Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ಕೇವಲ 800 ರೂಪಾಯಿಗೆ ಅಕ್ರಮ ಆಧಾರ್‌ ಸಿಗುತ್ತೆ!?

Tuesday, 13.03.2018, 7:43 PM       No Comments

<< ದಿಗ್ವಿಜಯ ನ್ಯೂಸ್​ ಕುಟುಕು ಕಾರ್ಯಾಚರಣೆಯಲ್ಲಿ ಬೆಳಕಿಗೆ; ನಕಲಿ ದಾಖಲೆ ನೀಡಿ ಆಧಾರ್ ಕಾರ್ಡ್​ ಪಡೆದ ಬಾಂಗ್ಲಾದ 9 ಪ್ರಜೆಗಳು >>

ಬೆಂಗಳೂರು: ನಿಮಗೆ ಆಧಾರ್‌ ಕಾರ್ಡ್‌ ಬೇಕು ಎಂದರೆ ಜಾಸ್ತಿ ತಲೆಕೆಡಿಸಿಕೊಳ್ಳುವುದೇ ಬೇಡ. ಕೇವಲ 800 ರೂಪಾಯಿ ಕೊಟ್ಟರೆ ಸಾಕು ಆಧಾರ್‌ ಕಾರ್ಡ್‌ ಸಿಗುತ್ತದೆ. ಅಂತಹದ್ದೊಂದು ಜಾಲ ಬೆಂಗಳೂರಿನಲ್ಲಿ ದಂಧೆಗಿಳಿದಿದೆ.

ಹೌದು, ಕೇವಲ ಹಣ ಕೈಗಿಟ್ಟರೆ ಸಾಕು ಭಯೋತ್ಪಾದಕರು, ದೇಶದ್ರೋಹಿಗಳು ಸೇರಿ ಯಾರಿಗೆ ಬೇಕಾದರೂ ಸಲೀಸಾಗಿ ಆಧಾರ್‌ ಕಾರ್ಡ್‌ ಅನ್ನು ನೀಡುತ್ತಾರೆ ಎಂಬ ದೇಶವೇ ಬೆಚ್ಚಿ ಬೀಳುವಂತ ಸ್ಫೋಟಕ ಸುದ್ದಿಯನ್ನು ದಿಗ್ವಿಜಯ ನ್ಯೂಸ್‌ ಕುಟುಕು ಕಾರ್ಯಾಚರಣೆಯಲ್ಲಿ ಬಯಲಿಗೆಳೆದಿದೆ.

ಸುಳ್ಳು ದಾಖಲೆಗಳನ್ನು ನೀಡಿ ಬಾಂಗ್ಲಾ ದೇಶದ 9 ಪ್ರಜೆಗಳು ಆಧಾರ್‌ ಕಾರ್ಡ್‌ ಪಡೆದಿದ್ದಾರೆ.

ಸರ್ಜಾಪುರ ಸಿಗ್ನಲ್​, ಸ್ಯಾನ್​ಸಿಟಿ ಹಿಂಭಾಗ, ಇಬ್ಬಲೂರು ಸೇರಿದಂತೆ 20 ಕಡೆ ಸತತ ಎರಡು ದಿನ ಹುಡುಕಿದರೂ 9 ವಿಳಾಸಗಳ ಪೈಕಿ ಯಾರೊಬ್ಬರೂ ಪತ್ತೆಯಾಗಿಲ್ಲ.

ಆದರೆ, ಹಣ ಹಿಡಿದು ಯಾರೇ ಬಂದರೂ ಅತೀ ಸುಲಭವಾಗಿ ಆಧಾರ್‌ ಸಿಗುತ್ತದೆ. ಇದರ ಜಾಡು ಹಿಡಿದು ಹೊರಟ ದಿಗ್ವಿಜಯ ನ್ಯೂಸ್‌ಗೆ ಬೆಂಗಳೂರಿನಾದ್ಯಂತ ಸುಮಾರು 9 ಕಡೆ ಆಧಾರ್‌ ಕಾರ್ಡ್‌ ಮಾಡಿಕೊಡುವ ಜಾಲವಿರುವುದು ಪತ್ತೆಯಾಗಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top