Monday, 11th December 2017  

Vijayavani

1. ಜೈಲಿನ ಆಸ್ಪತ್ರೆಯಲ್ಲಿ ಬೆಳಗೆರೆಗೆ ಚಿಕಿತ್ಸೆ – ಚೇತರಿಸಿಕೊಂಡ್ರೆ ಬ್ಯಾರಕ್‌ಗೆ ರವಾನೆ – ನೆಲದ ಮೇಲೆ ಕೂರಲು ರವಿ ಪರದಾಟ 2. ಕೊತ ಕೊತ ಕುದಿಯುತ್ತಿದೆ ಕುಮಟಾ – ಉಗ್ರ ಸ್ವರೂಪ ಪಡೆದ ಹಿಂದೂ ಸಂಘಟನೆಗಳ ಪ್ರತಿಭಟನೆ – ಆಕ್ರೋಶಕ್ಕೆ ಹೊತ್ತಿ ಉರಿದ ಐಜಿಪಿ ಕಾರು 3. ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ – ಪ್ರತಿಸ್ಪರ್ಧಿ ಇಲ್ಲದ್ದಕ್ಕೆ ಯುವರಾಜನಿಗೆ ಸಾರಥ್ಯ – ದೆಹಲಿಯಲ್ಲಿ ಕಾರ್ಯಕರ್ತರ ಸಂಭ್ರಾಮಾಚರಣೆ 4. ಮಂಡ್ಯದ ಸಂತೆಬಾಚಹಳ್ಳಿ ಕ್ರಾಸ್‌ ಬಳಿ ಭೀಕರ ಅಪಘಾತ – ಟ್ಯಾಂಕರ್ ಹರಿದು ಬೈಕ್ ಸವಾರರು ಸಾವು – ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪ್ರಕರಣ 5. ಸ್ಟೀಲ್‌ ಬ್ರಿಡ್ಜ್ ಹೋಯ್ತು ಮೆಟ್ರೋ ಬಂತು – ಏರ್‌ಪೋರ್ಟ್‌ಗೆ ರೈಲು ಬಿಡಲು ಸರ್ಕಾರದ ಒಪ್ಪಿಗೆ – ಮಹತ್ವದ ಯೋಜನೆಗೆ ಕ್ಯಾಬಿನೆಟ್‌ನಲ್ಲಿ ಅಸ್ತು
Breaking News :

ಈ ಸಾವು ನ್ಯಾಯವೇ: ಪಾರ್ಕ್​ನಲ್ಲಿ ಕಬ್ಬಿಣದ ರಾಡ್​ ಬಿದ್ದು ಬಾಲಕಿ ಸಾವು

Sunday, 13.08.2017, 11:07 AM       No Comments

ಬೆಂಗಳೂರು: ಮಹದೇವಪುರ ಸಮೀಪದ ಎಂ.ವಿ.ಜೆ ಲೇಔಟ್ ಉದ್ಯಾನದಲ್ಲಿ ಉಯ್ಯಾಲೆಗಾಗಿ ಅಳವಡಿಸಿದ್ದ ಕಬ್ಬಿಣದ ರಾಡ್ ಬಿದ್ದು ಆಟವಾಡುತ್ತಿದ್ದ ಬಾಲಕಿ ಮೃತಪಟ್ಟಿದ್ದಾಳೆ.

ಮಹದೇವಪುರ ನಿವಾಸಿ ಸುಬ್ರಮಣಿ ಹಾಗೂ ವಿಜಯಾ ದಂಪತಿ ಮಗಳು ಪ್ರಿಯಾ (13) ಮೃತ ಬಾಲಕಿ. ಸ್ನೇಹಿತೆಯರೊಂದಿಗೆ ಪಾರ್ಕ್​ನಲ್ಲಿದ್ದ ಕಬ್ಬಿಣದ ಆಟಿಕೆಗಳೊಂದಿಗೆ ಆಟವಾಡುತ್ತಿದ್ದ ವೇಳೆ ಕಬ್ಬಿಣದ ರಾಡ್ ಕಳಚಿ ಬಾಲಕಿ ತಲೆ ಮೇಲೆ ಬಿದ್ದಿದೆ. ತೀವ್ರ ರಕ್ತಸ್ರಾವದೊಂದಿಗೆ ಪ್ರಿಯಾ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ ಎಂದು ಮಹದೇವಪುರ ಪೊಲೀಸರು ತಿಳಿಸಿದ್ದಾರೆ.

ಖಾಸಗಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಪ್ರಿಯಾ, ಮನೆ ಸಮೀಪದ ಉದ್ಯಾನಕ್ಕೆ ಸ್ನೇಹಿತೆ ಯರೊಂದಿಗೆ ಆಟವಾಡಲು ತೆರಳಿದ್ದಳು. ಉದ್ಯಾನವನ್ನು ನವೀಕರಣ ಮಾಡುವ ಉದ್ದೇಶದಿಂದ ಹಳೇ ಆಟದ ವಸ್ತುಗಳನ್ನು ತೆರವುಗೊಳಿಸಿ ಹೊಸ ವಸ್ತುಗಳನ್ನು ಅಳವಡಿಸಲು ಒಂದು ವಾರದ ಹಿಂದಷ್ಟೇ ಜಾರುಬಂಡೆ, ಉಯ್ಯಾಲೆ ಸೇರಿ ಇನ್ನಿತರ ಪರಿಕರಗಳನ್ನು ತಂದು ಇಡಲಾಗಿತ್ತು. ಉದ್ಯಾನ ನವೀಕರಣ ಮಾಡಬೇಕಿದ್ದರಿಂದ ಇಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿತ್ತು. ಆದರೆ, ಬಾಲಕಿಯರು ಬಲವಂತ ಮಾಡಿ ಸೆಕ್ಯೂರಿಟಿ ಗಾರ್ಡ್​ನಿಂದ ಬಾಗಿಲು ತೆಗೆಸಿ ಉದ್ಯಾನದ ಒಳಗೆ ಪ್ರವೇಶ ಮಾಡಿದ್ದಾರೆ ಎಂದು ವಿಜ್ಞಾನ ನಗರ ಪಾಲಿಕೆ ಸದಸ್ಯ ನಾಗರಾಜ್ ಹೇಳಿದ್ದಾರೆ.

ಮಹದೇವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top