Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ಆಂಧ್ರ ರಾಜಧಾನಿ ಅಮರಾವತಿಗೆ ರಾಜಮೌಳಿ ಡಿಸೈನ್​ ರಿಜೆಕ್ಟ್​ ಮಾಡಿದ ಚಂದ್ರಬಾಬು ನಾಯ್ಡು

Friday, 15.12.2017, 6:29 AM       No Comments

ಹೈದರಾಬಾದ್​: ಖ್ಯಾತ ಚಲನಚಿತ್ರ ನಿರ್ದೇಶಕ ರಾಜಮೌಳಿ ಅವರು ಬಾಹುಬಲಿ ಚಿತ್ರದಲ್ಲಿ ಮಹಿಷ್ಮತಿ ಸಾಮ್ರಾಜ್ಯವನ್ನು ಸೃಷ್ಟಿಸಿದ್ದರು. ಇವರ ಈ ಕಲ್ಪನೆಗೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ,  ಆಂಧ್ರ ರಾಜಧಾನಿ ಅಮರಾವತಿಗಾಗಿ ಅವರು ನೀಡಿದ್ದ ಡಿಸೈನ್​ ಅನ್ನು ಸಿಎಂ ಚಂದ್ರಬಾಬು ನಾಯ್ಡು ಅವರು ತಿರಸ್ಕರಿಸ್ದಾರೆ.

ಬಾಹುಬಲಿ ಚಿತ್ರ ನೋಡಿದ ನಂತರ ಚಂದ್ರಬಾಬು ನಾಯ್ಡು ಅವರು ರಾಜ್ಯದ ನೂತನ ರಾಜಧಾನಿ ಅಮರಾವತಿ ಕಟ್ಟಲು ನೆರವಾಗುವಂತೆ ರಾಜಮೌಳಿ ಅವರನ್ನು ಕೋರಿದ್ದರು. ಅದರಂತೆ ರಾಜಮೌಳಿ ಹಲವು ವಿನ್ಯಾಸಗಳನ್ನು ಸಿದ್ಧಪಡಿಸಿದ್ದರು. ಆದರೆ ಬಾಹುಬಲಿ ನಿರ್ದೇಶಕರ ವಿನ್ಯಾಸಗಳು ಚಂದ್ರಬಾಬು ನಾಯ್ದು ಅವರಿಗೆ ಇಷ್ಟವಾಗಿಲ್ಲವಂತೆ.

ಸ್ವತಃ ರಾಜಮೌಳಿ ಅವರೇ ಈ ವಿಷಯವನ್ನು ದೃಢಪಡಿಸಿದ್ದಾರೆ. ತೆಲುಗು ಸಂಸ್ಕೃತಿಯನ್ನು ಆಧರಿಸಿ ಅಮರಾವತಿಯ ಸರ್ಕಾರಿ ಕಟ್ಟಡಗಳಿಗಾಗಿ ನಾನು ಸಿದ್ಧಪಡಿಸಿದ್ದ ವಿನ್ಯಾಸ ಎಲ್ಲರಿಗೂ ಇಷ್ಟವಾಯಿತು. ಆದರೆ ಚಂದ್ರಬಾಬು ನಾಯ್ಡು ಅವರು ಮಾತ್ರ ವಿನ್ಯಾಸಕ್ಕೆ ಒಪ್ಪಿಗೆ ನೀಡಿಲ್ಲ. ಆದರೆ ಬ್ರಿಟನ್​ನ ವಿನ್ಯಾಸಕಾರರು ನೀಡಿದ್ದ ಅಸೆಂಬ್ಲಿ ಕಟ್ಟಡದ ವಿನ್ಯಾಸಕ್ಕೆ ಅವರು ಒಪ್ಪಿಗೆ ನೀಡಿದ್ದಾರೆ ಎಂದು ರಾಜಮೌಳಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಅಸೆಂಬ್ಲಿ ಕಟ್ಟಡಕ್ಕಾಗಿ ಅವರು ನೀಡಿದ್ದ ವಿನ್ಯಾಸವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top