Friday, 17th August 2018  

Vijayavani

ಬಿಜೆಪಿ ಕಚೇರಿಯಲ್ಲಿ ಅಟಲ್​ ಅಂತಿಮ ದರ್ಶನ, ಮೋದಿ ಸೇರಿ ಹಲವು ಗಣ್ಯರಿಂದ ಅಂತಿಮ ನಮನ         ಅಟಲ್​​ಗೆ ವಿಶ್ವದಾದ್ಯಂತ ಕಂಬನಿ: ಅಂತಿಮ ದರ್ಶನಕ್ಕೆ ವಿದೇಶಿ ನಾಯಕರ ಆಗಮನ, ಪಾಕ್​​ ನಿಯೋಗಕ್ಕೆ ಭಾರತ ವೀಸಾ        14 ಕಿ.ಮೀ. ಸಾಗಲಿದೆ ವಾಜಪೇಯಿ​​ ಅಂತಿಮ ಯಾತ್ರೆ: ಭಾಗಿಯಾಗಲಿದ್ದಾರೆ ಪ್ರಧಾನಿ, 4 ಗಂಟೆಗೆ ಸ್ಮೃತಿ ಸ್ಥಳದಲ್ಲಿ ಅಂತ್ಯಕ್ರಿಯೆ        ಕೊಡಗಿನಲ್ಲಿ ಮುಂದುವರಿದ ಮಳೆ: ಪ್ರವಾಹಕ್ಕೆ ಸಿಲುಕಿ ಜನಜೀವನ ತತ್ತರ, ಸಹಾಯಕ್ಕೆ ಅಂಗಲಾಚುತ್ತಿದ್ದಾರೆ ಜನ        ಕೇರಳದಲ್ಲಿ ಮುಂದುವರಿದ ರಕ್ಷಣಾ ಕಾರ್ಯ: ವಿಮಾನದಿಂದ ಆಹಾರ ಪೂರೈಕೆ, ಲಕ್ಷಾಂತರ ಮಂದಿ ಸ್ಥಳಾಂತರ       
Breaking News

ಕುಡಿಯೋಕೆ ಮಾತ್ರ ನೀರು- ಭತ್ತ ಬೆಳೆಯೋಕೆ ನೀರು ಕೊಡಲ್ಲ ಅಂದ್ರು ಸಿದ್ದು

Wednesday, 09.08.2017, 1:42 PM       No Comments

ಬೆಂಗಳೂರು: ಜಲಾಶಯಗಳಿಂದ ನೀರು ಬಿಡದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ನಿರಂತರ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೆ ಎಚ್ಚೆತ್ತ ಸರ್ಕಾರ ಕೆರೆಗಳಿಗೆ ನೀರು ಬಿಡಲು ನಿರ್ಧರಿಸಿದೆ.

ಕಾವೇರಿ ವಿಚಾರವಾಗಿ ನಗರದಲ್ಲಿಂದು ಮಂಡ್ಯ ಭಾಗದ ಜನಪ್ರತಿನಿಧಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದರು. ಈ ವೇಳೆ ಜಲಾಶಯಗಳಿಂದ ನೀರು ಬಿಡುವುದಾಗಿ ಸಭೆಯಲ್ಲಿ ತೀರ್ಮಾನಿಸಿದ್ದಾರೆ.

ನಾಳೆಯಿಂದ 4 ಜಲಾಶಯಗಳಿಂದ ನೀರು ಬಿಡಲು ಸರ್ಕಾರ ತೀರ್ಮಾನಿಸಿದ್ದು, ಕೆಆರ್‌ಎಸ್, ಕಬಿನಿ, ಹಾರಂಗಿ, ಹೇಮಾವತಿಯಿಂದ ನೀರು ಬಿಡುಗಡೆ ಮಾಡುವುದಾಗಿ ಸಭೆಯಲ್ಲಿ ಸರ್ಕಾರ ತೀರ್ಮಾನಿಸಿದೆ. ಮಂಡ್ಯ ಮತ್ತು ಮೈಸೂರು ಭಾಗದ ಕೆರೆಗಳನ್ನು ತುಂಬಿಸಲು ಸರ್ಕಾರದ ತೀರ್ಮಾನಿಸಿದೆ. 4 ಜಲಾಶಯಗಳಿಂದ ಕುಡಿಯಲು ಮತ್ತು ಕೆರೆ ತುಂಬಿಸಲು ನೀರು ಬಿಡುಗಡೆ ಮಾಡುವುದಾಗಿ ಸರ್ಕಾರ ಹೇಳಿದೆ.

ಇನ್ನು ಸಭೆಯ ಬಳಿಕ ಮಾತನಾಡಿದ ಸಿಎಂ, ಕುಡಿಯಲು ಮಾತ್ರ ನೀರು ಬಿಡಲಾಗುವುದು. ರೈತರು ಕುಡಿಯಲು ಮಾತ್ರ ನೀರು ಉಪಯೋಗಿಸಬೇಕು. ಭತ್ತದ ಬೆಳೆಗಳಿಗೆ ನೀರು ಉಪಯೋಗಿಸಬಾರದು. ಭತ್ತ ಬೆಳೆಯದೆ ಮಳೆಯಾಧರಿತ ಬೆಳೆಗಳನ್ನು ಬೆಳೆಯಬೇಕು. ಭತ್ತ ಬೆಳೆದ್ರೆ ನೀರು ಕೊಡಲ್ಲ. ಭತ್ತ ಬೆಳೆದ್ರೆ ರೈತರಿಗೂ, ರಾಜ್ಯಕ್ಕೂ ಸಂಕಷ್ಟ ಎಂದು ಪ್ರತಿಕ್ರಿಯಿಸಿದ್ದಾರೆ.(ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top