Thursday, 19th July 2018  

Vijayavani

ಉಡುಪಿಯ ಶಿರೂರು ಶ್ರೀಗಳು ವೃಂದಾವನಸ್ಥ - ಚಿಕಿತ್ಸೆ ಫಲಕಾರಿಯಾಗದೇ ವಿಧಿವಶ - ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಕೊನೆಯುಸಿರು        ವಿವಿ ಸಿಂಡಿಕೇಟ್​​​​​​​​ ನಾಮನಿರ್ದೇಶಿತ ಸದಸ್ಯರ ರದ್ದು - ಸಿಎಂ ಎಚ್​ಡಿಕೆ ವಿರುದ್ಧ ಸಿಡಿದೆದ್ದ ಸಿದ್ದು - ಈ ಪ್ರಕರಣವನ್ನ ಸುಮ್ನೆ ಬಿಡಲ್ಲವೆಂದ ಮಾಜಿ ಸಿಎಂ        CWC ಸದಸ್ಯರಾದ ಸಿದ್ದರಾಮಯ್ಯಗೆ ಬಿಗ್​​​​​​​ ಶಾಕ್​​ - ಕ್ಯಾಬಿನೆಟ್ ಸ್ಥಾನಮಾನಕ್ಕೆ ಕೈ ನಾಯಕರೇ ಕೊಕ್ಕೆ - ಪರಂ,ಡಿಕೆಶಿಯಿಂದ ಮಾಸ್ಟರ್​ ಪ್ಲಾನ್​​        ಸಿಎಂ ಆದ ಬಳಿಕ ಕೊಡಗು ಜಿಲ್ಲೆಗೆ ಎಚ್​ಡಿಕೆ - ಹಾರಂಗಿ, ತಲಕಾವೇರಿಯಲ್ಲಿ ವಿಶೇಷ ಪೂಜೆ - ಮುಖ್ಯಮಂತ್ರಿಗೆ ಸ್ವಾಗತ ಕೋರಿದ ಫತಾಹ್​​​        ಬಿಟ್ಟ ಅಸ್ತ್ರವೇ ಜಮೀರ್​ಗೆ ತಿರುಗುಬಾಣ - ದೋಸ್ತಿ ವಿರುದ್ಧ ಹೋರಟಕ್ಕೆ ಬಿಜೆಪಿ ರಣತಂತ್ರ - ಸಚಿವರ ವಿರುದ್ಧ ಅನ್ವರ್ ಮಾಣಿಪ್ಪಾಡಿ ವರದಿ ಅಸ್ತ್ರ        ರಾತ್ರಿ ಬೀದಿ ನಾಯಿಗಳಿಗೆ ಊಟ ಹಾಕಿದ್ದೇ ತಪ್ಪಾಯ್ತು - ವಿದ್ಯಾರ್ಥಿನಿಗೆ ಸ್ಥಳೀಯರ ಕಿರಿಕ್​ - ಮಹಲಕ್ಷ್ಮಿ ಲೇಔಟ್​​​ನಲ್ಲಿ ಬೀದಿ ರಂಪಾಟ       
Breaking News

ಪುನೀತ್​ ರಾಜ್​ಕುಮಾರ್​ ಹೆಸರಲ್ಲಿ ಲಕ್ಷಾಂತರ ರೂ. ವಂಚಿಸಿ ಪರಾರಿಯಾದ ಪ್ರಳಯಾಂತಕ

Thursday, 12.07.2018, 1:11 PM       No Comments

ಮೈಸೂರು: ಸ್ಯಾಂಡಲ್​ವುಡ್​ ನಟ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರ ಹೆಸರನ್ನು ಬಳಸಿಕೊಂಡು ವ್ಯಕ್ತಿಯೊಬ್ಬ ಮೈಸೂರಿನಲ್ಲಿ ಹಲವರಿಗೆ ಲಕ್ಷಾಂತರ ರೂ. ವಂಚನೆ ಮಾಡಿ ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರಿನ ಶ್ರೀನಿವಾಸನಗರದ ರವಿ ಅಮಾಯಕರನ್ನು ವಂಚಿಸಿ ಪರಾರಿಯಾದವನು. ಮೂಲತಃ ಬನ್ನೂರಿನ ಅಂಕನಹಳ್ಳಿಯ ರವಿ ಕಳೆದ 20 ವರ್ಷದಿಂದ ಬೆಂಗಳೂರಿನಲ್ಲಿ ವಾಸವಾಗಿದ್ದ. ಆತ ಕಳೆದ ವರ್ಷ ಮೈಸೂರು ತಾಲೂಕಿನ ಕುಪ್ಯಾ ಗ್ರಾಮಕ್ಕೆ ಬಂದು ತಮ್ಮ ದೂರದ ಸಂಬಂಧಿ ರಮೇಶ್​ ಎಂಬಾತನನ್ನು ಪರಿಚಯಿಸಿಕೊಂಡಿದ್ದ. ಈ ಸಂದರ್ಭದಲ್ಲಿ ರವಿ ತಾನು ಪುನೀತ್​ ರಾಜ್​ಕುಮಾರ್​ ಅವರ ಬಳಿ ಅಸಿಸ್ಟೆಂಟ್​ ಆಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ.

ಇದೇ ಸಂದರ್ಭದಲ್ಲಿ ರವಿ ತಂಗಿ ಶ್ರುತಿ ಮದುವೆ ನಿಶ್ಚಯವಾಗಿತ್ತು. ಮದುವೆ ಖರ್ಚಿಗೆ ಹಣ ಹೊಂದಿಸಲು ಪುನೀತ್​ ರಾಜ್​ಕುಮಾರ್​ ಹೆಸರು ಬಳಸಿಕೊಳ್ಳಲು ಪ್ಲ್ಯಾನ್​ ರೂಪಿಸಿದ ಈತ ರಮೇಶ್​ ಕುಮಾರ್​ ಅವರಿಂದ ಲಕ್ಷಾಂತರ ರೂ. ಹಣ ಮತ್ತು ಅವರ ಪತ್ನಿ ಉಮಾ ಅವರಿಂದ ಚಿನ್ನ ಪಡೆದುಕೊಂಡಿದ್ದ. ಜತೆಗೆ ಗುರುಮೂರ್ತಿ ಎಂಬಾತನಿಗೆ ಪುನೀತ್​ ಕಾರಿನ ಡ್ರೈವರ್​ ಕೆಲಸ ಕೊಡುವುದಾಗಿ ಆಮಿಷ ಒಡ್ಡಿ 50 ಗ್ರಾಂ ಚಿನ್ನದ ಸರ ಪಡೆದಿದ್ದ.

ಜತೆಗೆ ಟ್ರಾವಲ್ಸ್​ ಮಾಲೀಕ ಜೆರ್ರಿ ಎಂಬುವವರ ಬಳಿ ಲಕ್ಷಾಂತರ ರೂ. ಹಣ ಪಡೆದಿದ್ದ. ಮದುವೆ ಸಮಾರಂಭದ ವೀಡಿಯೋ ಕವರೇಜ್​ ಮಾಡಿದ್ದ ಕಿರಣ್​ ಹಾಗೂ ಫ್ಲವರ್​ ಡೆಕೋರೇಷನ್​ ಮಾಡಿದ್ದವರಿಗೂ ವಂಚನೆ ಮಾಡಿದ್ದಾನೆ. ಮದುವೆ ಮುಗಿದ ನಂತರ ರವಿ ಪರಾರಿಯಾಗಿದ್ದು, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.  ಈ ಸಂಬಂಧ ಹಣ ಕಳೆದುಕೊಂಡವರು ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

Back To Top