Wednesday, 18th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಮನೆ ಅಂದಕ್ಕೆ ಹಸಿರು

Saturday, 09.06.2018, 3:03 AM       No Comments

| ದ್ವಾರಕಾನಾಥ್ ಬೆಂಗಳೂರು

ಮನೆಯ ಹೊರಾಂಗಣ ಸೌಂದರ್ಯದಷ್ಟೇ ಒಳಾಂಗಣ ಅಂದವೂ ಪ್ರಮುಖವಾಗಿದೆ. ಗಾಳಿ, ಬೆಳಕು ಚೆನ್ನಾಗಿರುವ ಮನೆಗಳ ಒಳಗೂ ಅಲಂಕಾರಿಕ ಗಿಡಗಳನ್ನು ಇಟ್ಟು ಸೌಂದರ್ಯ ಹೆಚ್ಚಿಸಬಹುದು.

ಎಲ್ಲರಿಗೂ ತಾವು ವಾಸಿಸುವ ಮನೆ ಅಂದವಾಗಿ ಕಾಣಬೇಕು. ಇತರ ಮನೆಗಳಿಂದ ಭಿನ್ನವಾಗಿರಬೇಕು. ಎಲ್ಲರೂ ತಮ್ಮ ಮನೆಯ ಅಂದ ನೋಡಿ ಬೆರಗಾಗಬೇಕೆಂಬ ಆಸೆ ಎಲ್ಲರಲ್ಲೂ ಸಾಮಾನ್ಯ. ಅಲಂಕಾರಿಕ ಸಸ್ಯಗಳಿಂದ ಮನೆಯ ಒಳ ಹಾಗೂ ಹೊರ ಆವರಣದ ಅಂದ ಹೆಚ್ಚುತ್ತದೆ. ಹೊಸ ರೀತಿಯ ಗೃಹಾಲಂಕಾರ ತಂತ್ರಗಳ ಮೂಲಕ ಅಲಂಕಾರಿಕ ವಿಧಾನ ಮತ್ತು ಆಂತರಿಕ ವಿನ್ಯಾಸದಲ್ಲಿ ಸಸ್ಯಗಳು ಪ್ರಮುಖವಾಗಿರುತ್ತದೆ. ಮನೆಯೊಡೆಯರ ಸೃಜನಶೀಲ ಚಿಂತನೆಗಳು ನಿವಾಸವನ್ನು ಹೆಚ್ಚು ಚೆಂದ ಕಾಣಿಸುವಂತೆ ಮಾಡುತ್ತವೆ.

ಮನೆಯಲ್ಲಿ ಬೆಳಕಿನ ಮತ್ತು ಶಾಖದ ಲಭ್ಯತೆಯ ಪ್ರಮಾಣ ಆಧರಿಸಿ ಸಸ್ಯ ಪ್ರಭೇದ ಆಯ್ದುಕೊಳ್ಳುವುದು ಉತ್ತಮ. ಮನೆಯ ಒಳಾಂಗಣದಲ್ಲಿ ಶಾಖ ಮತ್ತು ಬೆಳಕನ್ನು ಹೆಚ್ಚಾಗಿ ಬೇಡದ ಸಸ್ಯಗಳನ್ನು ಇರಿಸಬಹುದು. ಬೆಳಕನ್ನು ಹೆಚ್ಚು ಬೇಡುವ ಪ್ರಭೇದಗಳಾದ ಮರಗಳು ಮತ್ತು ಜರಿಸಸ್ಯಗಳನ್ನು ಬಾಗಿಲು ಮತ್ತು ಕಿಟಕಿಯ ಹತ್ತಿರ ಇರಿಸುವುದು ಒಳಿತು.

