More

    ಅಂತರಂಗ: ಅರಸನ ಕಂಡು ಪುರುಷನ ಮರೆತಂತೆ…

    ಗಿಡದ ಬೇರು ನೆಲದಲ್ಲಿ ಆಳಕ್ಕಿಳಿದು ಮಣ್ಣಿನಲ್ಲಿ ಮುಚ್ಚಿಬಿಟ್ಟಿರುತ್ತದೆ. ಯಾರ ಕಣ್ಣಿಗೂ ಕಾಣುವುದಿಲ್ಲ. ಕಾಣುವ ಗಿಡವು ಟೊಂಗೆ, ಟಿಸಿಲು, ರೆಂಬೆ-ಕೊಂಬೆಗಳಿಂದ ಶೋಭಿಸುತ್ತದೆ. ನೆಲದಲ್ಲಿ ಮುಚ್ಚಿರುವ ತಾಯಿಬೇರು ತಾನು ಹೀರಿದ ನೀರು-ಗೊಬ್ಬರದ ಶಕ್ತಿಯನ್ನು ಕಳಿಸದೆ ಇದ್ದರೆ ಮೇಲೆ ಕಾಣುವ ಮರವು ನಿಶ್ಚೇಷ್ಟಿತವಾಗಿ ಮಲಗಿಬಿಡುತ್ತಿತ್ತು.

    ಅಂತರಂಗ: ಅರಸನ ಕಂಡು ಪುರುಷನ ಮರೆತಂತೆ...ಒಂದು ಸಲ ಗಿಡಕ್ಕೂ-ಬೇರಿಗೂ ಜಗಳವಾಯ್ತು. ‘ನನ್ನ ನೆರಳನ್ನಾಶ್ರಯಿಸಿ, ನಾನು ಅರಳಿಸಿದ ಹೂವನ್ನು ಆಘ್ರಾಣಿಸಿ, ನನ್ನಲ್ಲಿ ಮಾಗಿದ ಹಣ್ಣನ್ನು ತಿಂದ ಜನರು ನನ್ನನ್ನು ಹೊಗಳುತ್ತಾರೆ. ನನ್ನ ಪ್ರಭಾವಕ್ಕೆ ಮಾರುಹೋಗದವರಾರು?’ ಎಂದು ಗಿಡ ತನ್ನನ್ನು ಹೊಗಳಿಕೊಂಡಿತು. ಆಗ ಬೇರು ಹೇಳುತ್ತದೆ, ‘ಎಲೈ ಗಿಡವೇ! ನಿನ್ನ ಸಂತೋಷಕ್ಕೆ ಕಾರಣವಾದ ನಾನು ನಿನಗೆ ನೀರು, ಗೊಬ್ಬರದ ಶಕ್ತಿಯನ್ನು ಕಳಿಸದಿದ್ದರೆ, ನಿನ್ನ ಸೌಂದರ್ಯ ಎಲ್ಲಿರುತ್ತಿತ್ತು? ನಾನಿದ್ದರೆ ನೀನು ಎಂಬುದನ್ನು ಮರೆಯಬೇಡ. ಅರಸನ ಕಂಡು ಪುರುಷನನ್ನು ಮರೆತಂತೆ ಆಡಬೇಡ. ಪತಿವ್ರತೆಯೊಬ್ಬಳು ರಾಜನ ವೈಭವ ನೋಡಿ ಪತಿಯನ್ನು ಹೀಯಾಳಿಸಿದರೆ ಅವಳಿಗೆ ಯಾರೂ ಪತಿವ್ರತೆ ಎನ್ನುವುದಿಲ್ಲ. ಹಾಗೆಯೇ ಅಧಿಕಾರ-ಅಂತಸ್ತು ದೊರೆತಾಗ, ಮಣ್ಣಿನ ಹಿಂದೆ ಅವ್ಯಕ್ತವಾಗಿರುವ ಬೇರುಗಳನ್ನು ಮರೆಯಬಾರದು. ಅವುಗಳೇ ಇಲ್ಲದಿದ್ದರೆ ಈಗ ಪಡೆಯುವ ಸಂಪತ್ತು, ಅಧಿಕಾರ ಎಲ್ಲಿರುತಿತ್ತು? ಎಲ್ಲರೂ ಮೇಲಿನ ಗಿಡದ ವೈಭವ ನೋಡಿ ಹೊಗಳುತ್ತಾರೆ. ಆದರೆ ಮಣ್ಣಿನಲ್ಲಿ ಮುಚ್ಚಿ ಸಹಾಯಗೈದ ಬೇರುಗಳನ್ನು ನೆನಪಿಸಿಕೋ. ಯಾರ ಪರಿಶ್ರಮದಿಂದ ಮೇಲೆ ಬಂದೆ ಎಂದು ಒಂದು ಕ್ಷಣ ಅಂತಮುಖಿಯಾಗಿ ಯೋಚಿಸು’ ಎಂದಿತು.

    ಅರಸನನ್ನು ಕಂಡು ತನ್ನ ಗಂಡನನ್ನು ಮರೆಯಬಾರದು. ಬಹಳ ಜನರ ಮನಃಸ್ಥಿತಿ ಹೀಗೆಯೆ ಇರುತ್ತದೆ. ತಮ್ಮ ಮೂಲ ಸ್ಥಿತಿಯನ್ನು ಅರಿಯದೆ ಅಧಿಕಾರ-ಅಂತಸ್ತು ದೊರೆತ ಕೂಡಲೇ ಸಹಾಯ ಮಾಡಿದವರನ್ನೇ ಮರೆತುಬಿಡುತ್ತಾರೆ. ಕೃತಜ್ಞತಾ ಮನೋಭಾವ ಬೇಡವೇ? ಒಂದು ಕರಾಪ್ ಚಹಾ ಕುಡಿಸಿದವರಿಗೆ ಥ್ಯಾಂಕ್ಸ್ ಹೇಳುವ ಜನ, ಬದುಕಿನ ಬದ್ಧತೆಗೆ ನೆಲೆಯನ್ನು ಒದಗಿಸಿದವರಿಗೆ ಕಿಂಚಿತ್ ಕೃತಜ್ಞತೆ ಸಲ್ಲಿಸುವುದು ಬೇಡವೇ? ಅಧಿಕಾರದ ಅಹಂಕಾರ ಬೇರನ್ನು ಮರೆಸುತ್ತದೆ. ಆದರೆ ಆ ಭ್ರಮೆಗೆ ಬಲಿಯಾಗಬಾರದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts