮಾಣ ಪತ್ರಗಳು, ಅಗ್ನಿ ಸುರಕ್ಷತೆ ಪ್ರಮಾಣ ಪತ್ರ, ಜಮೀನು ಕರಾರು ಒಪ್ಪಂದ ಪತ್ರ ಸೇರಿ ಎಲ್ಲ ದಾಖಲೆಗಳನ್ನು ಆನ್​ಲೈನ್ ಮೂಲಕ ಬಿಲ್ಡರ್​ಗಳು ಸಲ್ಲಿಸಿದ್ದಾರೆ.

ಉಳಿದಂತೆ 36 ಯೋಜನೆ ರದ್ದುಗೊಂಡಿವೆ. ಪ್ರಾಧಿಕಾರದ ಈ ನಿರ್ಧಾರವನ್ನು ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣದಲ್ಲಿ, ಆ ಬಳಿಕ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ರಿಯಲ್ ಎಸ್ಟೇಟ್ ಕಾಯ್ದೆಯ ಸೆಕ್ಷನ್ 5(1)ರ ಅನ್ವಯ, ಅಸಿಂಧುಗೊಳಿಸಿರುವ ಯೋಜನೆಗಳ ಜಾಹೀರಾತು ಅಥವಾ ಮಾರಾಟ ನಡೆಸುವಂತಿಲ್ಲ. ಹೀಗಾಗಿ ಜನರು ಯೋಜನೆ ಖರೀದಿಸುವ ಮೊದಲು ವೆಬ್​ಸೈಟ್ ವೀಕ್ಷಿಸುವುದು ಸೂಕ್ತ.

ಅಂತಿಮ ನೋಟಿಸ್

ರದ್ದುಗೊಂಡು ಯೋಜನೆಗಳಿಗೆ ರೇರಾ ಅಂತಿಮ ನೋಟಿಸ್ ರವಾನಿಸಿದ್ದು, ಉತ್ತರಿಸಲು 3 ವಾರದ ಗಡುವು ನೀಡಲಾಗಿದೆ. ಇದನ್ನು ಮೀರಿದರೆ ಯೋಜನಾ ವೆಚ್ಚದ ಶೇ.10 ದಂಡ ಕಟ್ಟಬೇಕು. ದಂಡ ಕಟ್ಟದೇ ಇದ್ದಲ್ಲಿ ಅಂತಹವರಿಗೆ 3 ವರ್ಷದ ಬಂಧನವನ್ನೂ ಕಾನೂನು ಬದ್ಧವಾಗಿ ವಿಧಿಸಬಹುದಾಗಿದೆ.

ವೆಬ್​ಸೈಟ್ ವಿಳಾಸrera.karnataka.gov.in

Leave a Reply

Your email address will not be published. Required fields are marked *

Back To Top