Sunday, 21st October 2018  

Vijayavani

ಅರ್ಜುನ್‌ ಸರ್ಜಾಕಡೆಯಿಂದ ಬೆದರಿಕೆ ಕರೆ - ಕಾನೂನು ಹೋರಾಟದ ಬಗ್ಗೆ ದಾಖಲೆ ಸಂಗ್ರಹ - ಸುದ್ದಿಗೋಷ್ಠಿಯಲ್ಲಿ ಶ್ರುತಿ ಗಂಭೀರ ಆರೋಪ        ಭಾವೈಕ್ಯತೆ ಶ್ರೀಗಳಿಗೆ ಕಣ್ಣೀರ ವಿದಾಯ - ಕ್ರಿಯಾಸಮಾಧಿಯಲ್ಲಿ ಸಿದ್ದಲಿಂಗ ಶ್ರೀ ಲೀನ - ಭಕ್ತಸಾಗರದಿಂದ ತೋಂಟದಾರ್ಯರಿಗೆ ಅಂತಿಮ ನಮನ        ಡಿಕೆಶಿ ಶೋ ಮಾಡೋದು ಬಿಡ್ಬೇಕು - ಪಕ್ಷದ ಪರ ಕೆಲಸ ಮಾಡ್ಬೇಕು - ಬಳ್ಳಾರಿ ಪ್ರಚಾರದಲ್ಲಿ ಬಯಲಾಯ್ತು ಜಾರಕಿಹೊಳಿ ಸಿಟ್ಟು        ಸಿಎಂ ಎಚ್‌ಡಿಕೆ ಮತ್ತೆ ಟೆಂಪಲ್‌ರನ್‌ - ಶಕ್ತಿ ದೇವತೆ ಸನ್ನಿಧಿಗೆ ಕುಮಾರಸ್ವಾಮಿ - ಮಹಾರಾಷ್ಟ್ರದ ತುಳಜಾ ಭವಾನಿ ದೇಗುಲಕ್ಕೆ ಭೇಟಿ        ಶಿರಡಿ ಸಾಯಿ ಸಮಾಧಿ ಶತಮಾನೋತ್ಸವ ಹಿನ್ನೆಲೆ - ಸಾಯಿ ಸನ್ನಿಧಿಗೆ ಭಕ್ತ ಸಾಗರ - ನಾಲ್ಕು ದಿನದಲ್ಲಿ 5 ಕೋಟಿ ರೂಪಾಯಿ ಕಾಣಿಕೆ        ರೋಡ್ ರೋಲರ್​ನ್ನೂ ಬಿಡದ ಕಳ್ಳರು - ವರ್ತೂರು ಬಳಿ ನಿಲ್ಲಿಸಿ ಎಸ್ಕೇಪ್ ಆದ ಚೋರರು - ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ       
Breaking News

ಇಂದಿನಿಂದ ರಾಷ್ಟ್ರೀಯ ಜಾನಪದ ರಂಗೋತ್ಸವ

Monday, 11.06.2018, 5:09 PM       No Comments

<<ಹಬೊಹಳ್ಳಿಯಲ್ಲಿ ನಾಡೋಜ ಬೆಳಗಲ್ಲು ವೀರಣ್ಣ ಹೇಳಿಕೆ>>

ಹಗರಿಬೊಮ್ಮನಹಳ್ಳಿ: ತಾಲೂಕಿನ ಹಂಪಸಾಗರ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಳ್ಳಾರಿ ಶ್ರೀರಾಮಾಂಜನೇಯ ತೊಗಲುಗೊಂಬೆ ಮೇಳ ಟ್ರಸ್ಟ್ ಆಶ್ರಯದಲ್ಲಿ ಜೂ.12 ರಿಂದ 14ರ ವರೆಗೆ ರಾಷ್ಟ್ರೀಯ ಜಾನಪದ ರಂಗೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಸಂಚಾಲಕ, ನಾಡೋಜ ಬೆಳಗಲ್ಲು ವೀರಣ್ಣ ಹೇಳಿದರು.

ಹಂಪಸಾಗರದ ಮಹಾದೇವ ತಾತ ಮಠದ ಆವರಣದಲ್ಲಿ ನಡೆಯುವ ರಂಗೋತ್ಸವವನ್ನು ನಿವೃತ್ತ ಪ್ರಾಧ್ಯಾಪಕ ಕೆ.ಪನ್ನಂಗಧರ ಉದ್ಘಾಟಿಸುವರು. ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜೂ.12 ರಂದು ಕಾವ್ಯ ವಾಹಿನಿ ಗಾಯನ ಸಂಸ್ಥೆಯಿಂದ ಜಾನಪದ ಗೀತೆಗಳ ಗಾಯನ, ಬೆಳಗಾವಿಯ ರಾಮದುರ್ಗದ ಡಾ.ಲಕ್ಷ್ಮಿಬಾಯಿ ನೀಲಪ್ಪನವರ ಮಹಿಳಾ ತಂಡದಿಂದ ಸಂಗ್ಯಾಬಾಳ್ಯಾ ಸಣ್ಣಾಟ ಪ್ರದರ್ಶನಗೊಳ್ಳಲಿದೆ. ಜೂ.13 ರಂದು ದುರ್ಗಾದೇವಿ ಮಹಿಳಾ ಪರಿಶಿಷ್ಟ ಜಾತಿ ಕಲಾ ಸಂಘದಿಂದ ಜಾನಪದ ಗೀತೆಗಳ ಗಾಯನ, ಕೇರಳದ ಪಾಲ್‌ಘಾಟ್ ತೋಲ್ ಪಾವೈಕೂತ್ ಸಂಘದಿಂದ ತೊಗಲುಗೊಂಬೆ ಆಟ, ಹೊಸಪೇಟೆಯ ಅಂಜಲಿ ಭರತ ನಾಟ್ಯ ಕಲಾ ತಂಡದಿಂದ ಭರತನಾಟ್ಯ ಪ್ರದರ್ಶನ, ಉತ್ತಂಗಿಯ ಹೊನ್ನತೇಶ್ವರಿ ಬಯಲಾಟ ಸಂಘದಿಂದ ದ್ರೌಪದಿ ಸ್ವಯಂ ವರ ಬಯಲಾಟ ಪ್ರದರ್ಶನ ಏರ್ಪಡಿಸಿದ್ದು, ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಬಿ.ಸಿ.ಚಂದ್ರಶೇಖರ್ ಉದ್ಘಾಟಿಸುವರು ಎಂದರು.

ಜೂ.14ರಂದು ಚಿಂತ್ರಪಳ್ಳಿ ಮೈಲಮ್ಮದೇವಿ ಪರಿಶಿಷ್ಟ ಜಾತಿ ಕಲಾ ಸಂಘದಿಂದ ಜಾನಪದ ಗೀತೆಗಳ ಗಾಯನ, ಆಂಧ್ರಪ್ರದೇಶದ ವೆಂಕಟೇಶಲು ಕಲಾ ಸಂಘದಿಂದ ಲಂಕಾ ದಹನಂ ತೊಗಲುಗೊಂಬೆ ಆಟ, ಚಿಲುಗೋಡು ಕರಿಯಮ್ಮ ದೇವಿ ಬಯಲಾಟ ಸಾಂಸ್ಕೃತಿಕ ಸಂಘದಿಂದ ಇಂದ್ರಜಿತ್ ಕಾಳಗ ಬಯಲಾಟ ನಡೆಯಲಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

Back To Top