Monday, 15th October 2018  

Vijayavani

ಜಮಖಂಡಿ ಸಂಸ್ಥಾನ ಜಯಿಸಲು ತಂತ್ರ​​-ಕೈ​ ವಿರುದ್ಧ ಕಮಲ ಹೆಣೆದ ಜಾಲ-ರಾಮನಗರ, ಮಂಡ್ಯ ಶಿವಮೊಗ್ಗದಲ್ಲಿ ನಾಮಿನೇಷನ್​        ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಷ್ಟೇ ತಡ - ಶುರುವಾಯ್ತು ರಾಜ್ಯ ನಾಯಕರ ವಾಕ್ಸಮರ - ಮಧು ಹರಕೆಯ ಕುರಿ ಎಂದ ಈಶ್ವರಪ್ಪ        ಜಲಸ್ಫೋಟದಿಂದ ಬಾಯ್ತೆರೆದಿದೆ ತಾಕೇರಿ ಬೆಟ್ಟ - ಬಿರುಕು ಹೆಚ್ಚಾಗಿ ಕುಸಿಯುತ್ತಿದೆ ಆಳೆತ್ತರದ ಮಣ್ಣು        ರೈತನ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ- ಬೆಲೆ ಇಳಿಕೆಯಿಂದ ಬಾಗಲಕೋಟೆ ರೈತ ಕಂಗಾಲು - ಕೋಲಾರದಲ್ಲಿ ನಕಲಿ ಬೀಜದಿಂದ ಹೂಕೋಸು ಲಾಸು        ಜಂಬೂಸವಾರಿಗೆ ಶುರುವಾಗಿದೆ ಕೌಂಟ್​ಡೌನ್​ - ಆರೇ ದಿನಕ್ಕೆ ಹೋಟೆಲ್​ಗಳು ಹೌಸ್​ಫುಲ್​ - 2 ನಿಮಿಷದಲ್ಲಿ 4 ಬಾಳೆಹಣ್ಣು ಗುಳುಂ.        ಹುಬ್ಬಳ್ಳಿಯಲ್ಲಿ ಧರೆಗಿಳಿದಿದೆ ಹೂವಿನ ಲೋಕ - ತರಕಾರಿಯಲ್ಲಿ ಕಣ್ಮಣ ಸೆಳೆದ ಕಲಾಕೃತಿ - ಫಲಪುಷ್ಪ ಪ್ರದರ್ಶನಕ್ಕೆ ಸಖತ್​ ರೆಸ್ಪಾನ್ಸ್​​       
Breaking News

ನಗದುರಹಿತರಾಗೋದು ಹೇಗೆ?

Monday, 05.12.2016, 2:00 AM       No Comments

| ಬಿ.ವಿ.ರುದ್ರಮೂರ್ತಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನವೆಂಬರ್ 8ರಂದು 500, 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ನಿಷೇಧಿಸುವ ನಿರ್ಧಾರ ಪ್ರಕಟಿಸಿದ ಬಳಿಕ 11.5 ಲಕ್ಷ ಕೋಟಿ ರೂಪಾಯಿ ಠೇವಣಿ ಮಾಡಲ್ಪಟ್ಟಿವೆ. ಈ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿದ್ದ 500, 1000 ರೂ. ನೋಟುಗಳ ಮೌಲ್ಯ 15.44 ಲಕ್ಷ ಕೋಟಿ ರೂ. ನಿರೀಕ್ಷೆಗೂ ಮೀರಿ ಠೇವಣಿ ಇರಿಸಿದ್ದನ್ನು ನೋಡುತ್ತ, ಕಾಳಧನವನ್ನು ಲೆಕ್ಕಪತ್ರಕ್ಕೆ ಸೇರಿಸಲಾಗುತ್ತಿದೆ ಎಂದು ಅನೇಕರು ಆರೋಪಿಸುತ್ತಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೊಂದನ್ನು ಅವರು ಮರೆತಿದ್ದಾರೆ. ನಗದುರಹಿತ ಅರ್ಥವ್ಯವಸ್ಥೆ ಜಾರಿಗೊಂಡರೆ, ನಗದು ರಹಿತ ವಹಿವಾಟಿನಿಂದಾಗುವ ಪ್ರಯೋಜನಗಳು ಏನು ಎಂಬುದನ್ನು ಅವಲೋಕಿಸುವಲ್ಲಿ ಟೀಕಾಕಾರರು ಎಡವಿದ್ದಾರೆ. ಡಿಜಿಟಲ್ ಹಣವನ್ನು ಬಳಕೆ ಮತ್ತು ಕಡಿಮೆ ನಗದು ವಹಿವಾಟು ಖಚಿತವಾಗಿಯೂ ಒಂದು ಬದ್ಧತೆಯನ್ನು ಮೂಡಿಸಬಲ್ಲದು ಹಾಗೂ ಕಾಳಧನದ ಪರ್ಯಾಯ ಅರ್ಥವ್ಯವಸ್ಥೆಗೆ ಕೊಡಲಿ ಏಟು ನೀಡಲಿದೆ.

