Saturday, 18th August 2018  

Vijayavani

ಭಾರೀ ಮಳೆಗೆ ತತ್ತರಿಸಿದ ಕೇರಳದಲ್ಲಿ ಮೋದಿ ವೈಮಾನಿಕ ಸಮೀಕ್ಷೆ: ಐನೂರು ಕೋಟಿ ನೆರವು ಘೋಷಣೆ        ಕೊಡಗಿಗೆ ಮಳೆ ಸಂಕಷ್ಟ: ಹಾನಿ ಬಗ್ಗೆ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿಗೆ ಮುಖ್ಯಕಾರ್ಯದರ್ಶಿ ವರದಿ        ಕೊಡಗಿನ ಗೋಣಿಕೊಪ್ಪದಲ್ಲಿ ಮಳೆಯ ಅಬ್ಬರಕ್ಕೆ ಕುಸಿದ ಮನೆ: ನಾಲ್ಕು ಮಂದಿ ದುರ್ಮರಣ        ಚಾರ್ಮಾಡಿ ಘಾಟ್​​ನ ತಿರುವಿನಲ್ಲಿ ಕೆಟ್ಟು ನಿಂತ ವಾಹನ: ಧರ್ಮಸ್ಥಳ ಮಾರ್ಗದಲ್ಲಿ ವಿಪರೀತ ಟ್ರಾಫಿಕ್​ ಜಾಮ್        ಅರಕಲಗೂಡನಲ್ಲಿ 200 ಮನೆಗಳು ಜಲಾವೃತ: ದ್ವೀಪದಂತಾದ ರಾಮನಾಥಪುರ, ಮುಳುಗಿದ ನಿಮಿಷಾಂಭ ದೇಗುಲ       
Breaking News

ಹಂಪಿ, ಟಿ.ಬಿ.ಡ್ಯಾಮ್‌ಗೆ ಪ್ರವಾಸಿಗರ ಲಗ್ಗೆ

Sunday, 17.06.2018, 5:10 PM       No Comments

<< ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರಿನ ಹರಿವು> ತಂಪಲ್ಲಿ ಸ್ಮಾರಕಗಳ ಕಣ್ತುಂಬಿಕೊಳ್ಳಲು ಉತ್ಸಾಹ>>

 ಹೊಸಪೇಟೆ: ಕಳೆದ ಕೆಲವು ದಿನಗಳಿಂದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ತುಂಗಭದ್ರಾ ಅಣೆಕಟ್ಟೆಗೆ ಜೀವಕಳೆ ಬಂದಿದೆ. ಎರಡು ದಿನಗಳ ರಜೆಯನ್ನು ಕಳೆಯಲು ಹಂಪಿಗೆ ಬಂದವರು ತುಂಗಭದ್ರಾ ಜಲಾಶಯವನ್ನು ಕಣ್ತುಂಬಿಕೊಳ್ಳುತ್ತಿದ್ದು, ಎಲ್ಲೆಡೆ ಪ್ರವಾಸಿಗರೇ ಕಂಡು ಬರುತ್ತಿದ್ದಾರೆ.

ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಜಲಾಶಯದ ಅಂಚಿನಲ್ಲಿರುವ ಗುಂಡಾ ರಕ್ಷಿತಾರಣ್ಯ ಸೊಬಗು ಹೆಚ್ಚಾಗಿದೆ. ಅಕ್ಕಪಕ್ಕದ ಬೆಟ್ಟ, ಗುಡ್ಡಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಈ ಎರಡೂ ಭಾಗಗಳಲ್ಲಿ ನದಿಯ ಅಲೆಗಳ ಅಬ್ಬರ ನೋಡುವುದೇ ಕಣ್ಣಿಗೆ ಹಬ್ಬ. ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದು ತಿಳಿಯುತ್ತಿದ್ದಂತೆಯೇ ಪ್ರವಾಸಿಗರು ಇಲ್ಲಿಗೆ ದೌಡಾಯಿಸಲು ಆರಂಭಿಸಿದ್ದು, ಟಿಬಿ ಡ್ಯಾಮ್‌ನ ಸುತ್ತಮುತ್ತ ಶನಿವಾರ ಜನವೋ ಜನ.

