Tuesday, 21st November 2017  

Vijayavani

1. ಇಂಧನ ಇಲಾಖೆಯಲ್ಲಿ ಅವ್ಯವಹಾರ ಆರೋಪ – ವಿಧಾನಸಭೆಯಲ್ಲಿ ಸದನ ಸಮಿತಿ ವರದಿ ಮಂಡನೆ – ಸಂಸದೆ ಶೋಭಾ ವಿರುದ್ಧ ಡಿಕೆಶಿ ಅಸ್ತ್ರ 2. ಮದ್ಯಪಾನ ನಿಷೇಧಕ್ಕೆ ಸದನದಲ್ಲಿ ಗುದ್ದಾಟ – ಮದ್ಯ ವಿರೋಧಿ ಹೋರಾಟಕ್ಕೆ ಶೆಟ್ಟರ್​ ಸಾಥ್​​​​​ – ಸಿಎಂ ವಿರುದ್ಧ ಸಂಜಯ್​​ ಪಾಟೀಲ್​​ ಕಟು ಟೀಕೆ 3. 63ರಲ್ಲಿ ಬಿಡುಗಡೆಯಾಗಿತ್ತು ಪದ್ಮಾವತಿ ಚಿತ್ರ – ಆಗಿಲ್ಲದ ವಿವಾದ ಈಗ ಸೃಷ್ಟಿ – ವಿರೋಧಿ ಪಡೆಗೆ ಪ್ರಶ್ನೆ ಮುಂದಿಟ್ಟ ಚಿತ್ರತಂಡ 4. ತ್ರಿವಳಿ ತಲಾಖ್​ಗೆ ಸದ್ಯದಲ್ಲೇ ಬ್ರೇಕ್​ – ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡನೆ – ಕೇಂದ್ರ ಸರ್ಕಾರದ ಮಹತ್ವದ ನಡೆ 5. ಐಶ್ವರ್ಯ ಫೋಟೋ ತೆಗೆಯಲು ನೂಕುನುಗ್ಗಲು – ಮಾಧ್ಯಮದವರ ನಡೆಗೆ ಬಚ್ಚನ್​​​​​​​ ಸೊಸೆ ಕಣ್ಣೀರು – ಕೈಮುಗಿದು ಕಣ್ಣೀರಿಟ್ಟ ಐಶ್ವರ್ಯ
Breaking News :

ಕುಸಿದುಬಿದ್ದ ಮರ್ಫಿಟೌನ್ ನಿಶಾನ್​: ಸಯ್ಯದ್​ಗಿರುವ ಜ್ಞಾನ ಸಿದ್ದು ಸರಕಾರಕ್ಕೆ ಇಲ್ಲವಾಯ್ತು!

Thursday, 27.07.2017, 10:32 AM       No Comments

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್ ಯೋಜನೆ ಅನುಷ್ಟಾನಕ್ಕೆ ಪಾರಂಪರಿಕ ಕಟ್ಟಡವೊಂದು ಬಲಿಯಾಗಿದೆ. ಇಂದಿರಾ ಕ್ಯಾಂಟೀನ್ ನಿರ್ಮಾಣದ ಹೆಸರಿನಲ್ಲಿ ಈ ಹಿಂದೆ ಸಿಟಿಯಲ್ಲಿರುವ ಪಾರ್ಕ್​ಗಳು, ಕ್ರೀಡಾ ಮೈದಾನಗಳ ಮೇಲೆ ಸರಕಾರದ ಕಣ್ಣು ಬಿದ್ದಿತ್ತು. ಇದೀಗ ವಿದ್ಯಾ ದೇಗುಲವಾಗಿರುವ ಎಲ್ಲರಿಗೂ ಜ್ಞಾನವನ್ನು ಪೋಷಿಸುವ ಪಾರಂಪರಿಕ ಕಟ್ಟಡವನ್ನು ಧ್ವಂಸ ಮಾಡಲಾಗಿದೆ.

ಹಲಸೂರಿನ ಮರ್ಫಿ ಟೌನ್​ನಲ್ಲಿದ್ದ 104 ವರ್ಷದ ಪಾರಂಪರಿಕ ಕಟ್ಟಡವನ್ನ ಉರುಳಿಸಿ ಅದರೆ ಮೇಲೆ ಕ್ಯಾಂಟೀನ್ ನಿರ್ಮಿಸಲಾಗ್ತಿದೆ. ಇಲ್ಲಿದ್ದ ಕಟ್ಟಡವನ್ನ ಪುರಾತತ್ವ ಇಲಾಖೆ ಪಾರಂಪರಿಕ ಕಟ್ಟಡ ಅಂತ ಸೂಚಿಸಿದ್ದರು. ಈಗ ಕಟ್ಟಡವನ್ನ ನೆಲಸಮ ಮಾಡಿರೋದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಅಂದಹಾಗೆ ಇಲ್ಲಿದ್ದುದ್ದು ಗ್ರಂಥಾಲಯ.

