Wednesday, 13th December 2017  

Vijayavani

1. ನನ್ನ ಮಗನದ್ದು ವ್ಯವಸ್ಥಿತ ಕೊಲೆ- ನ್ಯಾಯ ಸಿಗದಿದ್ರೆ ಕುಟುಂಬದೊಂದಿಗೆ ಆತ್ಮಹತ್ಯೆ- ಪರೇಶ್​ ಮೇಸ್ತಾ ಹೆತ್ತವರ ಕಣ್ಣೀರು 2. ರವಿ ಬೆಳಗೆರೆ ಆರೋಗ್ಯದಲ್ಲಿ ಏರುಪೇರು ಹಿನ್ನೆಲೆ- ಪರಪ್ಪನ ಅಗ್ರಹಾರದಿಂದ ಆಸ್ಪತ್ರೆಗೆ ಶಿಫ್ಟ್​- ಜಯದೇವ ಹಾಸ್ಪಿಟೆಲ್​ಗೆ ಕರೆಯೊಯ್ದ ಸಿಬ್ಬಂದಿ 3. ಸಿಎಂ ಸಿದ್ದರಾಮಯ್ಯ ನಕಲಿ ಕಾಂಗ್ರೆಸಿಗ- ರಾಜ್ಯದಲ್ಲಿರೋದು ಮಾರ್ಕೆಟಿಂಗ್ ಸರ್ಕಾರ- ಜೆಡಿಎಸ್​ ಸಮಾವೇಶದಲ್ಲಿ ದೇವೇಗೌಡರ ಗುಡುಗು 4. ಸೂಪರ್​​ ಸ್ಟಾರ್ ಬರ್ತಡೇಗೆ ಬಿಎಸ್​ವೈ ವಿಶ್- ಧನ್ಯವಾದ ತಿಳಿಸಿದ ತಲೈವಾ- ಥ್ಯಾಂಕ್ಯೂ ಯಡಿಯೂರಪ್ಪ ಜೀ ಎಂದು ರಜನಿ ಟ್ವೀಟ್ 5. ಅಬ್ಬರಿಸಿ ಬೊಬ್ಬಿರಿದ ರೋಹಿತ್ ಶರ್ಮಾ- ಮೊಹಾಲಿಯಲ್ಲಿ ವಿಶ್ವ ಕ್ರಿಕೆಟ್​ ದಾಖಲೆಗಳೆಲ್ಲಾ ಪೀಸ್​​​ಪೀಸ್​- 3ನೇ ದ್ವಿಶತಕ ಸಿಡಿಸಿದ ರೋಹಿತ್​
Breaking News :

ವಿಮಾನದಲ್ಲಿ ಹುಟ್ಟುತ್ತಲೇ ಅದೃಷ್ಟ! ಮಗುವಿಗೆ ಜೀವನಪರ್ಯಂತ ಏರ್ ಪಾಸ್!

Monday, 19.06.2017, 10:31 AM       No Comments

ನವದೆಹಲಿ: ಸೌದಿ ಅರೇಬಿಯಾದಿಂದ ಭಾರತಕ್ಕೆ ಬರುತ್ತಿದ್ದ ವಿಮಾನದಲ್ಲಿ ಭಾನುವಾರ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿಗೆ ಈಗ ಅದೃಷ್ಟ ಖುಲಾಯಿಸಿದ್ದು, ಜೆಟ್​ ಏರ್​ ವೇಸ್​ ಸಂಸ್ಥೆ ಮಗುವಿಗೆ ಲೈಫ್​ ಟೈಮ್​ ಏರ್​ ಟಿಕೆಟ್ ನೀಡಲು ನಿರ್ಧರಿಸಿದೆ. ಅಂದರೆ ಜೀವನಪರ್ಯಂತ ಆ ಮಗು ಜೆಟ್​ ಏರ್​ ವೇಸ್​ ಸಂಸ್ಥೆಯ ವಿಮಾನದಲ್ಲಿ ಉಚಿತವಾಗಿ ಯಾನ ಮಾಡಬಹುದು.

ಕೇರಳದ ಮಹಿಳೆಯೊಬ್ಬರು ಸೌದಿ ಅರೇಬಿಯಾದ ಡಮ್ಮಮ್​ನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದರು. ಆದರೆ ಅವರಿಗೆ ಮಾರ್ಗ ಮಧ್ಯೆ 35 ಸಾವಿರ ಅಡಿ ಎತ್ತರಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ನೆರವಿಗೆ ಧಾವಿಸಿದ ವಿಮಾನದ ಸಿಬ್ಬಂದಿ ಮತ್ತು ವಿಮಾನದಲ್ಲಿದ್ದ ನರ್ಸ್​ ಮಹಿಳೆಗೆ ಹೆರಿಗೆ ಮಾಡಿಸಿದ್ದರು. ನಂತರ ವಿಮಾನವನ್ನು ಮುಂಬೈನಲ್ಲಿ ಇಳಿಸಿ ಮಹಿಳೆ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾಯಿ ಮತ್ತು ಮಗು ಆರೋಗ್ಯದಿಂದಿದ್ದಾರೆ.

ಇದೇ ಮೊದಲ ಬಾರಿಗೆ ಜೆಟ್ ಏರ್​ವೇಸ್​ ಸಂಸ್ಥೆಯ ವಿಮಾನದಲ್ಲಿ ಮಗು ಜನಿಸಿದೆ. ಹಾಗಾಗಿ ಜೆಟ್​ ಏರ್​ವೇಸ್​ ಮಗುವಿಗೆ ಲೈಫ್​ ಟೈಮ್​ ಏರ್​ ಟ್ರಾವಲ್​ ಪಾಸ್​ ನೀಡಲು ನಿರ್ಧರಿಸಿದಿದೆ. ಮಗು ಜೆಟ್​ ಏರ್​ವೇಸ್​ ವಿಮಾನದಲ್ಲಿ ಯಾವುದೇ ಸ್ಥಳಕ್ಕೆ ಉಚಿತವಾಗಿ ಪ್ರಯಾಣಿಸಲು ಈ ಪಾಸ್​ ಅನ್ನು ಬಳಸಬಹುದು ಎಂದು ಸಂಸ್ಥೆ ತಿಳಿಸಿದೆ. ಹುಟ್ಟುತ್ತಲೇ ಅದೃಷ್ಟ ಕುಲಾಯಿಸುವುದೆಂದ್ರೆ ಇದೇ ಇರಬೇಕು!

– ಏಜೆನ್ಸೀಸ್​

Leave a Reply

Your email address will not be published. Required fields are marked *

Back To Top