ಮಹಿಳೆಯರು, ಮಕ್ಕಳು ಸೇರಿ ಪ್ರತಿಯೊಬ್ಬರೂ ನದಿ ತಟದಲ್ಲಿ ನೀರಿನ ಹರಿವು ನೋಡಿ ಖುಷಿ ಪಡುತ್ತಿರುವುದು ಕಂಡು ಬಂತು. ಜಲಾಶಯದ ನೀರಿನ ಅಲೆಗಳ ಹೊಡೆತದಲ್ಲೂ ಸಂಭ್ರಮಿಸುತ್ತಿದ್ದರು. ಯುವಕ ಯುವತಿಯರು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ತಲ್ಲೀನರಾಗಿದ್ದರು. ಇನ್ನು ಬೆಂಗಳೂರು ರಸ್ತೆಯ ಗುಂಡಾ ರಕ್ಷಿತಾರಣ್ಯ ಪ್ರದೇಶದ ವ್ಯಾಪ್ತಿಗೆ ಬರುವ ನದಿ ಅಂಚಿನಲ್ಲೂ ಪ್ರವಾಸಿಗರ ದಂಡೇ ಕಂಡು ಬಂತು. ಜಲಾಶಯದ ಗುಡ್ಡದ ಮೇಲಿರುವ ವೈಕುಂಠ ಪ್ರವಾಸಿ ಮಂದಿರ, ಉದ್ಯಾನವನದಲ್ಲೂ ಜಾತ್ರೆಯ ವಾತಾವರಣ ಸೃಷ್ಟಿಯಾಗಿತ್ತು.

ಸ್ಮಾರಕಗಳ ಮೆರುಗು ಹೆಚ್ಚಿಸಿದ ವರ್ಷಧಾರೆ: ಸತತವಾಗಿ ಸುರಿಯುತ್ತಿರುವ ಮಳೆಯಿಂದ ವಿಶ್ವ ವಿಖ್ಯಾತ ಹಂಪಿ ತನ್ನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ನೀಲಿ ಆಕಾಶ, ಮೋಡಗಳು ಸ್ಮಾರಕಗಳಿಗೆ ಮುತ್ತಿಕ್ಕುತ್ತಿದ್ದು, ನಯನಮನೋಹರವಾಗಿದೆ. ಇಂಥ ಅದ್ಭುತ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ಹಾಗೂ ಛಾಯಾಗ್ರಾಹಕರು, ಪರಿಸರ ಪ್ರೇಮಿಗಳು ಹರಿದು ಬರುತ್ತಿದ್ದಾರೆ.

ಹಿತವಾದ ವಾತಾವರಣ, ಮನಮೋಹಕ ತುಂಗಭದ್ರಾ ನದಿ, ಹಂಪಿ ಸ್ಮಾರಕಗಳ ಪ್ರಕೃತಿ ಸೊಬಗು, ಪ್ರಸಿದ್ಧ ದೇಗುಲಗಳು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಹೀಗಾಗಿ ಸಾಮಾನ್ಯ ದಿನಗಳಿಗಿಂತ ವೀಕೆಂಡ್‌ನಲ್ಲಿ ಹಂಪಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ರಾಜ್ಯ, ದೇಶಗಳಿಂದ ಪ್ರವಾಸಿಗರ ದಂಡು ಹರಿದು ಬರುತ್ತಿದ್ದು, ವಸತಿ ಗೃಹಗಳು, ಹೋಮ್ ಸ್ಟೇ, ಲಾಡ್ಜ್‌ಗಳು ಭರ್ತಿಯಾಗಿವೆ. ಮಳೆ ಹಾಗೂ ತಂಪಾದ ವಾತಾವರಣ ಜತೆಗೆ ಐತಿಹಾಸಿಕ ಸ್ಮಾರಕಗಳನ್ನು ನೋಡುವುದು ಪ್ರವಾಸಿಗರಿಗೆ ಥ್ರಿಲ್ ನೀಡುತ್ತಿದೆ. ಅಲ್ಲದೆ ಛಾಯಾಗ್ರಾಹಕರು ತಮ್ಮ ಕ್ಯಾಮರಾದಲ್ಲಿ ಅತ್ಯುದ್ಭುತ ದೃಶ್ಯಗಳನ್ನು ಸೆರೆಹಿಡಿದು ಖುಷಿಪಡುತ್ತಿದ್ದಾರೆ.

ವರ್ಷದಲ್ಲಿ ಒಮ್ಮೆಯಾದರೂ ಇಲ್ಲಿ ಬರುತ್ತೇವೆ. ಸ್ನೇಹಿತರ ಬರ್ತ್‌ಡೇ, ವಿವಾಹ ವಾರ್ಷಿಕೋತ್ಸವ ಇಲ್ಲಿ ಆಚರಿಸಿ ಸಂಭ್ರಮಿಸುತ್ತೇವೆ. ಇಲ್ಲಿಗೆ ಬಂದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಈ ಬಾರಿ ಮಳೆಯಿಂದ ಹಂಪಿ ಸೌಂದರ್ಯ ಹೆಚ್ಚಿದ್ದು, ಮುದ ನೀಡುತ್ತಿದೆ ಎನ್ನುತ್ತಾರೆ ಪ್ರವಾಸಿಗ, ಬೆಂಗಳೂರಿನ ಹೈಕೋರ್ಟ್ ವಕೀಲ ಅನಂತಸ್ವಾಮಿ.

Leave a Reply

Your email address will not be published. Required fields are marked *

Back To Top