Wednesday, 22nd November 2017  

Vijayavani

1. ಉಗ್ರನ ವಿರುದ್ಧ ಕೊಡಲಿಲ್ಲ ಪಾಕ್ ಸಾಕ್ಷ್ಯ – LET ಕ್ರಿಮಿ ಹಫೀಜ್ ಸಯೀದ್​ಗೆ ಕ್ಲೀನ್​ಚಿಟ್ – ಮನೆಯಿಂದ ಹೊರಬರ್ತಾನೆ ಮುಂಬೈ ದಾಳಿ ಮಾಸ್ಟರ್ ಮೈಂಡ್ 2. ಅಲೆಮಾರಿಗಳ ಮನೆ ತೆರವು ವೇಳೆ ಅಮಾನವೀಯ ವರ್ತನೆ – ನಡುರಸ್ತೆಯಲ್ಲಿ ಮಹಿಳೆಗೆ ಹೆರಿಗೆ – ದಿಗ್ವಿಜಯ ನ್ಯೂಸ್​ ವರದಿಗೆ ಡಿಸಿ ಸ್ಪಂದನೆ 3. ಹೆರಿಗೆ ವೇಳೆ ಮೃತಪಟ್ಟಿದ್ದಾಳೆ ಅಂದ್ರು ಡಾಕ್ಟರ್ಸ್​ – ಅಂತ್ಯ ಸಂಸ್ಕಾರದ ವೇಳೆ ಕಣ್ಣು ಬಿಟ್ಲಂತೆ ಬಾಣಂತಿ – ಮನೆಗೆ ತರೋವಷ್ಟರಲ್ಲಿ ಮತ್ತೆ ಸಾವಿನ ದರ್ಶನ 4. ಕೊಪ್ಪಳ ಜಿಲ್ಲಾಪ್ರವಾಸದಲ್ಲಿ ಎಚ್​ಡಿಡಿ – ಗವಿಮಠಕ್ಕೆ ಮಾಜಿ ಪ್ರಧಾನಿ ಭೇಟಿ – ಇಳಿವಯಸ್ಸಿನಲ್ಲೂ ಕಿಂಡಿಯಲ್ಲೆ ತೆರಳಿ ದರ್ಶನ 5. ಯೂರ್ಟನ್​ ವೇಳೆ ಕಾರಿಗೆ ಲಾರಿ ಡಿಕ್ಕಿ – ಡಿಕ್ಕಿ ಹೊಡೆದ ಲಾರಿಗೆ ಟ್ರಕ್ ಡ್ಯಾಶ್ – ಸೌದಿ ಹೈವೇಯಲ್ಲಿ ಹಾರಿಬಲ್ ಆಕ್ಸಿಡೆಂಟ್
Breaking News :

ವಿಧಾನಸಭೆಯಲ್ಲಿ ಮೌಢ್ಯ ಪ್ರತಿಬಂಧಕ ವಿಧೇಯಕ ಮಂಡನೆ

Tuesday, 14.11.2017, 4:32 PM       No Comments

ಬೆಳಗಾವಿ: ವಿವಾದಿತ ಹಾಗೂ ಬಹು ಚರ್ಚಿತ ಮೌಢ್ಯ ಪ್ರತಿಬಂಧಕ ವಿಧೇಯಕವನ್ನು ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು.

ವಿಧೇಯಕ ಮಂಡನೆಯಾದ ನಂತರವೂ ಸಹ ಗಣಪತಿ ಕೇಸ್​​ನಲ್ಲಿ ಜಾರ್ಜ್​ ತಲೆದಂಡಕ್ಕೆ ಬಿಜೆಪಿ ಪಟ್ಟು ಹಿಡಿದಿದ್ದರಿಂದ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು. ಇದೇ ಸಂದರ್ಭದಲ್ಲಿ ಬಡ್ತಿ ಮೀಸಲಾತಿ, ನಗರಾಭಿವೃದ್ಧಿ ಪ್ರಾಧಿಕಾರಗಳ ತಿದ್ದುಪಡಿ ವಿಧೇಯಕ ಕೂಡ ವಿಧಾನಸಭೆಯಲ್ಲಿ ಮಂಡನೆಯಾಯಿತು.

ವಿಧಾನಸಭೆಯಲ್ಲಿ ವಿಧೇಯಕದ ಮೇಲೆ ಚರ್ಚೆ ನಡೆಯಲಿದೆ. ಎರಡೂ ಸದನಗಳಲ್ಲಿ ಅಂಗೀಕಾರ ದೊರೆತ ನಂತರ ವಿಧೇಯಕ ಕಾಯ್ದೆ ರೂಪದಲ್ಲಿ ಜಾರಿಗೆ ಬರಲಿದೆ.

ಮೌಡ್ಯಪ್ರತಿಬಂಧಕ ಕಾಯ್ದೆ ಜಾರಿಯಾದ್ರೆ ಈ ಎಲ್ಲಾ ಆಚರಣೆಗಳು ನಿಷೇಧವಾಗಲಿವೆ.

# ಎಂಜಲು ಎಲೆ ಮೇಲೆ ಉರುಳುಸೇವೆ ಮಾಡುವಂತಿಲ್ಲ
# ದೇವರ ಹೆಸರಿನಲ್ಲಿ ಕೆಂಡ ಹಾಯುವುಕ್ಕೆ ನಿಷೇಧ
# ದೇವರ ಹೆಸರಿನಲ್ಲಿ ದೇಹದೊಳಗೆ ಸಿಡಿ ತೂರಿಸುವುದು, ಬಾಯಿಗೆ ಬೀಗ ಹಾಕುವುದಕ್ಕೆ ನಿಷೇಧ
# ಬೆತ್ತಲೆ ಸೇವೆ, ಋತುಮತಿಯಾದ ಮೇಲೆ ಮನೆ ಹೊರಗಿಡುವುದು ನಿಷೇಧ
# ಬಾನಾಮತಿ, ಮಾಟಮಂತ್ರ ನೆಪದಲ್ಲಿ ಪಾದರಕ್ಷೆಯಿಂದ ಹೊಡೆಯುವುದು
# ಬೆರಳುಗಳ ಮೂಲಕ ಶಸ್ತ್ರಚಿಕಿತ್ಸೆಗೆ ಮಾಡುವುದು ನಿಷೇಧ
# ಹಿಂದಿನ ಜನ್ಮದಲ್ಲಿ ಪತಿ-ಪತ್ನಿ ನಡುವೆ ಅನೈತಿಕ ಸಂಬಂಧವಿದೆ, ಪ್ರೇಮಿಯಾಗಿದ್ದೆ ಎಂಬ ಭಾವನೆ ಸೃಷ್ಟಿಸುವುದು
# ಹಿಂದಿನ ಜನ್ಮದಲ್ಲಿ ಅವತಾರ ಎತ್ತಿದ್ದೆ ಎಂದು ಹೇಳುವುದು
# ಮಕ್ಕಳಿಗೆ ಚಿಕಿತ್ಸೆ ನೆಪದಲ್ಲಿ ಮುಳ್ಳಿನ ಮೇಲೆ ಎಸೆಯುವುದು (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top