Friday, 23rd March 2018  

Vijayavani

ರಾಜ್ಯಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ - ವಿಧಾನಸೌಧದಲ್ಲಿ ಮತ ಎಣಿಕೆ - ಚುನಾವಣಾ ಅಧಿಕಾರಿಯಿಂದ ರಿಸಲ್ಟ್​ ಅನೌನ್ಸ್        ಕೈಗೆ ಮೂರು, ಬಿಜೆಪಿಗೆ ಒಂದು ಸೀಟು ಪಕ್ಕಾ - ಈ ಬಾರಿಯೂ ಜೆಡಿಎಸ್​ಗಿಲ್ಲ ಸ್ಥಾನ - ಎರಡನೇ ಫಾರೂಕ್​ಗಿಲ್ಲ ಅದೃಷ್ಟ        ಸ್ಪೀಕರ್​ ನೆರವಿಗೆ ಬರಲಿಲ್ಲ - ನಾಗಮೋಹನ್​ದಾಸ್​ ವರದಿಯೇ ಸರಿಯಿಲ್ಲ - ವೀರಶೈವ ಮಹಾಸಭೆಯಲ್ಲಿ ಪ್ರತ್ಯೇಕ ಧರ್ಮಕ್ಕೆ ಆಕ್ರೋಶ        SSLC ಅಲ್ಲ ಇದು ಕಾಪಿಚೀಟಿ ಪರೀಕ್ಷೆ - ಬಹುತೇಕ ಕೇಂದ್ರಗಳಲ್ಲಿ ಸಾಮೂಹಿಕ ನಕಲು - ಹುಬ್ಬಳ್ಳಿ, ವಿಜಯಪುರ, ಕಲಬುರಗಿ ಸೇರಿ ಎಂಟು ಡಿಬಾರ್​        ಮಕ್ಕಳಾಗದ್ದಕ್ಕೆ ಪತ್ನಿ ಮೇಲೆ ದೌರ್ಜನ್ಯ - ವಿಕೃತ ಪತಿಯಿಂದ ಪತ್ನಿಗೆ ನಿರಂತರ ಕಿರುಕುಳ - ಮಗನಿಗೆ ಎರಡನೇ ಮದ್ವೆ ಮಾಡಲು ಪೋಷಕರ ಪ್ಲಾನ್​       
Breaking News

ಬರದೂರಲ್ಲಿ ಕೈ ತೆನೆ ಕಮಲ ಆರ್ಭಟ

Tuesday, 09.01.2018, 3:05 AM       No Comments

| ಪಾ.ಶ್ರೀ. ಅನಂತರಾಮ್ ಕೋಲಾರ

ಒಬ್ಬರು ಸಚಿವರು, ಸಂಸದರಿರುವ ಕೋಲಾರ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಕಸರತ್ತು ನಡೆಸುತ್ತಿದೆ. ಜಿಲ್ಲೆಯಲ್ಲಿ ಹಿಂದೆ ಜಿದ್ದಾಜಿದ್ದಿ ರಾಜಕಾರಣ ನಡೆಯುತ್ತಿತ್ತು. ರಿಯಲ್ ಎಸ್ಟೇಟ್​ನವರು ಪದಾರ್ಪಣೆ ಮಾಡಿದ ನಂತರ ಮೌಲ್ಯಗಳಿಗಿಂತ ಹಣದ ವ್ಯಾಮೋಹ ಹೆಚ್ಚಾಗಿದೆ. ಒಂದು ಕಾಲದಲ್ಲಿ ಜನತಾ ಪರಿವಾರಕ್ಕೆ ಭದ್ರಕೋಟೆಯಾಗಿದ್ದ ಜಿಲ್ಲೆ ಈಗ ಚೌಚೌ ಬಾತ್​ನಂತಾಗಿದೆ. ಮುಂಬರುವ ಚುನಾವಣೆ ಎಲ್ಲ ಪಕ್ಷಗಳಿಗೂ ಪ್ರತಿಷ್ಠೆಯಾಗಿದ್ದು, ಜಯದ ಮಾಲೆ ಯಾರಿಗೆ ಎಂಬುದು ನಿಗೂಢವಾಗಿದೆ.

