Thursday, 18th January 2018  

Vijayavani

ಒಂಟಿ ಮಹಿಳೆಗೆ ಜಡೆ ಹಿಡಿದು ಥಳಿತ- ಕೊಪ್ಪಳ ಬಸ್​ಸ್ಟಾಪ್​ನಲ್ಲಿ ಪುರುಷರ ಅಟ್ಟಹಾಸ- ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್        ಯುಪಿ ಪೊಲೀಸರಿಂದ ನಡೀತು ಅಚಾತುರ್ಯ- 8 ವರ್ಷದ ಹುಡುಗನ ಎನ್​ಕೌಂಟರ್​- ಮಿಸ್​ ಫೈರ್​ ಆಯ್ತೆಂದು ಜಾರಿಕೆಯ ಉತ್ತರ        ಜಯಲಲಿತಾ ಸತ್ತಿದ್ದು ಡಿ.5ಕ್ಕಲ್ಲ ನಾಲ್ಕಕ್ಕೆ- ಶಶಿಕಲಾ ಸಹೋದರನಿಂದ ಹೊಸ ಬಾಂಬ್​- ಅಮ್ಮ ಸತ್ತು ವರ್ಷ ಕಳೆದ್ರೂ ನಿಂತಿಲ್ಲ ಊಹಾಪೋಹ        ನೈಂಟಿ ಕೊಡ್ತೇವೆ ಅಂತ ಹರಕೆ ಹೊರ್ತಾರೆ ಭಕ್ತರು- ದೇವರ ಹೆಸರಲ್ಲಿ ಸಾಮೂಹಿಕ ಮದ್ಯಾರಾಧನೆ- ಕುಣಿಗಲ್‍ನ ಒಡೇಭೈರವನಿಗೆ ಬ್ರಾಂದಿ ವಿಸ್ಕಿಯೇ ನೈವೇದ್ಯ        ಕೃಷ್ಣನಗರಿಯಲ್ಲಿ ಪರ್ಯಾಯ ಸಂಭ್ರಮ- ಕೃಷ್ಣಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು- ಅದ್ಧೂರಿಯಿಂದ ಸರ್ವಜ್ಞ ಪೀಠಾರೋಹಣ       
Breaking News :

ಚಂದನವನದಲ್ಲಿ ಮತ್ತೊಂದು ಜೋಡಿ ಮದುವೆಗೆ ಸಿದ್ಧ!

Monday, 09.10.2017, 4:27 PM       No Comments

ಬೆಂಗಳೂರು: ಸ್ಯಾಂಡಲ್​ವುಡ್​ ಮತ್ತೊಂದು ಜೋಡಿ ಮದುವೆಗೆ ಸಿದ್ಧವಾಗಿದೆ. ಸುಮಾರು ವರ್ಷಗಳಿಂದ ಪ್ರೀತಿ ಮಾಡ್ತಿದ್ದ ನಟ ಚಿರು ಸರ್ಜಾ ಹಾಗು ಮೇಘನಾರಾಜ್ ಮದುವೆಯ ಬಂಧನಕ್ಕೆ ಒಳಗಾಗುತ್ತಿದ್ದಾರೆ ಎಂಬ ಬಿಸಿ ಬಿಸಿ ಸುದ್ದಿ ಇದೀಗ ಗಾಂಧಿನಗರದ ಗಲ್ಲಿ ಗಲ್ಲಿಯೊಳಗೆ ಹರಿದಾಡುತ್ತಿದೆ.

ಹೌದು, ಅಕ್ಟೋಬರ್​ 22ಕ್ಕೆ ಚಿರು ಮತ್ತು ಮೇಘನಾ ಎಂಗೇಜ್​ಮೆಂಟ್ ನಡೆಯಲಿದೆ ಎಂದು ಹೇಳಲಾಗುತ್ತಿದೆ. ನಗರದ ಪಂಚತಾರಾ ಹೋಟೆಲ್​ನಲ್ಲಿ ಎಂಗೆಜ್​ಮೆಂಟ್​ ನಡೆಯಲಿರುವುದಾಗಿ ಸುದ್ದಿ ಕೇಳಿ ಬರ್ತಿದೆ.

ಸುಮಾರು 2 ವರ್ಷಗಳಿಂದ ಮೇಘನಾ ರಾಜ್ ಹಾಗು ಚಿರು ಸರ್ಜಾ ಮದುವೆ ಸುದ್ದಿ ಹರಿದಾಡ್ತಿದೆ. ಡಿಸೆಂಬರ್ 6ಕ್ಕೆ ಮನೆಯಲ್ಲಿ ಸರಳವಾಗಿ ಮದುವೆ ಆಗುವ ಸಾಧ್ಯತೆ ಇದ್ದು, ನಂತರ ಪ್ಯಾಲೆಸ್ ಗ್ರೌಂಡ್ ನಲ್ಲಿ ಅರತಕ್ಷತೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಮೇಘನಾ, ಹಿರಿಯ ನಟ ಸುಂದರ್​ರಾಜ್​ ಹಾಗು ಹಿರಿಯ ನಟಿ ಪ್ರಮೀಳಾ ಜೋಷಾಯ್​ ಪುತ್ರಿ ಆಗಿದ್ದು, ಚಿರು ಹಾಗು ಮೇಘನ‘ಆಟಗಾರ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ರು. ಅಲ್ಲದೆ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬುದರ ಬಗ್ಗೆಯೂ ಈ ಹಿಂದೆ ಸುದ್ದಿ ಹರಿದಾಡುತ್ತಿತ್ತು. ಈ ಎಲ್ಲಾ ಅಂತೆ ಕಂತೆಗಳಿಗೆ ಮುಂದಿನ ದಿನಗಳಲ್ಲಿ ಪುಲ್​ಸ್ಟಾಪ್​ ಬೀಳುತ್ತದೆಯೋ ಕಾದು ನೋಡಬೇಕಷ್ಟೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top