Thursday, 19th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಮಾತನಾಡುವ ಪ್ರತಿಮೆ ಅನುಷ್ಕಾ!

Friday, 13.07.2018, 3:04 AM       No Comments

ಜಗತ್ತಿನ ಆಯ್ದ ಸೆಲೆಬ್ರಿಟಿಗಳಿಗೆ ಮೇಡಂ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಮೇಣದ ಪ್ರತಿಮೆಯಾಗುವ ಅವಕಾಶ ಸಿಗುತ್ತದೆ. ಸಿನಿಮಾ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ದೊಡ್ಡ ಸಾಧನೆ ಮಾಡಿದವರಿಗೆ ಸಿಗುವ ಗೌರವಗಳ ಪಟ್ಟಿಯಲ್ಲಿ ಇದು ಕೂಡ ಸೇರ್ಪಡೆಯಾಗಿದೆ. ನಿಜವಾದ ವ್ಯಕ್ತಿಯೇ ಎದುರಿಗೆ ನಿಂತಂತೆ ಭಾಸವಾಗುವ ಮಟ್ಟಕ್ಕೆ ನಿಖರವಾಗಿ ಈ ಮೇಣದ ಪ್ರತಿಮೆಗಳನ್ನು ತಯಾರಿಸುವಲ್ಲಿ ಟುಸ್ಸಾಡ್ಸ್ ಮ್ಯೂಸಿಯಂ ಕಲಾವಿದರು ಫೇಮಸ್. ಈ ವಿಚಾರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಅವರು ಮಾತನಾಡುವ ಮೇಣದ ಪ್ರತಿಮೆಗಳನ್ನು ತಯಾರಿಸುತ್ತಿದ್ದಾರೆ! ಅಚ್ಚರಿ ಎಂದರೆ ಆ ಗೌರವಕ್ಕೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪಾತ್ರರಾಗುತ್ತಿದ್ದಾರೆ. ಲಂಡನ್, ಸಿಂಗಾಪುರ್, ದೆಹಲಿ ಮುಂತಾದೆಡೆ ಟುಸ್ಸಾಡ್ಸ್ ಮ್ಯೂಸಿಯಂ ಶಾಖೆಗಳಿವೆ. ಈಗಾಗಲೇ ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಸನ್ನಿ ಲಿಯೋನ್, ಹೃತಿಕ್ ರೋಷನ್ ಮುಂತಾದ ಬಾಲಿವುಡ್ ತಾರೆಯರು ಮೇಣದ ಅವತಾರದಲ್ಲಿ ಮಿಂಚುತ್ತಿದ್ದಾರೆ. ಆದರೆ ಅವರ್ಯಾರ ಪ್ರತಿಮೆಗಳಲ್ಲೂ ಮಾತನಾಡುವ ಫೀಚರ್ ಇಲ್ಲ. ಕ್ರಿಸ್ಟಿಯಾನೋ ರೊನಾಲ್ಡೋ ಸೇರಿ ಕೆಲವೇ ಸೆಲೆಬ್ರಿಟಿಗಳ ಪ್ರತಿಮೆಯನ್ನು ಈ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತಯಾರಿಸಲಾಗಿದೆ. ವಿಶೇಷವೆಂದರೆ, ಸಿಂಗಾಪುರ್ ಶಾಖೆಯಲ್ಲಿ ನಿರ್ವಣವಾಗುತ್ತಿರುವ ಮೊದಲ ‘ಮಾತನಾಡುವ ಪ್ರತಿಮೆ’ ಎಂಬ ಖ್ಯಾತಿಗೂ ಅನುಷ್ಕಾ ಪ್ರತಿಮೆ ಪಾತ್ರವಾಗಲಿದೆ. ಅವರು ಮೊಬೈಲ್ ಹಿಡಿದು ನಿಂತಿರುವ ಭಂಗಿಯಲ್ಲಿ ಈ ಪ್ರತಿಮೆ ನಿರ್ವಣಗೊಳ್ಳಲಿದೆ ಎಂಬುದು ಮೂಲಗಳ ಮಾಹಿತಿ.

ಟುಸ್ಸಾಡ್ಸ್ ಮ್ಯೂಸಿಯಂ ಕಲಾವಿದರು ಅನುಷ್ಕಾ ದೇಹದ ಅಳತೆಗೆ ತೆಗೆದುಕೊಳ್ಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ವೈರಲ್ ಆಗಿದೆ. ಒಟ್ಟಾರೆ, ನೆಚ್ಚಿನ ನಟಿಗೆ ಇಂಥ ವಿಶೇಷ ಗೌರವ ಸಿಗುತ್ತಿರುವ ಸುದ್ದಿ ಕೇಳಿ ಅಭಿಮಾನಿಗಳು ಕೂಡ ಫುಲ್ ಖುಷ್ ಆಗಿದ್ದಾರೆ. ಶೀಘ್ರದಲ್ಲೇ ಈ ಪ್ರತಿಮೆ ಅನಾವರಣಗೊಳ್ಳಲಿದೆ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top