ಜಿಲ್ಲೆ ಬರಪೀಡಿತ ಪ್ರದೇಶವಾಗಿದ್ದರೂ ರಾಜಕೀಯವಾಗಿ ತನ್ನದೇ ವರ್ಚಸ್ಸು ಮತ್ತು ಗಟ್ಟಿತನ ಕಾಪಾಡಿಕೊಂಡು ಬಂದಿದೆ. ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಮೀಸಲು, ಮೂರು ಸಾಮಾನ್ಯ ಕ್ಷೇತಗಳನ್ನು ಒಳಗೊಂಡಿದೆ.

ರಾಜ್ಯದ ಮೊದಲ ಸಿಎಂ ಜಿಲ್ಲೆಯವರೇ ಆದ ಕೆ.ಸಿ. ರೆಡ್ಡಿ. ಕೋಲಾರ ನಿರ್ವತೃ ಎಂದೇ ಹೆಸರಾಗಿರುವ ದಿ. ಟಿ. ಚನ್ನಯ್ಯ, ರೈತ ಮತ್ತು ಶೋಷಿತ ಸಮುದಾಯದ ಆಶಾ ಕಿರಣರಾಗಿದ್ದ ಆರ್. ವೆಂಕಟರಾಮಯ್ಯ, ಪಿ. ವೆಂಕಟಗಿರಿಯಪ್ಪ, ಸಿ. ಬೈರೆಗೌಡ ಇವರೆಲ್ಲ ನಮ್ಮೊಂದಿಗೆ ಇಲ್ಲದಿದ್ದರೂ ಚಿರಸ್ಮರಣೆಗೆ ಪಾತ್ರರಾಗಿದ್ದಾರೆ. ಆದರೀಗ ಜಿಲ್ಲೆಯ ರಾಜಕಾರಣ ಸಂಪೂರ್ಣ ಬದಲಾಗಿದೆ. ಮೌಲ್ಯಗಳಿಗಿಂತ ಜಾತಿ, ಹಣ ಮೇಲುಗೈ ಸಾಧಿಸುತ್ತಿದೆ. ಹೊರಗಿನವರು ರಾಜಕೀಯ ದಿಕ್ಕು ಬದಲಾಯಿಸಿದ್ದಾರೆ. ಎಲ್ಲ ಪಕ್ಷಗಳಿಗೆ ಗೆಲ್ಲುವುದು ಮಾನದಂಡವಾಗಿದೆ. ಮುಂಬರುವ ಚುನಾವಣೆಗೂ ಮತ್ತದೇ ತಂತ್ರಗಾರಿಕೆ ಮುಂದುವರಿಯುತ್ತಿದೆ. ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್​ಗೆ ಹೆಚ್ಚಿನ ಸ್ಥಾನ ತಂದುಕೊಡುವ ಜವಾಬ್ದಾರಿ ಸಂಸದ ಕೆ.ಎಚ್. ಮುನಿಯಪ್ಪ ಮತ್ತು ಸಚಿವ ಕೆ.ಆರ್. ರಮೇಶ್​ಕುಮಾರ್ ಹೆಗಲಿಗೇರಿಸಲಾಗಿದೆ. ಜೆಡಿಎಸ್ ಮತ್ತು ಬಿಜೆಪಿಯಲ್ಲಿ ಸಂಘಟಿತ ಹೋರಾಟಕ್ಕೆ ನಾಯಕತ್ವದ ಕೊರತೆಯಿದೆ. ಸಂಕ್ರಾಂತಿ ಬಳಿಕ ರಾಜಕೀಯ ಚಟುವಟಿಕೆ ಹೆಚ್ಚಾಗುತ್ತದೆಯೇ ನೋಡಬೇಕಾಗಿದೆ.

