Monday, 11th December 2017  

Vijayavani

1. ಮತ್ತಷ್ಟು ಹದಗೆಟ್ಟ ರವಿ ಬೆಳಗೆರೆ ಆರೋಗ್ಯ – ಕಾಲು ನೋವು, ನಿಶ್ಯಕ್ತಿಯಿಂದ ಪತ್ರಕರ್ತನ ನರಳಾಟ – ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ 2. ಮಧ್ಯಾಹ್ನ 12ಕ್ಕೆ ಕೋರ್ಟ್​ಗೆ ಹಾಜರ್ – ರವಿ ಬೆಳಗೆರೆ ವಿರುದ್ಧ ಮತ್ತೊಂದು ಕೇಸ್‌ – ಪತ್ರಕರ್ತನಿಗೆ ಜೈಲಾ..? ಬೇಲಾ..? 3. ಬಳ್ಳಾರಿಯಲ್ಲಿ ಗಣಿಗಾರಿಕೆ ವಿರುದ್ಧ ಕೂಗು – ಕುಮಾರಸ್ವಾಮಿ ಬೆಟ್ಟ ಉಳಿವಿಗೆ ಸಂಡೂರು ಬಂದ್ – ಅಂಗಡಿ, ಮುಂಗಟ್ಟುಗಳಿಗೆ ಬೀಗ, ಶಾಲಾ-ಕಾಲೇಜಿಗೆ ರಜೆ 4. ರಾಜ್ಯ ಸರ್ಕಾರದಿಂದ ಬಿಜೆಪಿ ಹತ್ತಿಕ್ಕುವ ಕೆಲಸ – ರ‍್ಯಾಲಿಯಲ್ಲಿ ಭಾಗಿಯಾದವ್ರ ವಿರುದ್ಧ ಟ್ರಾಫಿಕ್‌ ಪೊಲೀಸ್‌ ಕೇಸ್ – ಕಲಬುರಗಿಯಲ್ಲಿ ಖಾಕಿ, ಕೇಸರಿ ಕದನ 5. ಪ್ರಧಾನಿ ಮೋದಿ ರ‍್ಯಾಲಿಗೆ ಅವಕಾಶವಿಲ್ಲ – ಮೆಗಾ ರೋಡ್​ ಶೋಗೆ ಅನುಮತಿ ನಿರಾಕರಣೆ – ರಾಹುಲ್ ಸಮಾವೇಶಕ್ಕೂ ಗುಜರಾತ್ ಪೊಲೀಸರ ತಡೆ
Breaking News :

ಸಿಂಹದ ಬಳಿಕ ಸಫಾರಿ ವಾಹನದ ಮೇಲೆ ಕರಡಿ ಕುಣಿತ!

Tuesday, 31.01.2017, 8:50 PM       No Comments

https://youtu.be/sSBhjeFEJyc

ಬೆಂಗಳೂರು: ಬನ್ನೇರುಘಟ್ಟ ಸಫಾರಿಯಲ್ಲಿ ಸಿಂಹ ಕಾರಿನ ಮೇಲೆ ಕಾಲಿಟ್ಟು ಗರ್ಜಿಸಿದ ಸುದ್ದಿ ವೈರಲ್ ಆದ ಬೆನ್ನಲ್ಲೇ ಇದೀಗ ಕರಡಿಯೊಂದು ಮ್ಯಾಕ್ಸಿಕ್ಯಾಬ್ ವಾಹನವೊಂದರ ಮೇಲೆ ಮರದಿಂದ ಜಿಗಿದು ಕೆಲ ಕ್ಷಣ ಪ್ರವಾಸಿಗರನ್ನು ಗಾಬರಿಗೊಳಿಸಿದ ಘಟನೆಯೂ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಪ್ರವಾಸಿಗರು ಮ್ಯಾಕ್ಸಿಕ್ಯಾಬ್​ನಲ್ಲಿ ಕರಡಿ ಸಫಾರಿ ವೀಕ್ಷಣೆಗೆ ತೆರಳಿದ್ದರು. ಮಾರ್ಗ ಮಧ್ಯೆ ಕರಡಿಯೊಂದು ಏಕಾಏಕಿ ವಾಹನ ಮೇಲೆ ಜಿಗಿದಿದೆ. ಆದರೆ ವಾಹನದಲ್ಲಿರುವ ಪ್ರವಾಸಿಗರಿಗಾಗಲಿ, ವಾಹನ ಚಾಲಕನಿಗಾಗಲಿ ಗೊತ್ತೇ ಆಗಲಿಲ್ಲ. ಹೆಚ್ಚೂಕಡಿಮೆ ಒಂದು ಕಿಲೋಮೀಟರ್ ದೂರ ಕರಡಿ ವಾಹನದ ಮೇಲೆಯೇ ಇತ್ತು. ಅಲ್ಲಿಂದ ಸಫಾರಿ ಗೇಟ್ ಬಳಿ ಬಂದಾಗ ಸೆಕ್ಯೂರಿ ಇದನ್ನು ಗಮನಿಸಿ ತಕ್ಷಣ ವಾಹನ ನಿಲ್ಲಿಸಿ ಕರಡಿಯನ್ನು ಕೋಲಿನಿಂದ ಬೆದರಿಗೆ ಮತ್ತೆ ಕಾಡಿಗೆ ಓಡಿಸಿದ್ದಾರೆ.

ಇದರಿಂದಾಗಿ ಪ್ರವಾಸಿಗರು ಕೆಲಕಾಲ ಗಾಬರಿಗೊಂಡಿದ್ದರು. ಆದರೆ ವಿಶೇಷ ಅನುಭವ ಆಗಿರುವುದಕ್ಕೆ ಖುಷಿಪಟ್ಟರು.

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *

Back To Top