Friday, 15th December 2017  

Vijayavani

1. ಸನ್ನಿ ನೈಟ್​ಗೆ ವ್ಯಾಪಕ ವಿರೋಧ ಹಿನ್ನೆಲೆ- ಕಾರ್ಯಕ್ರಮ ರದ್ದುಗೊಳಿಸಿದ ರಾಜ್ಯ ಸರ್ಕಾರ- ಸಾವಿರಾರು ಅಭಿಮಾನಿಗಳಿಗೆ ನಿರಾಸೆ 2. ಆಟೋ ಮತ್ತು ಕಾರಿನ ಮೇಲೆ ಟಿಪ್ಪರ್ ಪಲ್ಟಿ- ಸ್ಥಳದಲ್ಲೇ ಮೂವರ ದುರ್ಮರಣ – ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ 3. ಶನಿಮುಖಿ ಸುನೀಲ್​ಗೆ ಸುಪಾರಿ ಕೇಡು- ವಾರದ ಅಚ್ಚರಿಯಲ್ಲಿ ಕ್ರೈಂ ವರದಿ ಕಿಂಗ್ ಲೇಖನ – ಇನ್ನೂ ಬರೆಯೋದು ಇದೆ ಎಂದ ಬೆಳಗೆರೆ 4. ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಟ್ಟು- ಜೆಡಿಎಸ್ ಸಭೆಯಲ್ಲಿ ಮಾರಾಮಾರಿ- ಬಾಗಲಕೋಟೆಯಲ್ಲಿ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು 5. ಗುಜರಾತ್ ವಿಧಾನಸಭೆಯಲ್ಲಿ ಯಾರು ಗೆಲ್ತಾರೆ- ನಾಯಿ ಬೊಗಳುತೈತೆ ಭವಿಷ್ಯ – ವೈರಲ್ ಆಯ್ತು ಬೌಬೌ ವಿಡಿಯೋ
Breaking News :

ಪರಿಸರನಾಶಕ ಕಾರ್ಖಾನೆ ಬೇಡ: ಸಿಎಂಗೆ ಯುವಕನ ರಕ್ತದ ಪತ್ರ

Sunday, 17.09.2017, 9:28 AM       No Comments

ಬಳ್ಳಾರಿ: ಜೀವಸಂಕುಲ, ಪರಿಸರಕ್ಕೆ ಹಾನಿಯಾಗುವ ಪೇಂಟ್ ಕಾರ್ಖಾನೆ ಯೋಜನೆ ರೂಪಿಸಿರುವ ಸರ್ಕಾರದ ವಿರುದ್ಧ ಬಳ್ಳಾರಿಯ ಕುಡತಿನಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಖಾನೆ ನಿರ್ಮಿಸದಿರಲು ಯುವಕನೊಬ್ಬ ಸಿಎಂ ಸಿದ್ದರಾಮಯ್ಯ ಅವರಿಗೆ ರಕ್ತದ ಮೂಲಕ ಪತ್ರ ಬರೆದಿದ್ದಾನೆ.

ಈ ಹಿಂದೆಯೇ ಪರಿಸರಕ್ಕೆ ಮಾರಕವಾಗಿರುವ ಡಾಂಬಾರ್ ಕಾರ್ಖಾನೆ ಬೇಡವಂದರೂ ಬಳ್ಳಾರಿ ಜಿಲ್ಲೆಯ ಕುಡತಿನಿ ಗ್ರಾಮದಲ್ಲಿ ನಿರ್ಮಿಸಲಾಯಿತು. ಇದೀಗ ಇದರ ಜೊತೆ ಮತ್ತೊಂದು ಹಾನಿಕಾರಕ ಪೇಂಟ್ ಕಾರ್ಖಾನೆಯನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇದು ಕುಡತಿನಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಮೊನ್ನೆ ಸಿಎಂ ಬಳ್ಳಾರಿಗೆ ಬಂದಾಗ ಪೇಯಿಂಟ್ ಕಾರ್ಖಾನೆ ನಿರ್ಮಿಸದಿರಲು ಯುವಕನೋರ್ವ ರಕ್ತದ ಪತ್ರ ಬರೆದಿದ್ದ. ಆದರೆ ಸಿಎಂಗೆ ಪತ್ರವನ್ನು ಕೊಡಲು ಮುಂದಾದಾಗ ಪೊಲೀಸರು ಅಡ್ಡಿಪಡಿಸಿದ್ದರಂತೆ. ಅಲ್ಲದೆ, ಪತ್ರ ಕಸಿದುಕೊಂಡು ಕಸದಬುಟ್ಟಿಗೆ ಹಾಕಿದ್ದಾರೆ ಅಂತ ಯುವಕ ಬಸವರಾಜ್ ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ ಪೊಲೀಸರಿಂದ ದಬ್ಬಾಳಿಕೆ ಮಾಡುತ್ತ ಬಂಡವಾಳ ಷಾಹಿಗಳಿಗೆ ಮಣೆ ಹಾಕುತ್ತಿದೆ. ಇವರು ಕೂಡ ರೆಡ್ಡಿಗಳ ಮಾದರಿಯಲ್ಲಿಯೇ ಆಡಳಿತ ನಡೆಸುತ್ತಿದ್ದಾರೆ ಅಂತಾ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top