Wednesday, 18th October 2017  

Vijayavani

1. ರಾತ್ರಿ ಹಾಕಿದ ಟಾರು ಬೆಳಗ್ಗೆ ಕಿತ್ತುಬಂತು- ಸರ್ಕಾರದಿಂದ ಕಾಟಾಚಾರದ ಗುಂಡಿ ಮುಚ್ಚೋಕಾರ್ಯ- ಕೋಟ್ಯಾಂತರ ರೂಪಾಯಿ ನೀರಲ್ಲಿ ಹೋಮ 2. ಬರಿಗೈಯಲ್ಲಿ ಕಾರ್ಮಿಕನಿಂದ ಮಾನ್​ಹೋಲ್​ ಸ್ವಚ್ಛತೆ- ಸುರಕ್ಷಾ ಸಾಧನ ನೀಡಿದ ಮಹಾನಗರ ಪಾಲಿಕೆ- ಮಂಗಳೂರಿನಲ್ಲಿ ಅಮಾನವೀಯ ಘಟನೆ 3. ಪರಿಸರ ಉಳಿಸಿ, ಪಟಾಕಿ ತ್ಯಜಿಸಿ ಅಭಿಯಾನಕ್ಕೆ ಆಕ್ಷೇಪ- ವರ್ತಕರೊಂದಿಗೆ ಪರಿಸರ ಪ್ರೇಮಿಗಳ ವಾಗ್ವಾದ- ಮೈಸೂರಿನಲ್ಲಿ ಪಟಾಕಿ ಜಟಾಪಟಿ 4. ಅನೈತಿಕ ಸಂಬಂಧ ತಿಳಿದು ಗಂಡ ಬಿಟ್ಟ- ಪ್ರಿಯಕರನಿಗಾಗಿ ಮಗಳಿಗೆ ಕೊಟ್ಲು ಕಾಟ- ಗಂಗಾವತಿಯ ಹಿರೇಜಂತಕಲ್​ನಲ್ಲಿ ಕ್ರೂರಿ ತಾಯಿ 5. ನೋಟ್​ಬ್ಯಾನ್​ ವಿಚಾರದಲ್ಲಿ ಕಮಲ್​ ಉಲ್ಟಾ- ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಕ್ಷಮೆಯಾಚನೆ- ಇದು ಕಮಲ್​ ಹೊಸ ರಾಜಕೀಯ ಆಟ
Breaking News :

ರಾಷ್ಟ್ರಗೀತೆ ಹಾಡದೆ ಸ್ವಾತಂತ್ರ್ಯೋತ್ಸವ ಆಚರಿಸಿ: ಖ್ವಾಜಿ ಆದೇಶ

Sunday, 13.08.2017, 10:16 AM       No Comments

ಬರೇಲಿ: ಉತ್ತರ ಪ್ರದೇಶದ ಸರ್ಕಾರ ರಾಜ್ಯದ ಎಲ್ಲಾ ಮದರಾಸಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಬೇಕು ಅಂತ ಸುತ್ತೋಲೆ ಹೊರಡಿಸಿದ ಬೆನ್ನಲ್ಲೇ ಬರೇಲಿಯ ಖ್ವಾಜಿ ರಾಷ್ಟ್ರಗೀತೆ ಹಾಡದೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಬೇಕು ಎಂದು ಸೂಚಿಸಿದ್ದಾರೆ.

ಬರೇಲಿಯ ಖ್ವಾಜಿ ಬರೇಲಿ ವ್ಯಾಪ್ತಿಯ ಮದರಸಾಗಳಲ್ಲಿ ಆಗಸ್ಟ್​ 15 ರಂದು ರಾಷ್ಟ್ರಗೀತೆ ಹಾಡಬಾರದು ಎಂದು ಆದೇಶಿಸಿದ್ದಾರೆ. ನಾವು ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತೇವೆ. ಆದರೆ ರಾಷ್ಟ್ರಗೀತೆಯಲ್ಲಿರುವ ಹಲವು ಪದಗಳ ಕುರಿತು ಆಕ್ಷೇಪಗಳಿರುವ ಹಿನ್ನೆಲೆಯಲ್ಲಿ ನಾವು ರಾಷ್ಟ್ರಗೀತೆಯನ್ನು ಹಾಡುವುದಿಲ್ಲ ಎಂದು ಜಮಾತ್​ ರಜಾ ಎ ಉಸ್ತಫಾ ವಕ್ತಾರ ನಾಸಿರ್​ ಖುರೇಷಿ ತಿಳಿಸಿದ್ದಾರೆ.

ಮದರಸಾಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುವಂತೆ ಉತ್ತರ ಪ್ರದೇಶದ ಸರ್ಕಾರ ಸುತ್ತೋಲೆ ಹೊರಡಿಸಿದ ಬೆನ್ನಲ್ಲೆ ಮಧ್ಯ ಪ್ರದೇಶ ಮದರಸಾ ಬೋರ್ಡ್​ ಸಹ ಸ್ವಾತಂತ್ರ್ಯ ದಿನಾಚರಣೆ ಆಚರಿಸುವಂತೆ ಆದೇಶಿಸಿದೆ. ಮಧ್ಯಪ್ರದೇಶದಲ್ಲಿ 256 ಮದರಸಾಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top