Friday, 18th August 2017  

Vijayavani

1. ಕಾಂಗ್ರೆಸ್‌ನಲ್ಲಿ ಎಡಪಂಥಿಯರಿಗೆ ಮಾತ್ರ ಮಣೆ- ಚುನಾವಣಾ ತಂತ್ರಗಾರ ಕೈ ಗುಡ್‌ಬೈ- ಅಲ್ಪ ಸಂಖ್ಯಾತರರನ್ನ ಅತಿಯಾಗಿ ಓಲೈಸ್ತಿದ್ಯಾ ಕಾಂಗ್ರೆಸ್‌.? 2. ಜೆಡಿಎಸ್​ ಭಿನ್ನರಿಗೆಲ್ಲಾ ಇಲ್ಲಾ ಟಿಕೆಟ್​ – 3 ಕ್ಷೇತ್ರಗಳ ಟಿಕೆಟ್​​​​​​​​ಗೆ ಖಾತ್ರಿ ನೀಡದ ಖರ್ಗೆ- ತ್ರಿಶಂಕು ಸ್ಥಿತಿಯಲ್ಲಿ ಜೆಡಿಎಸ್​​​​​​ ಭಿನ್ನರ ಸ್ಥಿತಿ 3. ಸಿಲಿಕಾನ್ ಸಿಟಿಗೆ ಖತರ್ನಾಕ್​ ಗ್ಯಾಂಗ್​ ಎಂಟ್ರಿ- ಸೆಕ್ಯೂರಿಟಿ ಡ್ರೆಸ್​​​ನಲ್ಲಿ ಮಾಡ್ತಿದ್ದಾರೆ ಕಳ್ಳತನ- ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಕೃತ್ಯ 4. ರಾಜೀನಾಮೆ ಬಳಿಕ ವಿಶಾಲ್‌ ಸಿಕ್ಕಾ ಮೊದಲ ಮಾತು- ನನ್ನ ಜೀವನದ ದುಃಖದ ವಿಚಾರ ಅಂತಾ ಬೇಸರ- ಅತ್ತ ನಾನು ಕಾರಣನಲ್ಲ ಎಂದ ನಾರಾಯಣ ಮೂರ್ತಿ 5. ಯುಪಿ ಆಸ್ಪತ್ರೆಯಲ್ಲಿ ಮಕ್ಕಳ ಸಾವು ಪ್ರಕರಣ- ಹೈಕೋರ್ಟ್‌ನಿಂದ ಯೋಗಿ ಸರ್ಕಾರಕ್ಕೆ ತರಾಟೆಗೆ- ಕೂಡಲೇ ವರದಿ ನೀಡಲು ಸೂಚನೆ
Breaking News :

ಬಿಜೆಪಿ ಗೆದ್ದರೆ ಯಡಿಯೂರಪ್ಪನೇ ಮುಖ್ಯಮಂತ್ರಿ: ಅಮಿತ್ ಶಾ ಘೋಷಣೆ

Friday, 26.05.2017, 6:28 PM       No Comments

ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸುದ್ದಿಗೋಷ್ಠಿ ನಡೆಸಿದ್ದು, 3 ವರ್ಷಗಳ ಕೇಂದ್ರ ಸರ್ಕಾರದ ಸಾಧನೆಯ ಬಗ್ಗೆ ಮಾತನಾಡಿದ್ದಾರೆ.

3 ವರ್ಷಗಳಲ್ಲಿ ಕೇಂದ್ರ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸಿದೆ. ವಿಶ್ವ ಮಟ್ಟದಲ್ಲಿ ದೇಶವನ್ನ ಗುರುತಿಸುವಂತಾಗಿದೆ. ಸೈನಿಕರ ಒಆರ್​ಒಪಿ ಭರವಸೆ ಈಡೇರಿಸಿದ್ದೇವೆ ಎಂದು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಹೇಳಿದ್ದಾರೆ.

ವಿಐಪಿ ಸಂಸ್ಕೃತಿಗೆ ಕೇಂದ್ರ ಸರ್ಕಾರ ಇತಿಶ್ರೀ ಹಾಡಿದೆ. ಮೋದಿ ಸರ್ಕಾರ 3 ವರ್ಷಗಳಲ್ಲಿ ಏನ್ ಮಾಡ್ತಿದೆ ಅಂತ ಕಾಂಗ್ರೆಸ್​ ಪ್ರಶ್ನಿಸ್ತಿದೆ. ಆದ್ರೆ, ಇಡೀ ವಿಶ್ವದ ಮುಂದಾಳತ್ವ ವಹಿಸುವತ್ತ ಭಾರತ ಹೆಜ್ಜೆ ಇಡುತ್ತಿದೆ. ರಕ್ಷಣಾ ಕ್ಷೇತ್ರದಲ್ಲಿ ಆಧುನೀಕರಣ ಮಾಡಿದ್ದೇವೆ. ನಮ್ಮದು ಭ್ರಷ್ಟಾಚಾರ ಮುಕ್ತ ಸರ್ಕಾರ. ಪ್ರಧಾನಿ ಮೋದಿ ದೇಶ ಕಂಡ ಯಶಸ್ವಿ ನಾಯಕ ಎಂದು ಅಮಿತ್ ಶಾ ತಿಳಿದ್ದಾರೆ,

ಈ ಮಧ್ಯೆ. ಕರ್ನಾಟಕ ರಾಜ್ಯ ಬಿಜೆಪಿ ಬಗ್ಗೆ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಅವರು ಗದಗ್ ಜಿಲ್ಲಾ ಪ್ರವಾಸದಿಂದ ಬೆಂಗಳೂರಿಗೆ ವಾಪಸಾಗುತ್ತಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಬಿಎಸ್ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವರದಿಗಾರರ ಪ್ರಶ್ನೆಗೆ ಅಮಿತ್​ ಶಾ ಸ್ಪಷ್ಟ ಉತ್ತರ ನೀಡಿದ್ದಾರೆ.

– ಪಿ ಟಿ ಐ

Leave a Reply

Your email address will not be published. Required fields are marked *

Back To Top