Monday, 15th October 2018  

Vijayavani

‘ಉಪ' ಕದನಕ್ಕೆ ಇಂದು ಉಮೇದುವಾರಿಕೆ-ಶಿವಮೊಗ್ಗದಲ್ಲಿ ಮಾಜಿ ಸಿಎಂ ಪುತ್ರ ನಾಮಪತ್ರ- ಇತ್ತ ರಾಮನಗರದಿಂದ ಸಿಎಂ ಪತ್ನಿ        ಕುತೂಹಲ ಕೆರಳಿಸಿದ ಬೆಳಗಾವಿ ಎಪಿಎಂಸಿ ಎಲೆಕ್ಷನ್-ಲಕ್ಷ್ಮೀ ವಿರುದ್ಧ ಸೋಲು ತೀರಿಸಿಕೊಳ್ಳಲು ಜಾರಕಿಹೊಳಿ ಬಣ ಸಿದ್ಧತೆ        ಸ್ಯಾಂಡಲ್​ವುಡ್​ನಲ್ಲೂ ‘ಮೀ ಟೂ’ ಸದ್ದು-ನಟಿ ಸಂಗೀತಾ ಭಟ್ ದಯವಿಟ್ಟು ಗಮನಿಸಿ ಅಂತ ಫೇಸ್​ಬುಕ್​ನಲ್ಲಿ ನೋವು        ಮೀ ಟೂ ಆರೋಪಕ್ಕೆ ಖುಷ್ಬು ತಿರುಗೇಟು-ಕೇಜ್ರಿಸ್ಟಾರ್ ಮೇಲೆ ಬೊಟ್ಟು ಮಾಡಿದವರಿಗೆ ಎದುರೇಟು        MEE TOOಗೆ ಬಿತ್ತು ಮೊದಲ ವಿಕೆಟ್-ಕೇಂದ್ರ ಸಚಿವ ಸ್ಥಾನಕ್ಕೆ ಎಂ.ಜೆ.ಅಕ್ಬರ್ ರಿಸೈನ್​        ಪೆಟ್ರೋಲ್ ಬ್ಯಾರಲ್ ಸ್ಫೋಟಕ್ಕೆ ಕೊಪ್ಪಳದ ಅಧಿಕಾರಿ ಸಾವು -ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನಲ್ಲಿ ಕೊನೆಯುಸಿರು       
Breaking News

ಅಂತರ್ಜಾತಿ ವಿವಾಹ ಧನ ಕಲ್ಯಾಣ ಇಲಾಖೆಯಲ್ಲೇ ಮರಿ ಹಾಕ್ತಿದೆ!

Monday, 04.09.2017, 3:47 PM       No Comments

ಬೆಂಗಳೂರು: ಸರ್ಕಾರದಿಂದ ಅದೆಷ್ಟೇ ಯೋಜನೆಗಳನ್ನು ಜಾರಿಗೆ ತಂದರೂ ಅವುಗಳ ಯಶಸ್ಸು ನಿರ್ಧಾರ ಆಗೋದು ಫಲಾನುಭವಿಗಳಿಗೆ ದೊರೆತಾಗ ಮಾತ್ರ. ಜಾತಿಗಳ ನಡುವಿರುವ ಅಂತರ ಕಡಿಮೆ ಮಾಡಲೆಂದೇ ಸರಕಾರ ಯೊಜನೆಯೊಂದನ್ನು ರೂಪಿಸಿತ್ತು.

ಹೌದು, ಅಂತರ್ಜಾತಿ ವಿವಾಹವಾದ್ರೆ 3 ಲಕ್ಷದವರೆಗೆ ಪ್ರೋತ್ಸಾಹ ಧನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ಆದರೆ ಈಗ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಇದು ಕೇವಲ ಘೋಷಣೆಯಾಗಿಯಷ್ಟೇ ಉಳಿದಿದೆಯಾ ಎನ್ನುವ ಪ್ರಶ್ನೆ ಕಾಡುತ್ತಿದೆ.

ಸಮಾಜ ಕಲ್ಯಾಣ ಆಂಜನೇಯ ಅವರೇ ಒಂದು ಪೈಸೆಯನ್ನು ನೀಡಿಲ್ಲ ಅಲ್ರೀ!?

ಮೇಲ್ಜಾತಿ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದವರು ಮದುವೆಯಾದ್ರೆ 3 ಲಕ್ಷದವರೆಗೆ ಸಹಾಯಧನ ನೀಡಲು ತೀರ್ಮಾನಿಸಿದ್ದು, ಈ ಯೋಜನೆಯ ಅನುಷ್ಠಾನದ ಹೊಣೆಯನ್ನು ಸಮಾಜ ಕಲ್ಯಾಣ ಇಲಾಖೆ ಹೊತ್ತಿತ್ತು. ಆದರೆ ಮದುವೆಯಾದ ಜೋಡಿಗಳು ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಸಲ್ಲಿಸಿದ್ದರು ಇಲಾಖೆ ಮಾತ್ರ ಒಂದು ಪೈಸೆಯನ್ನೂ ನೀಡಿಲ್ಲ

ಈ ಬಗ್ಗೆ RTI ಕಾರ್ಯಕರ್ತ ವೆಂಕಟೇಶ್ಮಾಹಿತಿ ಕೋರಿ ಸಲ್ಲಿಸಿದ್ದ ಅರ್ಜಿಗೆ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದುವರೆಗೂ 50 ತಾಲೂಕುಗಳಲ್ಲಿ 800ಕ್ಕೂ ಹೆಚ್ಚು ದಂಪತಿಗೆ 80 ಕೋಟಿಗೂ ಅಧಿಕ ಹಣ ಸಮಾಜ ಕಲ್ಯಾಣ ಇಲಾಖೆ ನೀಡಬೇಕಿದೆ.

ಇನ್ನು ಉಳಿದ ತಾಲೂಕುಗಳಲ್ಲಿ ನೀಡಬೇಕಿರುವ ಲೆಕ್ಕ ಹಾಕಿದರೆ ರೂ 200 ಕೋಟಿಗೂ ಅಧಿಕ ಪ್ರೋತ್ಸಾಹ ಧನವನ್ನು ಬಾಕಿ ಉಳಿಸಿಕೊಂಡಿದೆ. ಬಜೆಟ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಅತ್ಯಧಿಕ ಹಣ ಬಿಡುಗಡೆಯಾದರೂ ಇಲಾಖೆ ಮಾತ್ರ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎನ್ನುವುದು ತಿಳಿಯಬೇಕಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top