Saturday, 20th October 2018  

Vijayavani

ಚೀಪ್ ಮೆಂಟಾಲಿಟಿ ನನಗಿಲ್ಲ - ಇದರ ಹಿಂದೆ ಕೈವಾಡ ಇರಬಹುದು - ನಟಿ ಶ್ರುತಿ ಹರಿಹರನ್ ಆರೋಪ ತಳ್ಳಿಹಾಕಿದ ಅರ್ಜುನ್ ಸರ್ಜಾ        ಸ್ಯಾಂಡಲ್​ವುಡ್​​ನಲ್ಲಿ ಮೀ ಟೂ - ನಾಳೆ ಸುದ್ದಿಗೋಷ್ಠಿಯಲ್ಲಿ ಶ್ರುತಿ ಹಾಕ್ತಾರಾ ಬಾಂಬ್ - ನಟಿ ವಿರುದ್ಧ ಗುಡುಗಿದ ಅರ್ಜುನ್ ಸರ್ಜಾ ಅತ್ತೆ        ಧರ್ಮ ವಿಚಾರದಲ್ಲಿ ಡಿಕೆಶಿ ಕ್ಷಮೆಯಾಚನೆಗೆ ಸಿದ್ದು ಸಿಟ್ಟು - ಒಂದೇ ವೇದಿಯಲ್ಲಿದ್ರೂ ಮುಖ ಮುಖ ನೋಡಲಿಲ್ಲ - ಜಂಟಿ ಸುದ್ದಿಗೋಷ್ಠಿಯಲ್ಲಿ ನಾಯಕರ ಮಹಾ ಮುನಿಸು        ಜೆಡಿಎಸ್‌, ಕಾಂಗ್ರೆಸ್‌ನ ಸುದ್ದಿಗೋಷ್ಠಿ - ಕಾಂಗ್ರೆಸ್‌, ಜೆಡಿಎಸ್‌ ಜಂಟಿ ಸಮರಕ್ಕೆ ಬಿಜೆಪಿ ವ್ಯಂಗ್ಯ- ಟ್ವೀಟ್‌ ಮೂಲಕ ಟಾಂಗ್‌        ಒಂದೇ ಮನಸ್ಸು ಎರಡು ದೇಹ ಅಂದ್ರು ಸಿಎಂ - ಈ ಜನ್ಮದಲ್ಲಿ ಗೌಡ್ರು-ಸಿದ್ದು ಒಂದಾಗಲ್ಲ ಅಂದ್ರು ಕಾರಜೋಳ - ದೋಸ್ತಿಗಳಿಗೆ ಬಿಜೆಪಿ ನಾಯಕರ ಟಕ್ಕರ್        ಗದಗಿನ ತೋಂಟದಾರ್ಯ ಶ್ರೀಗಳು ಲಿಂಗೈಕ್ಯ - ಹೃದಯಾಘಾತದಿಂದ ಗದಗ್‌ನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶ - ನಾಳೆ ಗದಗದಲ್ಲಿ ಅಂತ್ಯಕ್ರಿಯೆ       
Breaking News

ಖ್ಯಾತ ಅರ್ಥಶಾಸ್ತ್ರಜ್ಞ ಬಿ.ಶೇಷಾದ್ರಿ ನಿಧನ

Friday, 10.08.2018, 7:10 PM       No Comments

<< 32 ವರ್ಷ ಕ್ಯಾನ್ಸರ್ ಜತೆ ಸೆಣೆಸಾಡಿ ವಿದಾಯ > ಅಸಂಖ್ಯಾತ ಶಿಷ್ಯಗಣ ಹೊಂದಿದ್ದ ಖ್ಯಾತ ಅರ್ಥಶಾಸ್ತ್ರಜ್ಞ >>

ಬಳ್ಳಾರಿ: ಖ್ಯಾತ ಅರ್ಥಶಾಸ್ತ್ರಜ್ಞ, ಡಾ.ಡಿ.ಎಂ.ನಂಜುಂಡಪ್ಪ ನೇತೃತ್ವದ ಪ್ರಾದೇಶಿಕ ಅಸಮಾತೋಲನ ನಿವಾರಣೆಗೆ ಸಂಬಂಧಿಸಿದಂತೆ ರಚಿಸಲಾಗಿದ್ದ ಉನ್ನತಾಧಿಕಾರ ಸಮಿತಿಯ ಸದಸ್ಯರಾಗಿದ್ದ ಬಿ.ಶೇಷಾದ್ರಿ (80) ಗುರುವಾರ ರಾತ್ರಿ 11.30ಕ್ಕೆ ನಗರದ ನೆಹರೂ ಕಾಲನಿಯಲ್ಲಿರುವ ನಿವಾಸದಲ್ಲಿ ವಿಧಿವಶರಾಗಿದ್ದಾರೆ.

