Sunday, 22nd July 2018  

Vijayavani

ಶೀರೂರು ಶ್ರೀ ಸಾವಿನ ಹಿಂದೆ ರಮ್ಯಾ ಶೆಟ್ಟಿ ಕೈವಾಡ - ಗೋಡಂಬಿ ಜ್ಯೂಸ್ ಕುಡಿಸಿರೋ ಶಂಕೆ - ತನಿಖೆ ಚುರುಕುಗೊಳಿಸಿದ ಉಡುಪಿ ಪೊಲೀಸರು        ದೋಸ್ತಿ ಸರ್ಕಾರಕ್ಕೆ ಆಯುಷ್ಯ ಕಡಿಮೆ - ಜೆಡಿಎಸ್ ಜತೆ ಲೋಕ ಎಲೆಕ್ಷನ್​​ ಮೈತ್ರಿ ಬೇಡ - ತುಮಕೂರಿನಲ್ಲಿ ಮಾಜಿ ಶಾಸಕ ರಾಜಣ್ಣ ಅಪಸ್ವರ        ಡಿಸಿಎಂ ಪರಮೇಶ್ವರ್​ಗೆ ದೋಸ್ತಿ ಇಷ್ಟ - ದೊಡ್ಡಗೌಡರಿಗೆ ಆಗ್ತಿದೆಯಂತೆ ಕಷ್ಟ - ಲೋಕಸಭಾ ಮೈತ್ರಿಯಲ್ಲೇ ದೋಸ್ತಿ ಬಗ್ಗೆ ಎದ್ದಿದೆ ಗೊಂದಲ        ರಸ್ತೆಯಲ್ಲಿ ಬರ್ತಿದ್ದ ಬಾಲಕಿ ಮೇಲೆ ಹರಿದ ಕಾರು - ಪವಾಡ ಸದೃಶ್ಯ ರೀತಿಯಲ್ಲಿ ಪುಟಾಣಿ ಪಾರು - ಉತ್ತರ ಪ್ರದೇಶದಲ್ಲೊಂದು ಪವಾಡ        ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೂ ಸಂಚಕಾರ- ಹನುಮಂತ ಹುಟ್ಟಿದ ಸ್ಥಳ ಮುಜರಾಯಿ ಇಲಾಖೆ ವಶಕ್ಕೆ - ದೋಸ್ತಿ ಸರ್ಕಾರದ ಮತ್ತೊಂದು ವಿವಾದ        ಜಲಾಶಯದಿಂದ ತುಂಗಭದ್ರಾ ನದಿಗೆ ನೀರು - ಡ್ರೋಣ್ ಕಣ್ಣಲ್ಲಿ ಮನಮೋಹಕ ನೋಟ - ಎಲ್ಲೆಲ್ಲೂ ಹಸಿರ ಸಿರಿಯ ವೈಭವ       
Breaking News

2ನೇ ಟಿ 20 ಪಂದ್ಯ: ಆಸ್ಟ್ರೇಲಿಯಾಗೆ ಭರ್ಜರಿ ಜಯ

Tuesday, 10.10.2017, 10:16 PM       No Comments

ಗುವಾಹಟಿ: 2ನೇ ಟಿ 20 ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡವು ಭಾರತದ ವಿರುದ್ಧ 8 ವಿಕೆಟ್​ಗಳ ಭರ್ಜರಿ ಗೆಲುವನ್ನು ದಾಖಲಿಸಿದೆ. ಈ ಮೂಲಕ ಸರಣಿಯಲ್ಲಿ 1-1 ರಿಂದ ಸಮಬಲವನ್ನು ಸಾಧಿಸಿದೆ.

ಭಾರತ ನೀಡಿದ 119 ರನ್​ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ 15.3 ಓವರ್​ಗಳಲ್ಲಿ ಕೇವಲ 2 ವಿಕೆಟ್​ ಕಳೆದುಕೊಂಡು 122 ರನ್​ ಗಳಿಸಿ ಗುರಿ ತಲುಪಿತು. ಆಸ್ಟ್ರೇಲಿಯಾ ಪರ ಮೋಯಿಸಿಸ್​ ಹೆನ್ರಿಕ್ಸ್​ (62*) ಮತ್ತು ಟ್ರಾವಿಸ್​ ಹೆಡ್​ (48*) ರನ್​ ಗಳಿಸಿ ತಮ್ಮ ತಂಡಕ್ಕೆ ಸುಲಭ ಜಯ ದೊರಕಿಸಿಕೊಟ್ಟರು. ಇದಕ್ಕೂ ಮುನ್ನ ಇನಿಂಗ್ಸ್​ ಆರಂಭಿಸಿದ ಆಸ್ಟ್ರೇಲಿಯಾ ಆರೋನ್​ ಫಿಂಚ್​ (8) ಮತ್ತು ಡೇವಿಡ್​ ವಾರ್ನರ್​ (2) ಬೇಗ ಔಟಾದರು. ಆ ನಂತರ ಜತೆಯಾದ ಹೆನ್ರಿಕ್ಸ್​ ಮತ್ತು ಹೆಡ್​ ತಂಡವನ್ನು ಗೆಲುವಿನ ದಡ ಸೇರಿಸಿದರು.

ಭಾರತದ ಪರ ಭುವನೇಶ್ವರ್​ ಕುಮಾರ್​ ಮತ್ತು ಬೂಮ್ರಾ ತಲಾ 1 ವಿಕೆಟ್​ ಪಡೆದರು.

ಇದಕ್ಕೂ ಮುನ್ನ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡ ಆಸ್ಟ್ರೇಲಿಯಾ ಬೌಲರ್​ಗಳ ಪ್ರಭಾವಿ ಬೌಲಿಂಗ್​ ದಾಳಿಗೆ ಸಿಲುಕಿ 118 ರನ್​ಗಳಿಗೆ ಆಲೌಟಾಗಿತ್ತು. ಭಾರತದ ಪರ ಕೇದಾರ್​ ಜಾಧವ್​ (27), ಹಾರ್ದಿಕ್​ ಪಾಂಡ್ಯ (25), ಕುಲದೀಪ್​ ಯಾದವ್​ (16) ಮತ್ತು ಎಂ.ಎಸ್​. ಧೋನಿ (13) ಮಾತ್ರ ಎರಡಂಕಿ ಮೊತ್ತ ಗಳಿಸಿದರು. ಉಳಿದ ಎಲ್ಲಾ ಬ್ಯಾಟ್ಸ್​ಮನ್​ಗಳು ವಿಫಲರಾದ ಕಾರಣ ಭಾರತ ಅಲ್ಪ ಮೊತ್ತಕ್ಕೆ ಕುಸಿಯಿತು.

ಆಸ್ಟ್ರೇಲಿಯಾ ಪರ ಪ್ರಭಾವಿ ಬೌಲಿಂಗ್​ ದಾಳಿ ನಡೆಸಿದ ಜೇಸನ್​ ಬೆಹೆರೆನ್ಡಾಫ್​ (21 ಕ್ಕೆ 4) ಮತ್ತು ಆ್ಯಡಮ್​ ಜಂಪಾ (19 ಕ್ಕೆ 2) ವಿಕೆಟ್​ ಪಡೆದು ಮಿಂಚಿದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top