 ವರ್ತರ್ ನಡೆ ನಿಗೂಢ

ಕೋಲಾರ ಸಾಮಾನ್ಯ ಕ್ಷೇತ್ರದಲ್ಲಿ 2 ಬಾರಿ ಪಕ್ಷೇತರರಾಗಿ ಗೆದ್ದು ರಾಜಕೀಯ ಸುಂಟರಗಾಳಿ ಎಬ್ಬಿಸಿ ವಾದ-ವಿವಾದಕ್ಕೆ ಗುರಿಯಾಗಿರುವ ವರ್ತರ್ ಆರ್. ಪ್ರಕಾಶ್ ಕಾಂಗ್ರೆಸ್ ಸೇರಲು ಅವಕಾಶ ಸಿಗದೆ ‘ನಮ್ಮ ಕಾಂಗ್ರೆಸ್’ ಸ್ಥಾಪಿಸಿದ್ದಾರೆ. ಇವರ ಸೋಲಿಗೆ ವಿರೋಧಿಗಳು ಖೆಡ್ಡಾ ಸಿದ್ಧಪಡಿಸುತ್ತಿದ್ದಾರೆ. ಸಂಸದ ಕೆ.ಎಚ್. ಮುನಿಯಪ್ಪ ಮನಸ್ಸು ಮಾಡಿದಲ್ಲಿ ಕೈ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಅವಕಾಶಗಳಿವೆ. ಜೆಡಿಎಸ್​ನಿಂದ ಈವರೆಗೆ ಅಭ್ಯರ್ಥಿ ಇತ್ಯರ್ಥವಾಗಿಲ್ಲ. ಮಾಜಿ ಸಚಿವ ಕೆ. ಶ್ರೀನಿವಾಸಗೌಡ, ವರ್ತರ್ ಸೋಲಿಸಲು ಅವಕಾಶ ಕೋರಿದ್ದಾರೆ. ಜ.13ರಂದು ನಡೆಯುವ ಬಿಜೆಪಿ ಪರಿವರ್ತನಾ ರ‍್ಯಾಲಿ ಬಳಿಕ ಅಭ್ಯರ್ಥಿ ನಿರ್ಧಾರವಾಗಬಹುದು. ಪ್ರಕಾಶ್ ಕ್ಷೇತ್ರ ತೊರೆದಲ್ಲಿ ಬೇರೆಯವರಿಗೆ ಲಾಭವಾಗಬಹುದು.

 ಅಭಿವೃದ್ಧಿ ಮಂತ್ರ, ವಿರೋಧಿ ತಂತ್ರ

ಶ್ರೀನಿವಾಸಪುರದಲ್ಲಿ ಪಕ್ಷ ರಾಜಕಾರಣ ಮೀರಿ ತಮ್ಮದೇ ಶಕ್ತಿ ಬೆಳೆಸಿಕೊಂಡವರು ಸಚಿವ ಕೆ.ಆರ್. ರಮೇಶ್​ಕುಮಾರ್ (ಕಾಂಗ್ರೆಸ್) ಮತ್ತು ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ (ಜೆಡಿಎಸ್). ಇವರಿಬ್ಬರಿಗೂ ಅವರವರ ಪಕ್ಷದಿಂದ ಟಿಕೆಟ್ ಖಾತ್ರಿಯಾಗಿದೆ. ಕ್ಷೇತ್ರದಲ್ಲಿ ಹಿಂದೆಂದೂ ಆಗದಷ್ಟು ಅಭಿವೃದ್ಧಿ ಕೆಲಸಗಳಾಗಿರು ವುದರಿಂದ ಮತದಾರರು ಸಂಪ್ರದಾಯಕ್ಕೆ ಜೋತು ಬೀಳದೆ ಗೆಲ್ಲಿಸುತ್ತಾರೆಂದು ಸಚಿವರು ನಂಬಿದ್ದಾರೆ. ಜಾತಿ ಬಲವಿಲ್ಲದ ಸಚಿವರು 5 ಬಾರಿ ಗೆದ್ದಿರುವುದು ದೊಡ್ಡ ಸಾಧನೆ, ಈ ಬಾರಿ ಜಾತಿ ಬಲದಿಂದ ಇವರನ್ನು ಕಟ್ಟಿ ಹಾಕಲು ವಿರೋಧಿಗಳು ಯತ್ನಿಸುತ್ತಿದ್ದು, ಅಭಿವೃದ್ಧಿ ಮಂತ್ರ ವರ್ಕ್​ಔಟ್ ಆಗುವುದೇ ಎಂಬುದು ಕುತೂಹಲ ಮೂಡಿಸಿದೆ. ರಮೇಶ್​ಕುಮಾರ್ ಇದೇ ನನ್ನ ಕೊನೇ ಚುನಾವಣೆ ಎಂದು ಘೊಷಣೆ ಮಾಡಿರುವುದು ವರವಾಗಲಿದೆ ಎಂಬುದು ಅವರ ಅನುಯಾಯಿಗಳ ವಾದ.

 ಕೈ-ಬಿಜೆಪಿಗೆ ಪ್ರತಿಷ್ಠೆ

ಬಂಗಾರಪೇಟೆಯಲ್ಲಿ ಹಾಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿಗೆ ಕಾಂಗ್ರೆಸ್ ಟಿಕೆಟ್ ಖಚಿತವಾಗಿದೆ. ಅಭಿವೃದ್ಧಿ ಕೆಲಸ ಮತ್ತೊಮ್ಮೆ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ನಂಬಿದ್ದಾರೆ. ಕಾಂಗ್ರೆಸ್​ನಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದವರು ಹಾಲಿ ಶಾಸಕರೊಂದಿಗೆ ಗುರುತಿಸಿಕೊಂಡಿರುವುದರಿಂದ ಯಾವುದೇ ಗೊಂದಲ ಇಲ್ಲ. ಬಿಜೆಪಿಯಲ್ಲಿ ಟಿಕೆಟ್​ಗಾಗಿ ಮಾಜಿ ಶಾಸರಾದ ಬಿ.ಪಿ. ವೆಂಕಟಮುನಿಯಪ್ಪ, ಎಂ. ನಾರಾಯಣಸ್ವಾಮಿ ನಡುವೆ ಪೈಪೋಟಿ ಇದೆ. ಜೆಡಿಎಸ್​ನಿಂದ ಮಲ್ಲೇಶ್​ಬಾಬು ಸ್ಪರ್ಧಿಸಲು ಉತ್ಸುಕರಾಗಿದ್ದಾರೆ.

 

 ಮಾಲೂರಿಗೆ ಯಾರು ಹಿತವರು?

ಮಾಜಿ ಸಚಿವ ಎಸ್.ಎನ್. ಕೃಷ್ಣಯ್ಯಶೆಟ್ಟಿ ಬಿಜೆಪಿಗೆ ರೀಎಂಟ್ರಿ ಕೊಟ್ಟ ಮೇಲೆ ಕ್ಷೇತ್ರದಲ್ಲಿ ಸಂಚಲನ ಮೂಡಿದೆ. ಹಾಲಿ ಜೆಡಿಎಸ್ ಶಾಸಕ ಕೆ.ಎಸ್. ಮಂಜುನಾಥಗೌಡ ಕ್ಷೇತ್ರಕ್ಕೆ ವಲಸಿಗರಾದರೂ ಮತದಾರರು ಕಳೆದ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಕಾಂಗ್ರೆಸ್​ನಿಂದ ಕೆ.ವೈ. ನಂಜೇಗೌಡ ಅಭ್ಯರ್ಥಿಯಾಗುವುದು ಬಹುತೇಕ ಖಚಿತ. ಜೆಡಿಎಸ್ ವಶದಲ್ಲಿರುವ ಕ್ಷೇತ್ರ ಗೆಲ್ಲಲು ಕಾಂಗ್ರೆಸ್, ಬಿಜೆಪಿ ಪೈಪೋಟಿ ನಡೆಸಿದೆ. ಹಾಲಿ ಶಾಸಕರಿಗೆ ಟಿಕೆಟ್ ಪಕ್ಕಾ ಆಗಿದೆ. ಕಾಂಗ್ರೆಸ್​ಗಿಂತ ಬಿಜೆಪಿಯಲ್ಲಿ ಆಕಾಂಕ್ಷಿಗಳು ಹೆಚ್ಚು.

 

 ಚಿನ್ನದ ಕಿರೀಟ ಯಾರ ಮಡಿಲಿಗೆ

ಕೆಜಿಎಫ್ ಮೀಸಲು ಕ್ಷೇತ್ರದಲ್ಲಿ ಕಮಲ ಅರಳಿಸಿದ ಮಾಜಿ ಶಾಸಕ ವೈ.ಸಂಪಂಗಿ 2013ರ ಚುನಾವಣೆಯಲ್ಲಿ ಟಿಕೆಟ್ ಸಿಗದೆ ತಾಯಿ ವೈ. ರಾಮಕ್ಕ ಅವರನ್ನು ಗೆಲ್ಲಿಸಿ ಕ್ಷೇತ್ರವನ್ನು ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಈ ಬಾರಿ ಇವರಿಗೆ ಕಾಂಗ್ರೆಸ್​ನಿಂದ ಸಂಸದ ಮುನಿಯಪ್ಪ ಪುತ್ರಿ ರೂಪಕಲಾ ಶಶಿಧರ್ ಪ್ರಬಲ ಎದುರಾಳಿಯಾಗುವ ಲಕ್ಷಣಗಳಿವೆ. ಜೆಡಿಎಸ್​ನಿಂದ ಮಾಜಿ ಶಾಸಕ ಎಂ. ಭಕ್ತವತ್ಸಲಂ ಪ್ರಬಲ ಆಕಾಂಕ್ಷಿ. ಲೋಕಾಯುಕ್ತ ಪ್ರಕರಣದಿಂದಾಗಿ ಸಂಪಂಗಿ ಅವರಿಗೆ ಟಿಕೆಟ್ ತಪ್ಪಿದರೆ ಮತ್ತೆ ರಾಮಕ್ಕಗೆ ಪಕ್ಷ ಅವಕಾಶ ನೀಡಿತೇ ಎಂಬುದು ಯಕ್ಷಪ್ರಶ್ನೆ.

 

 ಮುಳಬಾಗಿಲಿಗ್ಯಾರು?

ಮುಳಬಾಗಿಲು ಮೀಸಲು ಕ್ಷೇತ್ರದಲ್ಲಿ ಪಕ್ಷೇತರರಾಗಿ ಗೆದ್ದ ಡಾ.ಕೊತ್ತೂರು ಜಿ. ಮಂಜುನಾಥ್ ಕಾಂಗ್ರೆಸ್​ನಿಂದ ಸ್ಪರ್ಧಿಸುವುದು ಖಚಿತ. ‘ಕೈ’ನಿಂದ ಟಿಕೆಟ್ ನೀಡದಿರುವಂತೆ ಬೆರಳೆಣಿಕೆಯಷ್ಟು ವಿರೋಧಿಗಳ ಒತ್ತಡಕ್ಕೆ ವರಿಷ್ಠರು ಸೊಪ್ಪು ಹಾಕಿಲ್ಲ. ಚುನಾವಣೆಗಾಗಿ ಭರ್ಜರಿ ತಯಾರಿ ನಡೆದಿದೆ. ಜೆಡಿಎಸ್​ನಿಂದ ಸ್ಪರ್ಧಿಸಲು ಅರ್ಧ ಡಜನ್​ಗಿಂತ ಹೆಚ್ಚು ಆಕಾಂಕ್ಷಿಗಳು ತುದಿಗಾಲಲ್ಲಿದ್ದಾರೆ. ಜ.12ರ ನಂತರ ಅಧಿಕೃತ ಅಭ್ಯರ್ಥಿ ಹೆಸರು ಪ್ರಕಟವಾಗಬಹುದು. ಸಂಸದ ಮುನಿಯಪ್ಪ ಅಳಿಯ ಪೆದ್ದಪ್ಪಯ್ಯ ಜೆಡಿಎಸ್​ನಿಂದ ಕಣಕ್ಕಿಳಿದರೆ ಕ್ಷೇತ್ರದ ದಿಕ್ಕು ಬದಲಾಗಬಹುದು. ಬಿಜೆಪಿಯಿಂದ ಅಭ್ಯರ್ಥಿಗಾಗಿ ಶೋಧ ನಡೆದಿದೆ.

 

Leave a Reply

Your email address will not be published. Required fields are marked *

Back To Top