ಮನೆಯೊಳಗೆ ಸಹಜ ಬೆಳಕಿದ್ದರೆ ಹೊರಾಂಗಣದಲ್ಲಿ ಇರಿಸಬಹುದಾದ ಹೂ ಗಿಡಗಳು, ಮರಗಳು ಮತ್ತು ವಿವಿಧ ವರ್ಣದ ಸಸ್ಯಗಳನ್ನು ಮನೆಯೊಳಗೆ ಇಡಬಹುದು. ಸಸ್ಯಗಳ ಆಯ್ಕೆ ಮನೆ ಮಾಲೀಕರ ಸಸ್ಯ ನಿರ್ವಹಣೆ ಜ್ಞಾನ ಮತ್ತು ಅನುಭವ ಆಧರಿಸಿದೆ. ಆದರೂ ಕನಿಷ್ಠ ನಿರ್ವಹಣೆ ಬೇಡುವ ಸಸ್ಯಗಳಲ್ಲಿ ಸಾಕಷ್ಟು ಆಯ್ಕೆಗಳಿದ್ದು, ಮನೆಯನ್ನು ಉತ್ತಮವಾಗಿ ಸಿಂಗರಿಸಬಹುದು.

ಮನೆಯೊಳಗೆ ಕಲಾಕೃತಿಗಳು

ಮನೆಯೊಳಗೆ ಉದ್ಯಾನದ ಕಲಾಕೃತಿಗಳು ಮತ್ತು ಅವುಗಳ ಬಿಡಿಭಾಗಗಳು ಹಸಿರು ನೋಟದಿಂದ ಆಕರ್ಷಕವಾಗಿಸುತ್ತವೆ. ಮನೆಯೊಳಗಿನ ಕಾರಂಜಿ ನೋಡುಗರನ್ನು ಸೆಳೆಯುವುದಲ್ಲದೆ, ಸುತ್ತಲಿನ ವಾತಾವರಣದ ಸೌಂದರ್ಯ ಹೆಚ್ಚಿಸುತ್ತವೆ. ಗೋಡೆಗೆ ಅಥವಾ ಛಾವಣಿಗೆ ನೇತು ಹಾಕಬಹುದಾದ ಶಿಲ್ಪಕಲೆ, ಕಲಾಕೃತಿಗಳ ಆಯ್ಕೆ ಗೃಹಾಲಂಕಾರವನ್ನು ಪೂರ್ಣಗೊಳಿಸಿದ ಭರವಸೆ ನೀಡುತ್ತದೆ.

ಪಾಟ್ ಆಯ್ಕೆ ಭಿನ್ನವಾಗಿರಲಿ

ಸಸ್ಯಗಳ ಜತೆ ಮನೆ ಅಲಂಕರಿಸುವಾಗ ಪಾಟ್​ಗಳ ಆಯ್ಕೆಯಲ್ಲಿ ಹೆಚ್ಚಿನ ಗಮನಹರಿಸಿದರೆ ಗೃಹಾಲಂಕಾರ ಅಂದವಾಗಿರುತ್ತದೆ. ಮನೆಯ ಬಣ್ಣ, ವಿನ್ಯಾಸಕ್ಕೆ ಸರಿ ಹೊಂದುವ ಹಾಗೂ ಸೃಜನಾತ್ಮಕ ಕಲೆ ಮೂಡಿರುವ ಪಾಟ್​ಗಳ ಆಯ್ಕೆಯನ್ನು ಸಮರ್ಪಕವಾಗಿ ಮಾಡಿದರೆ ನೋಡಿದವರು ವಾವ್ಹ್ ಎನ್ನುವಂತೆ ಮನೆ ಅಲಂಕರಿಸಬಹುದು. ಪಾಟ್​ಗಳು ಸಿರಾಮಿಕ್, ಟೆರಾಕೋಟಾ, ಪಾಲ್ಟ್ರೋಪೆಲೀನ್, ಕಲ್ಲು ಅಥವಾ ಫೈಬರ್​ಗಳದ್ದಾಗಿರಬಹುದು. ಅವುಗಳನ್ನು ಮನೆ ವಿನ್ಯಾಸಕ್ಕೆ ತಕ್ಕಂತೆ ಆಯ್ದಕೊಳ್ಳಬೇಕು. ಸ್ಥಳಾವಾಕಾಶ ಆಧರಿಸಿ ಪಾಟ್​ಗಳ ಗಾತ್ರದ ಬಗ್ಗೆಯೂ ಗಮನಹರಿಸುವುದು ಅಗತ್ಯ.

Leave a Reply

Your email address will not be published. Required fields are marked *

Back To Top