1938ರ ಜು 1ರಂದು ಹೊಸಪೇಟೆಯಲ್ಲಿ ಜನಿಸಿದ್ದರು. ಬಿ.ಈರಪ್ಪ, ರುದ್ರಮ್ಮ ದಂಪತಿಯ ಎಂಟು ಮಕ್ಕಳಲ್ಲಿ ಏಳನೇಯವರಾಗಿದ್ದರು. ಕಳೆದ 32 ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಎಂಎಲ್ಸಿ ಕೆ.ಸಿ.ಕೊಂಡಯ್ಯ, ಲೆಕ್ಕ ಪರಿಶೋಧಕ ಎಸ್.ಪನ್ನರಾಜ್, ಹೋರಾಟಗಾರ ಟಿ.ಜಿ.ವಿಠಲ್ ಹಾಗೂ ಇತರರನ್ನು ಒಳಗೊಂಡ ಬಿ.ಶೇಷಾದ್ರಿ ಅಭಿನಂದನಾ ಸಮಿತಿಯಿಂದ ಬಿ.ಶೇಷಾದ್ರಿ ಕುರಿತ ಜೈವಿಕ ಬುದ್ಧಿಜೀವಿ ಡಾ.ಬಿ.ಶೇಷಾದ್ರಿ ಹಾಗೂ ಎಸ್ಸೆ ಇನ್ ಹಾನರ್ ಆಫ್ ಡಾ.ಬಿ.ಶೇಷಾದ್ರಿ ಆನ್ ಗ್ರೋಥ್ ಇಕ್ವಿಟಿ ಅಂಡ್ ಜಸ್ಟಿಸ್ ಎಂಬ ಕೃತಿಗಳನ್ನು ಪ್ರಕಟಿಸಲಾಗಿತ್ತು. ಬಿ.ಶೇಷಾದ್ರಿ ಅವರಿಗೆ ಪತ್ನಿ, ಮೂವರು ಪುತ್ರರು, ಪುತ್ರಿ, ಬಂಧುಗಳು ಹಾಗೂ ಶಿಷ್ಯ ಬಳಗವಿದೆ.

‘ಅರ್ಥ’ಪೂರ್ಣ ಬದುಕು ಮುಗಿಸಿದ ಬಿ.ಶೇಷಾದ್ರಿ: ಅರ್ಥಶಾಸ್ತ್ರಜ್ಞ, ಜೈವಿಕ ಬುದ್ಧಿಜೀವಿ, ಸಮಾಜ ವಿಜ್ಞಾನಿ, ವಾಗ್ಮಿ.. ಹೀಗೆ ಹೆಸರಿನ ಜತೆ ನಾನಾ ವಿಶೇಷಣಗಳೊಂದಿಗೆ ಗುರುತಿಸಿಕೊಂಡವರು ಬಿ.ಶೇಷಾದ್ರಿ. ಎಲ್ಲ ವಿಶೇಷಣಗಳನ್ನು ಮೀರಿದ್ದಾಗಿತ್ತು ಶೇಷಾದ್ರಿಯವರ ವ್ಯಕ್ತಿತ್ವ. ಇದರಿಂದಾಗಿ ಜಿಲ್ಲೆ ಸೇರಿದಂತೆ ರಾಜ್ಯ, ಹೊರ ರಾಜ್ಯಗಳಲ್ಲಿ ಅಪಾರ ಶಿಷ್ಯರು, ಅಭಿಮಾನಿಗಳನ್ನು ಹೊಂದಿದ್ದರು ಬಿ.ಶೇಷಾದ್ರಿ.

ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡಿ ಸಂಪಾದಿಸಿದ ಹಣದಲ್ಲಿ ಶಾಲಾ ಶಿಕ್ಷಣ ಪೂರೈಸಿದ್ದರು. ಪ್ರಾಥಮಿಕ, ಪ್ರೌಢಶಿಕ್ಷಣವನ್ನು ಹೊಸಪೇಟೆಯಲ್ಲಿ ಬಳಿಕ ಇಂಟರ್‌ಮೀಡಿಯೆಟ್ ಹಾಗೂ ನಗರದ ವೀರಶೈವ ಕಾಲೇಜಿನಲ್ಲಿ ಬಿಎ ಪದವಿ ಅಧ್ಯಯನ ಮಾಡಿದ್ದರು. ಕಾಲೇಜಿನ ಬಾಲ್ ಬ್ಯಾಡ್ಮಿಂಟನ್ ತಂಡದ ನಾಯಕರಾಗಿದ್ದರು. ಅರ್ಥಶಾಸ್ತ್ರ ಹಾಗೂ ಎಂಎ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ವೀರಶೈವ ಕಾಲೇಜಿನಲ್ಲೇ ಅರ್ಥಶಾಸ್ತ್ರ ಉಪನ್ಯಾಸಕರಾಗಿದ್ದರು.

1970ರಿಂದ ಬದುಕಿನ ಕೊನೆಯ ಉಸಿರಿನವರೆಗೂ ತಮ್ಮ ಪಾಂಡಿತ್ಯವನ್ನು ಸಮಾಜಕ್ಕೆ ಧಾರೆ ಎರೆದಿದ್ದಾರೆ. ನಾಲ್ಕು ದಶಕಗಳ ಕಾಲ ಅರ್ಥಶಾಸ್ತ್ರದ ಉಪನ್ಯಾಸಕರಾಗಿ, ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಸ್ಥಾಪಕ ಪ್ರಾಧ್ಯಾಪಕರಾಗಿ ಸೇವಾ ನಿವೃತ್ತಿ ಹೊಂದಿದ್ದರು. ಆದರೆ, ಓದು, ಬರಹ, ಉಪನ್ಯಾಸದಿಂದ ಅವರು ಎಂದೂ ನಿವೃತ್ತಿಯಾಗಿರಲಿಲ್ಲ. ಬೌದ್ಧಿಕ ಜ್ಞಾನ ನೀಡುವುದರ ಜತೆಗೆ ಅಸಂಖ್ಯಾತ ವಿದ್ಯಾರ್ಥಿಗಳ ಬದುಕು ಬದಲಾಯಿಸಿದ್ದ ಶ್ರೇಯಸ್ಸು ಬಿ.ಶೇಷಾದ್ರಿಯವರಿಗೆ ಸಲ್ಲುತ್ತದೆ.

ಮೈಸೂರಿನಲ್ಲಿರುವ ಉನ್ನತಾಧಿಕಾರಿಗಳ ತರಬೇತಿ ಕೇಂದ್ರದ ಅತಿಥಿ ಉಪನ್ಯಾಸಕರಾಗಿ, ಗೋಕಾಕ್ ಸಮಿತಿಯ ಶಿಫಾರಸುಗಳ ಅನುಷ್ಠಾನಕ್ಕೆ ಸಂಬಂಧಿಸಿದ ಸಮಿತಿಯ ಸಂಚಾಲಕರಾಗಿ, ಆರ್.ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ ಮಾಧ್ಯಮ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದ್ದರು. ವಿಚಾರವಾಹಿನಿ ಎಂಬ ಚಿಂತಕರ ಚಾವಡಿ ಮೂಲಕ ಹಲವಾರು ಪ್ರಗತಿಪರ ಕಾರ್ಯಗಳನ್ನು ಮಾಡಿದ್ದರು. ಎಂ.ಪಿ.ಪ್ರಕಾಶ್ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಬಿ.ಶೇಷಾದ್ರಿ ಸಲಹೆಯಂತೆ ಜಿಲ್ಲೆಯಲ್ಲಿ ಆರಂಭವಾದ ನಿರ್ಮಲ ಕರ್ನಾಟಕ ಯೋಜನೆ ಪ್ರಸ್ತುತ ರಾಜ್ಯದಲ್ಲಿ ಅನುಷ್ಠಾನಗೊಂಡಿದೆ.

ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳ ವಿಶ್ಲೇಷಣೆಯಲ್ಲಿ ಬಿ.ಶೇಷಾದ್ರಿ ಪರಿಣಿತರಾಗಿದ್ದರು. ಮಾನವೀಕ ಅಧ್ಯಯನಕ್ಕಾಗಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ನೀಡಲಾಗುವ ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿಗೆ ಬಿ.ಶೇಷಾದ್ರಿ ಭಾಜನರಾಗಿದ್ದರು.

Leave a Reply

Your email address will not be published. Required fields are marked *

Back To Top