Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಬಲೂನು ನುಂಗಿದ ಎರಡು ವರ್ಷದ ಮಗು ಸಾವು

Monday, 16.04.2018, 3:03 AM       No Comments

ಬೆಂಗಳೂರು: ತಾಯಂದಿರೇ ಎಚ್ಚರ.. ನಿಮ್ಮ ಮಕ್ಕಳು ಎಲ್ಲಿ, ಯಾರೊಂದಿಗೆ ಯಾವ ಆಟಿಕೆಯಲ್ಲಿ ಆಟವಾಡುತ್ತಿದ್ದಾರೆ ಎಂದು ನಿಗಾ ಇರಲಿ. ಮಕ್ಕಳ ಮೇಲಿನ ಗಮನ ಸ್ವಲ್ಪ ತಪ್ಪಿದರೂ ಅನಾಹುತವಾಗುವ ಸಂಭವವಿದೆ.

ಆಟವಾಡುತ್ತಿದ್ದ ಪುಟ್ಟ ಬಾಲಕ ಗಂಟಲಿನಲ್ಲಿ ಬಲೂನ್ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾನೆ.

ಚಿಕ್ಕಕಮ್ಮನಹಳ್ಳಿಯ ಅಬೂಬಕರ್ ಸಿದ್ಧಿಖಿ ಮತ್ತು ರೇಷ್ಮಾ ದಂಪತಿ ಪುತ್ರ ನವಾಜ್ (2) ಮೃತ ಬಾಲಕ. ಮನೆ ಬಳಿಯ ಗ್ಯಾರೇಜ್​ನಲ್ಲಿ ಅಬೂಬಕರ್ ಟಿಂಕರಿಂಗ್ ಕೆಲಸ ಮಾಡುತ್ತಿದ್ದು, ತಾಯಿ ಗೃಹಿಣಿೆ. ಈ ದಂಪತಿಗೆ ನಾಲ್ವರು ಮಕ್ಕಳು. ನವಾಜ್ ಕೊನೆಯ ಪುತ್ರ. ಇತರ ಮೂವರನ್ನು ಅಜ್ಜಿ-ತಾತನ ಮನೆಯಲ್ಲಿ ಬಿಟ್ಟು ಈತನನ್ನು ಜತೆಯಲ್ಲಿಟ್ಟುಕೊಂಡಿದ್ದರು.

ಸೋಮವಾರ ಬೆಳಗ್ಗೆ 7.30ರಲ್ಲಿ ಆಟವಾಡಲು ಮನೆಯಿಂದ ಹೊರಹೋಗಿದ್ದ ಬಾಲಕ, 9 ಗಂಟೆಯಲ್ಲಿ ಉಸಿರಾಡಲು ಸಾಧ್ಯವಾಗದೆ ಸುಸ್ತಾಗಿ ಮನೆಗೆ ಬಂದಿದ್ದ. ಮಗನ ನರಳಾಟ ನೋಡಿದ ತಾಯಿ, ಹಸಿವಾಗಿರಬೇಕೆಂದು ಬ್ರೆಡ್ ಕೊಟ್ಟು ನೀರು ಕುಡಿಸಿದ್ದಾರೆ. ಬ್ರೆಡ್ ತಿಂದ ಕೆಲವೇ ಕ್ಷಣಕ್ಕೆ ಬಾಲಕ ವಾಂತಿ ಮಾಡಿಕೊಂಡು ಪ್ರಜ್ಞೆ ತಪ್ಪಿಬಿದ್ದಿದ್ದಾನೆ. ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷೆ ಮಾಡಿದ ವೈದ್ಯರು, ಪ್ರಾಥಮಿಕ ಚಿಕಿತ್ಸೆ ಕೊಟ್ಟು ಗಂಟಲಲ್ಲಿದ್ದ ಬಲೂನ್ ತುಂಡು ತೆಗೆದು ಹೆಚ್ಚಿನ ಚಿಕಿತ್ಸೆಗಾಗಿ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದರು.

ಮಗನನ್ನು ಸ್ಥಳೀಯರ ಸಹಾಯದಿಂದ ಬನ್ನೇರುಘಟ್ಟ ರಸ್ತೆ ಅಪೋಲೋ ಆಸ್ಪತ್ರೆಗೆ ಬೆಳಗ್ಗೆ 11 ಗಂಟೆಗೆ ಕರೆದುಕೊಂಡು ಹೋಗಿದ್ದರು. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಅರ್ಧ ತಾಸಿನಲ್ಲಿ ನವಾಜ್ ಅಸುನೀಗಿದ್ದಾನೆ ಎಂದು ಹುಳಿಮಾವು ಪೊಲೀಸರು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದೇಹವನ್ನು ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶವಪರೀಕ್ಷೆಗೆ ಒಪ್ಪದ ತಂದೆ

ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ವಿಕ್ಟೋರಿಯಾ ಆಸ್ಪತ್ರೆಗೆ ಶವವನ್ನು ತರಲಾಯಿತು. ಜತೆಗೆ ಬಂದಿದ್ದ ತಂದೆ ತನ್ನ ಮಗನ ಶವವನ್ನು ಹಿಡಿದು ಶವಗಾರದ ಒಳಗೆ ತೆಗೆದುಕೊಂಡು ಹೋಗಿ ವಾಪಸ್ ಹೊರಗೆ ಬಂದು ಮಗನ ದೇಹ ಕತ್ತರಿಸಲು ಬಿಡುವುದಿಲ್ಲ ಎಂದು ಗೋಳಾಡುತ್ತಿದ್ದ ದೃಶ್ಯ ಎಲ್ಲರ ಮನಕಲಕಿತು.

ಆಟವಾಡಿ ಸುಸ್ತಾಗಿರಬೇಕೆಂದು ಮಗನಿಗೆ ಬ್ರೆಡ್ ಕೊಟ್ಟು ನೀರು ಕುಡಿಸಿದೆ. ವಾಂತಿ ಮಾಡಿ ಪ್ರಜ್ಞೆ ತಪ್ಪಿದ. ಏನಾಯಿತು ಎಂಬುದು ಗೊತ್ತಾಗದೆ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದೆ.

| ರೇಷ್ಮಾ ಬಾಲಕನ ತಾಯಿ

ಶ್ವಾಸಕೋಶದಲ್ಲಿ ಸಿಲುಕಿದ ಬಲೂನ್?

ಮಗ ಬಲೂನ್ ನುಂಗಿರುವ ಸಂಗತಿ ತಾಯಿಗೆ ಗೊತ್ತಿರಲಿಲ್ಲ. ಬಲೂನ್ ಶ್ವಾಸಕೋಶದ ಒಳಗೆ ನುಗ್ಗಿ ಮತ್ತಷ್ಟು ಕ್ಲಿಷ್ಟಕರವಾಗಿದೆ. ಆ ನಂತರ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪ್ರಾಥಮಿಕ ಚಿಕಿತ್ಸೆ ಕೊಟ್ಟು ಮಕ್ಕಳ ವೈದ್ಯರನ್ನು ಸಂಪರ್ಕ ಮಾಡುವಂತೆ ಸಲಹೆ ಮಾಡಿದ್ದರು. ಅಪೋಲೊ ಆಸ್ಪತ್ರೆಗೆ ಹೋದಾಗ ವೈದ್ಯರು ಪರೀಕ್ಷೆ ನಡೆಸಿ ಬಲೂನ್ ತೆಗೆಯುತ್ತಿದ್ದಾಗಲೇ ಬಾಲಕ ಅಸುನೀಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back To Top