Tuesday, 26th September 2017  

Vijayavani

1. ಗಡಿಯಲ್ಲಿ ಬಾಲ ಬಿಚ್ಚಿದ್ರೆ ಹುಷಾರ್​- ನಡೆಯಲಿದೆ ಮತ್ತೊಂದು ಸರ್ಜಿಕಲ್​ ಸ್ಟ್ರೈಕ್​- ಪಾಕ್​ಗೆ ಬಿಪಿನ್​ ರಾವತ್​ ವಾರ್ನಿಂಗ್​ 2. ಮ್ಯಾನ್ಮಾರ್‌ನಲ್ಲಿ ಭುಗಿಲೆದ್ದ ಹಿಂಸಾಚಾರ- ಪ್ರತಿಕಾರಕ್ಕಿಳಿದ ರೋಹಿಂಗ್ಯಾ ಮುಸ್ಲಿಂರು- 92 ಜನರ ಭೀಕರ ಕಗ್ಗೊಲೆ 3. ವಿಶ್ವಕ್ಕೆ 3ನೇ ಮಹಾಯುದ್ಧದ ಭೀತಿ- ಕೋರಿಯಾ ದೃಷ್ಟಿಯಲ್ಲಿ ಅಮೆರಿಕಾವೇ ಆರೋಪಿ- ಸಮರಕ್ಕೆ ಸಿದ್ಧ ಎಂದ ಸರ್ವಾಧಿಕಾರಿ 4. ಗದಗ್​ನಲ್ಲಿ ಯಶಸ್ವಿಯಾದ ಸ್ವಚ್ಛ ಭಾರತ- ನರಗುಂದ ತಾಲೂಕು ಬಯಲು ಶೌಚಮುಕ್ತ- ಇಂದು ಉಪರಾಷ್ಟ್ರಪತಿಗಳಿಂದ ಅಧಿಕೃತ ಘೋಷಣೆ 5. ಮಳೆಗೆ ತತ್ತರಿಸಿದ ಬೆಣ್ಣೆ ದೋಸೆ ನಗರಿ- ಮಲೆನಾಡಲ್ಲಿ ಮನೆಗೆ ನುಗ್ಗಿದ ನೀರು- ಇತ್ತ ಕೋಲಾರದಲ್ಲಿ ನೂರಾರು ಎಕರೆ ಬೆಳೆ ನಾಶ
Breaking News :

ವೀಸಾ ರದ್ದತಿ ನಂತರ ಪೌರತ್ವ ನಿಯಮಗಳನ್ನು ಬಿಗಿಗೊಳಿಸಿದ ಆಸೀಸ್

Friday, 21.04.2017, 11:12 AM       No Comments

ಮೆಲ್ಬೋರ್ನ್: ಭಾರತೀಯ ಕಾರ್ಮಿಕರಲ್ಲಿ ಹೆಚ್ಚು ಜನಪ್ರಿಯವಾಗಿದ್ದ 457 ವೀಸಾವನ್ನು ರದ್ದುಗೊಳಿಸಿದ ಬೆನ್ನಲ್ಲೇ ಆಸ್ಟ್ರೇಲಿಯಾ ಹೊಸದಾಗಿ ಪೌರತ್ವ ಅರ್ಜಿ ಸಲ್ಲಿಸುವವರಿಗೆ ನಿಯಮಾವಳಿಗಳನ್ನು ಸಾಕಷ್ಟು ಬಿಗಿಗೊಳಿಸಿದೆ. ವೀಕ್ಷಿಸಿ ದಿಗ್ವಿಜಯ ನ್ಯೂಸ್ LIVE

ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಮ್ ಟರ್ನ್​ಬುಲ್ ಹೊಸ ಪೌರತ್ವ ನಿಯಮಾವಳಿಗಳನ್ನು ಗುರುವಾರ ಪ್ರಕಟಿಸಿದರು. ಆಸ್ಟ್ರೇಲಿಯಾ ಪೌರತ್ವ ಬಯಸುವವರು ಇಂಗ್ಲೀಷ್ ಜ್ಞಾನವನ್ನು ಕಡ್ಡಾಯವಾಗಿ ಹೊಂದಿರಬೇಕು, ಜತೆಗೆ ಕನಿಷ್ಠ 4 ವರ್ಷ ಆಸ್ಟ್ರೇಲಿಯಾದಲ್ಲಿ ನೆಲೆಸಿರಬೇಕು. ಅರ್ಜಿದಾರರು ಆಸ್ಟ್ರೇಲಿಯನ್ನರ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಬದ್ಧರಾಗಿರಬೇಕು ಎಂದು ಹೊಸ ನಿಯಮಾವಳಿಯಲ್ಲಿ ತಿಳಿಸಲಾಗಿದೆ. ಜತೆಗೆ ಈ ಮೊದಲು ಪೌರತ್ವ ಪಡೆಯಲು ನಡೆಸುವ ಪರೀಕ್ಷೆಯನ್ನು ತೆಗೆದುಕೊಳ್ಳಲು ಯಾವುದೇ ಮಿತಿ ಇರಲಿಲ್ಲ. ಹೊಸ ನಿಯಮಾವಳಿ ಪ್ರಕಾರ ಅರ್ಜಿದಾರ 3 ಬಾರಿ ಪರೀಕ್ಷೆಯಲ್ಲಿ ಫೇಲ್ ಆದರೆ ಅವರಿಗೆ ಮುಂದಿನ 2 ವರ್ಷ ಪೌರತ್ವ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿರುವುದಿಲ್ಲ. ಜತೆಗೆ ಪರೀಕ್ಷೆಯಲ್ಲಿ ಅಕ್ರಮ ಎಸಗಿದರೆ ಅಂತಹ ಅರ್ಜಿದಾರರನ್ನು ಫೇಲ್ ಮಾಡಲಾಗುವುದು.

ಆಸ್ಟ್ರೇಲಿಯನ್ನರ ಸಂಸ್ಕೃತಿಯನ್ನು ಬೆಂಬಲಿಸುವವರಿಗೆ ಮತ್ತು ಇಲ್ಲಿನ ನೆಲದ ಕಾನೂನನ್ನು ಗೌರವಿಸುವವರಿಗೆ ಮಾತ್ರ ಪೌರತ್ವ ನೀಡಲಾಗುವುದು. ರಾಷ್ಟ್ರದ ಹಿತದೃಷ್ಟಿಯಿಂದ ಪೌರತ್ವ ನಿಯಮಾವಳಿಗಳನ್ನು ರೂಪಿಸಲಾಗಿದೆ ಎಂದು ಟರ್ನ್​ಬುಲ್ ತಿಳಿಸಿದ್ದಾರೆ.

ಆಸೀಸ್ ವೀಸಾಘಾತ

– ಏಜೆನ್ಸೀಸ್

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *

Back To Top