ಇಂದಿರೆಯ ಮೆಚ್ಚಿಸಲು …

ಬ್ರೀಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಗ್ರಂಥಾಲಯ ಅದು. ಅಂದಿನಿಂದ ಜ್ಞಾನದಾಯಿಗಳ ಪಾಲಿಗೆ ನೆಚ್ಚಿನ ತಾಣವಾಗಿತ್ತು. ಈಗ ಕಟ್ಟಡ ಕೆಡವಿರುವುದು ಗ್ರಂಥಾಲಯಕ್ಕೆ ಬರುತ್ತಿದ್ದ ಅಕ್ಷರದಾಹಿಗಳು ರಸ್ತೆಯಲ್ಲೇ ದಿನಪತ್ರಿಕೆ ಓದಬೇಕಾದ ದುಃಸ್ಥಿತಿ ಬಂದೊದಗಿದೆ. ಸಖೇದಾಶ್ಚರ್ಯವೆಂದರೆ ಇತ್ತೀಚೆಗೆ ಮೇಯರ್ ಜಿ. ಪದ್ಮಾವತಿ ಅವರು ಗ್ರಂಥಾಯಕ್ಕೆ ಭೇಟಿ ನೀಡಿ, ಕಟ್ಟಡ ನವೀಕರಣಕ್ಕೆ ಸೂಚಿಸಿದ್ದರು. ಆದರೆ ಈಗ ಕಟ್ಟಡವನ್ನೇ ನೆಲಸಮ ಮಾಡಲಾಗಿದೆ.

ಸರ್ಕಾರ ಅನ್ನವನ್ನು ಕೊಡುವ ನೆಪವೊಡ್ಡಿ, ವಿದ್ಯೆಯನ್ನ ಕಸಿದುಕೊಳ್ಳುತ್ತಿದೆ ಎಂಬುದು ಸ್ಥಳೀಯರ ಅಭಿಪ್ರಾಯ. ಆಗಸ್ಟ್ 15ರಂದು ಇಂದಿರಾ ಕ್ಯಾಂಟೀನ್ ಯೋಜನೆ ಪ್ರತಿಷ್ಟಾನಕ್ಕೆ ತರಾತುರಿಯಲ್ಲಿ ಭರದ ಸಿದ್ಧತೆ ಮಾಡುತ್ತಿರುವ ಸರ್ಕಾರ ಚುನಾವಣೆಯನ್ನು ಮುಂದಿಟ್ಟುಕೊಂಡು ಅಭಿವೃದ್ಧಿ ಕಾರ್ಯ ರೂಪಿಸ್ತಾ ಇರುವಾಗ … ಇತಿಹಾಸವನ್ನೇ ಮೂಲೆಗುಂಪು ಮಾಡ್ತಿದೆಯಾ ಅನ್ನೋ ಅನುಮಾನ ಸದ್ಯ ಸಾರ್ವಜನಿಕರಲ್ಲಿ ಮೂಡಿದೆ.

ಇಂದಿರೆ​ಗಾಗಿ ಜ್ಞಾನದೇಗುಲವನ್ನೇ ಕೆಡವಿದರಯ್ಯಾ!

ನೂರು ವರ್ಷಕ್ಕೂ ಹೆಚ್ಚಿನ ಭವ್ಯ ಕಟ್ಟಡ ಇದಾಗಿತ್ತು. ನಮ್ಮ ಮರ್ಫಿ ಟೌನಿನ ನಿಶಾನ್​ ಇದಾಗಿತ್ತು. ಇದು ನಮ್ಮ ಹೆಗ್ಗುರುತು/ಹೆಮ್ಮೆಯೂ ಆಗಿತ್ತು. ಆದರೆ ಸರಕಾರಿ ಅಧಿಕಾರಿಗಳ ಅಲ್ಪ ಜ್ಞಾನದಿಂದಾಗಿ ಅದು ನಮ್ಮ ಕಣ್ಣೆದುರೇ ಕುಸಿದುಬಿದ್ದಿದೆ ಎಂದು ದುಃಖ ತೋಡಿಕೊಂಡವರು ಲೈಬ್ರರಿ ಎದುರಿಗೇ ಅನೇಕ ವರ್ಷಗಳಿಂದ ಪೆಟ್ಟಿಗೆ ಅಂಗಡಿ ಇಟ್ಟುಕೊಂಡಿರುವ ಸಯ್ಯದ್ ಅವರ ಅಳಲು.(ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top