ಆದರೆ, ನಗದು ರಹಿತ ವಹಿವಾಟು ನಡೆಸುವುದು ಹೇಗೆ ಎಂಬುದೇ ಬಹುದೊಡ್ಡ ಪ್ರಶ್ನೆ. ಭಾರತದ ಅರ್ಥವ್ಯವಸ್ಥೆಯ ಬಹುಪಾಲು ಗ್ರಾಮೀಣ ಪ್ರದೇಶವಾಗಿದ್ದು, ಇಂತಹ ವ್ಯವಸ್ಥೆಯಲ್ಲಿ ನಗದು ರಹಿತ ವಹಿವಾಟು ಸಾಧ್ಯವೇ? ಎಲ್ಲರೂ ಒಂದೇ ತೆರನಾಗಿ ಹಣಕಾಸಿನ ಸಾಕ್ಷರತೆ ಹೊಂದಿದ್ದಾರೆಯೇ? ಎಲ್ಲೆಡೆ ಇಂಟರ್ನೆಟ್, ನೆಟ್ವರ್ಕ್ ಸಂಪರ್ಕ, ಸ್ಮಾರ್ಟ್ಫೋನ್ ಬಳಕೆ ಹಾಗೂ ಇತರೆ ಮೂಲಸೌಕರ್ಯಗಳು ಲಭ್ಯವಿದೆಯೇ? ಇಷ್ಟೆಲ್ಲ ಸವಾಲುಗಳಿರುವಾಗ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು ಎಂದು ಕುತೂಹಲದಿಂದ ನೋಡುವವರೇ ಹೆಚ್ಚು. ಹೀಗಾದರೆ ನಾವು ಬದಲಾಗುವುದು, ನಮ್ಮ ಬದುಕಿನಲ್ಲಿ ಬದಲಾವಣೆ ತರುವುದು ಯಾವಾಗ? ಎಲ್ಲ ಅನ್ವೇಷಣೆಯ ಮೂಲ ಅಗತ್ಯ. ಅದೇ ರೀತಿ, ನಮ್ಮ ಎಲ್ಲ ಜನರೂ ಅಗತ್ಯಕ್ಕೆ ತಕ್ಕಂತೆ ಬಹುಬೇಗವಾಗಿ ಬದಲಾವಣೆಗೆ ಒಗ್ಗಿಕೊಳ್ಳುತ್ತಾರೆ ಎಂಬ ವಿಶ್ವಾಸವೂ ನನಗಿದೆ.

ನಗದು ರಹಿತ ವಹಿವಾಟು ನಡೆಸುವುದಕ್ಕೆ ನಾವು ಡೆಬಿಟ್/ಕ್ರೆಡಿಟ್ ಕಾರ್ಡ್, ನೆಟ್ಬ್ಯಾಂಕಿಂಗ್, ಯುಪಿಐ, ಆಧಾರ್ ಆಧಾರಿತ ಪಾವತಿ ವ್ಯವಸ್ಥೆ-ಎಇಪಿಎಸ್, ಇ-ಕೂಪನ್, ಗಿಫ್ಟ್ಕಾರ್ಡ್ ಮುಂತಾದವುಗಳ ಪ್ರಯೋಜನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. ರುಪೇ ಕಾರ್ಡ್ ಬಳಸುವುದಕ್ಕೆ ಉತ್ತೇಜನ ನೀಡುವಂತಹ ಕ್ರಮಗಳನ್ನು ಸರ್ಕಾರವೂ ತೆಗೆದುಕೊಳ್ಳಬೇಕು. ವಿಶೇಷವಾಗಿ ಪಾಯಿಂಟ್ ಆಫ್ ಸೇಲ್ ಮಷಿನ್ಗಳ ಬಳಕೆ, ಮೊಬೈಲ್ ವಾಲೆಟ್ ಬಳಕೆಗೂ ಉತ್ತೇಜನ ನೀಡಬೇಕು.

ಅನಾಣ್ಯೀಕರಣವು ನಿಸ್ಸಂಶಯವಾಗಿಯೂ ಅಲ್ಪಾವಧಿಯಲ್ಲಿ ಷೇರುಪೇಟೆಗೂ ನೋವುಂಟುಮಾಡಬಹುದು. ಆದರೆ, ಇತಿಹಾಸದ ಆಳಕ್ಕೆ ಇಳಿದು ನೋಡಿದರೆ ಈ ಕ್ರಮದ ದೀರ್ಘಾವಧಿ ಪ್ರಯೋಜನ ಏನು ಎಂಬುದು ಮನವರಿಕೆಯಾದೀತು. ಬಡ್ಡಿದರದಲ್ಲಿ ಇಳಿಕೆ, ಭ್ರಷ್ಟಾಚಾರ ಪ್ರಮಾಣ, ವಿತ್ತೀಯಕೊರತೆ ಇಳಿಕೆಯಾಗಿ, ಗರಿಷ್ಠ ಪ್ರಮಾಣದ ತೆರಿಗೆ ಸಂಗ್ರಹ, ವ್ಯವಹಾರದಲ್ಲಿ ಪಾರದರ್ಶಕತೆ, ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯು ಇನ್ನಷ್ಟು ಬಲಿಷ್ಠವಾಗಿ, ಎಲ್ಲರೂ ಹಣಕಾಸು ವ್ಯವಸ್ಥೆಯೊಳಗೆ ಸೇರ್ಪಡೆಗೊಂಡು ದೇಶದ ಅರ್ಥವ್ಯವಸ್ಥೆಯೂ ಬಲಿಷ್ಠಗೊಳ್ಳಲಿದೆ.

Leave a Reply

Your email address will not be published. Required fields are marked *

Back To Top