More

    ತಾಲೂಕು ಕಚೇರಿಗೆ ಮುತ್ತಿಗೆ

    ಮದ್ದೂರು : ಬೆಂಗಳೂರು ದಕ್ಷಿಣ ವಿಭಾಗದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಕೆ.ಎಸ್.ಪ್ರತಿಮಾ ಹತ್ಯೆ ಅಮಾನವೀಯವಾಗಿದೆ. ತಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಪಟ್ಟಣದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.
    ವೇದಿಕೆಯ ಜಿಲ್ಲಾಧ್ಯಕ್ಷ ವಳಗೆರಹಳ್ಳಿ ವಿ.ಸಿ.ಉಮಾಶಂಕರ್ ಮಾತನಾಡಿ, ಕೆ.ಎಸ್. ಪ್ರತಿಮಾ ಅವರನ್ನು ಅವರ ನಿವಾಸದಲ್ಲಿ ಕಿಡಿಗೆಡಿಗಳು ಬರ್ಬರವಾಗಿ ಹತ್ಯೆ ಮಾಡಿರುವುದು ಪ್ರಜಾತಂತ್ರ ವ್ಯವಸ್ಥೆಯನ್ನು ತಲೆತಗ್ಗಿಸುವಂತೆ. ಈ ಹತ್ಯೆ ಹಿಂದೆ ಗಣಿಗಾರಿಕೆ ಮಾಫಿಯಾದ ಕೈವಾಡವಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.
    ವೇದಿಕೆಯ ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ಕಾರ್ಯಾಧ್ಯಕ್ಷ ಸಾಗರ್, ಗೌರಾವಧ್ಯಕ್ಷ ವಿ.ಎಚ್. ಶಿವಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಸೋಂಪುರ ಉಮೇಶ್, ರೈತ ಮುಖಂಡರಾದ ಹುರುಗಲವಾಡಿ ಉಮೇಶ್, ವಿ.ಎಂ.ರಮೇಶ್, ಮುಖಂಡರಾದ ಗೊರವನಹಳ್ಳಿ ಕೃಷ್ಣೇಗೌಡ, ಸಕ್ಕರೆ ನಾಗರಾಜು, ಎಸ್.ಕೆ.ಗಿರೀಶ್, ಕೋಣಸಾಲೆ ಕೃಷ್ಣ, ಶಶಿಕುಮಾರ್, ದೇವರಾಜ್, ವಿ.ಸಿ. ಹರಿಣಿ, ಕೆ. ಪಲ್ಲವಿ, ದಿವ್ಯಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts