Friday, 19th October 2018  

Vijayavani

ಮೈಸೂರು ರಾಜವಂಶದಲ್ಲಿ ಒಂದೇ ದಿನ ಎರಡು ಸಾವು-ಪ್ರಮೋದಾದೇವಿ ನಾದಿನಿ ವಿಧಿವಶ        ವಿಲನ್ ಚಿತ್ರದಲ್ಲಿ ಶಿವಣ್ಣರನ್ನ ಕಡೆಗಣನೆ ಎಂದು ಆಕ್ರೋಶ - ಥಿಯೆಟರ್‌ ಮುಂದೆ ಅಭಿಮಾನಿಗಳ ಪ್ರತಿಭಟನೆ        ಒಕ್ಕಲಿಗರ ಸಂಘದಲ್ಲಿ ಮೂಗು ತೂರಿಸಲ್ಲ - ಜಾತಿ, ಧರ್ಮದಲ್ಲಿ ಹಸ್ತಕ್ಷೇಪ ಮಾಡಲ್ಲ - ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ಡಿಕೆಶಿ ಮಾತು        ಅದ್ದೂರಿ ಜಂಬೂ ಸವಾರಿ - ಅಂಬಾರಿ ಹೊತ್ತು ಅರ್ಜುನ ಗಾಂಭೀರ್ಯ ನಡಿಗೆ - ಬನ್ನಿಮಂಟಪದತ್ತ ವಿಜಯದಶಮಿ ಮೆರವಣೆಗೆ        ದಸರಾ ಮೆರವಣಿಗೆಯಲ್ಲಿ ನಾಡಿನ ಶ್ರೀಮಂತ ಕಲೆ ಅನಾವರಣ - ಗಮನ ಸೆಳೆದ ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳ ಚಿತ್ರಣ        ದೆಹಲಿಯಲ್ಲಿ ವಿಜಯದಶಮಿ ಸಂಭ್ರಮ-ರಾಮಲೀಲ ಮೈದಾನದಲ್ಲಿ ರಾವಣನ ಸಂಹಾರ - ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ಪ್ರಧಾನಿ ಭಾಗಿ       
Breaking News

ಅರ್ಜುನ್ ತೆಂಡೂಲ್ಕರ್‍ ಬೌಲಿಂಗ್‌ ವೇಗಕ್ಕೆ ಬ್ಯಾಟ್ ಹಿಡಿದವರು ಬೆವರುತ್ತಿದ್ದಾರೆ!

Friday, 20.10.2017, 9:09 PM       No Comments

ಮುಂಬೈ: ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‍ ಅವರ ಮಗ ಅರ್ಜುನ್‌ ತೆಂಡುಲ್ಕರ್‌ ಭವಿಷ್ಯದ ಅದ್ಭುತ ಕ್ರಿಕೆಟ್‌ ಆಟಗಾರ ಎನ್ನುವುದನ್ನು ಸಾಬೀತು ಪಡಿಸುತ್ತಿದ್ದಾನೆ.

ಹೌದು, ಆರಂಭಿಕ ಏಕದಿನ ಪಂದ್ಯಕ್ಕೂ ಮೊದಲು ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಅಭ್ಯಾಸ ಪಂದ್ಯದಲ್ಲಿ ಅರ್ಜುನ್‌, ಟೀಂ ಇಂಡಿಯಾ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಮತ್ತು ಇತರೆ ಭಾರತೀಯ ಆಟಗಾರರಿಗೆ ಬೌಲಿಂಗ್‌ ಮಾಡುವ ಮೂಲಕ ಕೋಚ್‌ ರವಿಶಾಸ್ತ್ರೀ ಸೇರಿದಂತೆ ಅಲ್ಲಿದ್ದ ಎಲ್ಲರಲ್ಲೂ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದಾನೆ.

ಈ ಕುರಿತು ಭಾರತೀಯ ಕ್ರಿಕೆಟ್‌ ಮಂಡಳಿ ಅಧಿಕೃತವಾಗಿ ತನ್ನ ಟ್ವಿಟರ್‌ ಖಾತೆಯಲ್ಲಿ ಅರ್ಜುನ್‌ ಕೊಹ್ಲಿ ಸೇರಿದಂತೆ ಇತರೆ ಭಾರತೀಯ ಕ್ರಿಕೆಟ್‌ ಆಟಗಾರರಿಗೆ ಬೌಲಿಂಗ್‌ ಮಾಡುತ್ತಿರುವ ಫೋಟೊಗಳನ್ನು ಶೇರ್‌ ಮಾಡಿದೆ.

ನ್ಯೂಜಿಲ್ಯಾಂಡ್‌ ವಿರುದ್ಧ ಅಕ್ಟೋಬರ್‌ 22ರಂದು ನಡೆಯಲಿರುವ ಏಕದಿನ ಅಂತಾರಾಷ್ಟ್ರೀಯ ಪಂದ್ಯಕ್ಕೂ ಮೊದಲು ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಅಭ್ಯಾಸ ಪಂದ್ಯದಲ್ಲಿ ಅರ್ಜುನ್‌ ಬೌಲಿಂಗ್‌ ಮಾಡಿದ್ದಾನೆ. ಅಂಡರ್‌ 19 ತಂಡದಲ್ಲಿ ಗುರುತಿಸಿಕೊಂಡಿರುವ ಅರ್ಜುನ್‌, 130 ರಿಂದ 135 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡುತ್ತಾನೆ.

ಈ ಮಧ್ಯೆ ಅರ್ಜುನ್‌, ಕೀವಿಸ್‌ ವಿರುದ್ಧ 3 ಓಡಿಐ ಮತ್ತು ಹಲವು ಟಿ ಟ್ವೆಂಟಿ ಪಂದ್ಯಗಳನ್ನು ಆಡಿದ್ದಾನೆ. ಬಾಂಗ್ಲಾದೇಶದ ವಿರುದ್ಧದ ಪಂದ್ಯಗಳಲ್ಲಿ ಅರ್ಜುನ್‌ನ ಬೌಲಿಂಗ್‌ ವೇಗಕ್ಕೆ ಬ್ಯಾಟ್ ಹಿಡಿದವರು ಬೆವರುವಂತಾಗಿತ್ತು.(ಏಜೆನ್ಸೀಸ್‌)

Leave a Reply

Your email address will not be published. Required fields are marked *

Back To Top