Wednesday, 20th June 2018  

Vijayavani

ನನ್ನನ್ನ ಸಿಕ್ಕಿ ಹಾಕಿಸಲು ಡೈರಿ ಷಡ್ಯಂತ್ರ ನಡೆದಿದೆ - ಇದರ ಹಿಂದೆ ಯಾರಿದ್ದಾರೆ ಎಂದು ನನಗೆ ಗೊತ್ತಿದೆ - ನಾನೂ ಡೈರಿ ರಿಲೀಸ್ ಮಾಡ್ತೀನಿ ಅಂದ್ರು ಡಿಕೆಶಿ        ಐಟಿ ದೂರಿನಲ್ಲಿದೆ ಸ್ಫೋಟಕ ಮಾಹಿತಿ - ಎಐಸಿಸಿಗೆ ಕೋಟಿ ಕೋಟಿ ಕೊಟ್ಟಿದ್ರಾ ಡಿಕೆಶಿ - ಹವಾಲಾ ವ್ಯವಹಾರದಲ್ಲಿ ಡಿಕೆಶಿ ಹೆಸರು ಉಲ್ಲೇಖ        ಗಂಗಾಧರ ಚಡಚಣ ಹತ್ಯೆ ಪ್ರಕರಣ - ಭೈರಗೊಂಡ ಸಾಹುಕಾರನ ಮನೆ ಮೇಲೆ ಸಿಐಡಿ ದಾಳಿ - ಪಿಎಸ್​ಐ ಹಳ್ಳೂರು, ಪೇದೆ ಸಿದ್ಧಾರೂಢ ನಿವಾಸದಲ್ಲೂ ಸರ್ಚಿಂಗ್        ಕಾಶ್ಮೀರದಲ್ಲಿ ಯೋಧನ ಕಿಡ್ನಾಪ್​​​, ಹತ್ಯೆ ಪ್ರಕರಣ - ಮೃತರ ಕುಟುಂಬಕ್ಕೆ ಸಚಿವೆ ಸಾಂತ್ವನ - ಕುಟುಂಬಸ್ಥರಿಗೆ ನೋವು ಆಲಿಸಿದ ನಿರ್ಮಲಾ        ನಿತ್ಯವೂ ಉಪ್ಪು-ಹುಳಿ, ಖಾರ ಇಲ್ಲದ ಊಟ - ನಾನ್​ ವೆಜ್​​ನಿಂದ ಮಾಜಿ ಸಿಎಂ ದೂರ ದೂರ - ಪ್ರಕೃತಿ ಚಿಕಿತ್ಸಾಲಯದಲ್ಲಿ ಸಿದ್ದು ಫುಲ್ ಸಸ್ಯಹಾರಿ        ಬಿಸಿಲು ಬರೋವರೆಗೂ ಬಯಲಲ್ಲೇ ಪಾಠ - ಕುಸಿಯುತ್ತಿರೋ ಶಾಲೆಯಲ್ಲೇ ವಿದ್ಯಾರ್ಥಿಗಳ ನರಳಾಟ - ದಾವಣಗೆರೆಯ ಸರ್ಕಾರಿ ಶಾಲೆಗೆ ಬೇಕಿದೆ ಕಾಯಕಲ್ಪ       
Breaking News

ಪಿಎಫ್​ಐ ಅಥವಾ ಮುತಾಲಿಕ್​ ಯಾರೇ ಆಗ್ಲಿ ಕೋಮು ದ್ವೇಷ ಹರಡಿದರೆ ಬ್ಯಾನ್​ : ಸಿಎಂ

Friday, 05.01.2018, 5:55 PM       No Comments

ಚಿಕ್ಕಮಗಳೂರು: ಸಮಾಜದ ಶಾಂತಿ ಕದಡುವ ಯಾವುದೇ ಕೋಮು ಸಂಘಟನೆ ಇದ್ದರೂ ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಇರಲಿ, ಪ್ರಮೋದ್ ಮುತಾಲಿಕ್ ಅವರ ಸಂಘಟನೆಯಾಗಲಿ ಕೋಮು ಗಲಭೆಗೆ ಪ್ರಚೋದನೆ ನೀಡುವ ಯಾವುದೇ ಸಂಘಟನೆ ಇದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಹಿಂದುಗಳ ಹತ್ಯೆ ಹೆಸರಿನಲ್ಲಿ ಬಿಜೆಪಿ ಸಮಾಜದ ಶಾಂತಿ ಭಂಗ ಯತ್ನ ಮಾಡುತ್ತಿರುವುದು ಸರಿಯಲ್ಲ. ಧರ್ಮದ ಹೆಸರಿನಲ್ಲಿ ಕೋಮು ಭಾವನೆ ಕೆರಳಿಸುವ ಬಜರಂಗದಳ, ವಿಎಚ್​ಪಿ ಶ್ರೀರಾಮಸೇನೆ, ಪಿಎಫ್​ಐ ಸೇರಿದಂತೆ ಯಾವುದೇ ಸಂಘಟನೆಗಳಿರಲಿ, ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.

ದೀಪಕ್​ ಸಾವಿನ ಬಗ್ಗೆ ನೋವಿದೆ

ದೀಪಕ್ ರಾವ್ ಸಾವಿನ ಬಗ್ಗೆ ನಮಗೆ ನೋವಿದೆ. ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುತ್ತೇವೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ಬಗ್ಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿದ್ದೇ ನೆನಪಿಲ್ಲ

ಸಿಎಂ ಸಿದ್ದರಾಮಯ್ಯ ಅವರು ಬೆಳ್ಳಿ ತಟ್ಟೆ ವಿವಾದದ ಬಗ್ಗೆ ಪ್ರತಿಕ್ರಿಸಿ, ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿಲ್ಲ, ಮಾಡಿದ್ದು ಜ್ಞಾಪಕವೂ ಇಲ್ಲ. ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎನ್ನುವಂತೆ ಎಲ್ಲೆಲ್ಲೋ ತಪ್ಪು ಹುಡುಕುವುದು ಸರಿಯಲ್ಲ ಎಂದರು.

ಪರಿಕ್ಕರ್​ ನಾಟಕ ಮಾಡುತ್ತಿದ್ದಾರೆ

ಮಹದಾಯಿ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ನಾಟಕ ಮಾಡುತ್ತಿದ್ದಾರೆ. ಮನೋಹರ ಪರಿಕ್ಕರ್ ಈಗಲೂ ರಾಜ್ಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ನ್ಯಾಯಾಧಿಕರಣದ ಮುಂದೆ ಗೋವಾದ ನಿಲುವಿನಲ್ಲಿ ಬದಲಾವಣೆ ಇಲ್ಲ ಎನ್ನುತ್ತಾರೆ. ಹಾಗಿದ್ದರೆ ಕರ್ನಾಟಕಕ್ಕೆ ನೀರು ಬಿಡುತ್ತೇವೆ ಎಂದು ಹೇಳಲು ಎಲ್ಲಿಂದ ಸಾಧ್ಯ ಎಂದರು

Leave a Reply

Your email address will not be published. Required fields are marked *

Back To Top