Monday, 19th March 2018  

Vijayavani

ಬಿಜೆಪಿ, RSSನವರು ಕೌರವರು - ರೈತರು ಸಾಯ್ತಿದ್ರೆ ಮೋದಿ ಯೋಗ ಮಾಡ್ತಾರೆ - ಅಧಿವೇಶನದ ಕಡೇ ದಿನ ರಾಹುಲ್ ವಾಗ್ದಾಳಿ        ಬ್ಯಾಲೆಟ್‌ ಪದ್ದತಿಗೆ ರಾಜಕೀಯ ಒಮ್ಮತ - ಮತಪತ್ರ ಬಳಕೆ ಚರ್ಚಿಸಲು ಓಕೆ ಎಂದ ಬಿಜೆಪಿ - ಮತ್ತೆ ಬರುತ್ತಾ ಬ್ಯಾಲೆಟ್ ಪೇಪರ್‌ ಬಗೆದಷ್ಟು ಬಯಲಾಗ್ತಿದೆ ವಿಕ್ರಂ ಚಿಟ್‌ಫಂಡ್ ವಂಚನೆ - ಇನ್ವೆಸ್ಟ್ ಮಾಡಿದ್ದ ದ್ರಾವಿಡ್ ಪತ್ನಿಗೂ ಮೋಸ - ಸದಾಶಿವನಗರ ಠಾಣೆಯಲ್ಲಿ ಕೇಸ್        ಲಿಂಗಾಯತ ಧರ್ಮ ಸಂಕಟದಲ್ಲಿ ಸಿಎಂ - ಕೇಂದ್ರಕ್ಕೆ ವರದಿ ಶಿಫಾರಸು ಕುರಿತು ನಾಳೆ ಡಿಸ್ಕಷನ್ - ಕುತೂಹಲ ಮೂಡಿಸಿದ ಸಿದ್ದರಾಮಯ್ಯ ನಡೆ        ಎನ್‌ಜಿಒ ಕ್ರೆಡಿಟ್ ಕಾರ್ಡ್‌ ಬಳಸಿ ಶಾಪಿಂಗ್ - ಮಾರಿಷಸ್‌ ಅಧ್ಯಕ್ಷೆ ಅಮೀನಾ ರಿಸೈನ್ - ಬಿಂದಾಸ್‌ ಲೈಫ್‌ಗೆ ಹೋಯ್ತು ಪ್ರೆಸಿಡೆಂಟ್ ಸೀಟ್        ನಾಡಿನಾದ್ಯಂತ ವಿಳಂಬಿ ನಾಮ ಸಂವತ್ಸರ - ಬೇವು ಬೆಲ್ಲ ಸವಿದು ನಮಿಸಿದ ಭಕ್ತಸಾಗರ - ದಾವಣಗೆರೆಯ ಕುಂದುವಾಡದಲ್ಲಿಲ್ಲ ಹಬ್ಬದ ಸಡಗರ       
Breaking News

ಇದೆಂಥಾ ಎಡವಟ್ಟು! ಖಾಸಗಿ ನಿವೇಶನದಲ್ಲಿ ಇಂದಿರಾ ಕ್ಯಾಂಟೀನ್

Saturday, 30.09.2017, 2:36 PM       No Comments

ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ಜಾರಿಯಲ್ಲಿ ನಡೆಯುತ್ತಿರುವ ಯಡವಟ್ಟುಗಳಿಗೆ ಕೊನೆಮೊದಲು ಎಂಬುದಿಲ್ಲ ಎನ್ನುವಂತಾಗಿದೆ.

ಬಿಟಿಎಂ ಲೇಔಟಿನಲ್ಲಿ ನಡೆದಿರುವ ತಾಜಾ ನಿದರ್ಶನವೊಂದರಲ್ಲಿ … ಖಾಸಗಿ ಸೈಟ್ ನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಯತ್ನ ನಡೆದಿದೆ. BBMP ಯ AEE ಷರೀಫ್ ಎಂಬ ಅಧಿಕಾರಿ ಈ ಎಡವಟ್ಟಿನ ರೂವಾರಿ ಎಂಬ ಆರೋಪ ಕೇಳಿಬಂದಿದೆ.

10 ದಿನದ ಹಿಂದೆ ಇನ್ನೊಂದು ಸೈಟಿನಲ್ಲೂ ಈ ರೀತಿ ಮಾಡಿದ್ದರು. ಮಡಿವಾಳ ಚಾಕೊಲೇಟ್ ಫ್ಯಾಕ್ಟರಿ ರಸ್ತೆಯಲ್ಲಿ ಪ್ರಭಾಕರ್ ಎಂಬವರಿಗೆ ಸೇರಿದ ಸರ್ವೆ ನಂ 8/1 ಖಾಸಗಿ ಭೂಮಿಯಲ್ಲಿ ಬಿಬಿಎಂಪಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಕ್ಕೆ ಮುಂದಾಗಿತ್ತು.

ಕೆ. ನಾರಾಯಣಗೌಡ ಎಂಬುವವರಿಗೆ ಸೇರಿರುವ ಎರಡು ಸೈಟ್ ನಲ್ಲಿದ್ದ ಬೋರ್​ವೆಲ್ ಮತ್ತು ಬೇಲಿ ಕೆಡವಿದೆ ಬಿಬಿಎಂಪಿ. ಹೈಕೊರ್ಟಿನಲ್ಲಿ ಈ ನಿವೇಶನವು 1969ರಿಂದಲೂ ನಾರಾಯಣಗೌಡರಿಗೆ ಸೇರಿದ್ದು ಎಂಬ ಆದೇಶವಾಗಿದೆ. ಆದರೂ ಬಿಬಿಎಂಪಿ ಎಇಇ ಬೇಜವಾಬ್ದಾರಿ ತೋರಿದ್ದಾರೆ.

ಆದರೆ ನಾರಾಯಣ ಗೌಡರ ಸೊಸೆ ಶಾಂತಲಾ ಅವರು ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಅವಕಾಶ ನೀಡದೆ, ಅಡ್ಡಿಪಡಿಸಿದ್ದಾರೆ. ತಮ್ಮ ಸೈಟಿನಲ್ಲಿ ಕ್ಯಾಂಟೀನ್ ನಿರ್ಮಾಣ ಮಾಡಲು ಬಿಡಲ್ಲವೆಂದು ಪಟ್ಟು ಹಿಡಿದ ಶಾಂತಲಾ ಮತ್ತು ಬಿಬಿಎಂಪಿ ಕಾಂಟ್ರಾಕ್ಟರ್ ಮಧ್ಯೆ ಮಾತಿನ ಚಕಮಕಿ ನಡೆದಿರುವ ಘಟನೆಯೂ ವರದಿಯಾಗಿದೆ.(ದಿಗ್ವಿಜಯ ನ್ಯೂಸ್)

 

Leave a Reply

Your email address will not be published. Required fields are marked *

Back To Top