Thursday, 20th September 2018  

Vijayavani

Breaking News

ಜಾರಕಿಹೊಳಿ ಬ್ರದರ್ಸ್​ಗೆ ಕಾಂಗ್ರೆಸ್​ ಹೈಕಮಾಂಡ್​ ಖಡಕ್​ ಎಚ್ಚರಿಕೆ

Friday, 14.09.2018, 8:45 AM       No Comments

ಬೆಂಗಳೂರು: ಬೆಳಗಾವಿ ರಾಜಕಾರಣದಿಂದ ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿದ್ದ ಬಿಕ್ಕಟ್ಟಿಗೆ ಬ್ರೇಕ್​ ಬಿದ್ದಿದೆ. ಕಾಂಗ್ರೆಸ್​ ಹೈಕಮಾಂಡ್​ ಎಚ್ಚರಿಕೆಯ ನಂತರ ಜಾರಕಿಹೊಳಿ ಬ್ರದರ್ಸ್​ ಸುಮ್ಮನಾಗಿದ್ದಾರೆ.

ಹೈಕಮಾಂಡ್​ ಸೂಚನೆ ಹಿನ್ನೆಲೆಯಲ್ಲಿ ಜಾರಕಿಹೊಳಿ ಬ್ರದರ್ಸ್​​ ತಮ್ಮ ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ದಡ್ಡಿ ಗ್ರಾಮದ ಕಾರ್ಯಕರ್ತರ ಜತೆ ಸತೀಶ್ ಜಾರಕಿಹೊಳಿ ಸಭೆ ನಡೆಸುತ್ತಿದ್ದು, ಪಕ್ಷ ಸಂಘಟನೆ ಬಗ್ಗೆ ಕಾರ್ಯಕರ್ತರ ಜತೆ ಮಾತುಕತೆ ನಡೆಸುತ್ತಿದ್ದಾರೆ.

ಗೋಕಾಕ್ ಕಚೇರಿಯಲ್ಲಿ ರಮೇಶ್ ಜಾರಕಿಹೊಳಿ ಬೀಡುಬಿಟ್ಟಿದ್ದಾರೆ. ಜನರಿಂದ ಅಹವಾಲು ಸ್ವೀಕರಿಸುತ್ತಿದ್ದು, ಹಲವು ಆಪ್ತರೊಂದಿಗೆ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್​ ಪಡಸಾಲೆಯಿಂದ ಮಾಹಿತಿ ಕೇಳಿಬಂದಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top