Saturday, 22nd September 2018  

Vijayavani

ಸಿಎಂ ಜನತಾ ದರ್ಶನದಲ್ಲಿ ಸಿಗಲಿಲ್ಲ ನ್ಯಾಯ - ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ - ಸಿಎಂಗೆ ಪತ್ರ ಬರೆದು ನಾಲ್ವರು ಸುಸೈಡ್‌        ಬಿಎಸ್‌ವೈ ನಿವಾಸದಲ್ಲಿ ಬಿಗ್‌ ಮೀಟಿಂಗ್‌ - ಮೈತ್ರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ರಣತಂತ್ರ        ಶೃಂಗೇರಿಯಲ್ಲಿ ಸಿಎಂ ಶತ್ರುಸಂಹಾರ ಯಾಗ - ಕಾರವಾರದಲ್ಲಿ ಡಿಸಿಎಂ ದೇವಿ ದರ್ಶನ - ಸಂಕಷ್ಟ ನಿವಾರಣೆಗೆ ದೇವರ ಮೊರೆ        ಜೆಡಿಎಸ್‌ಗೂ ಕಾಡ್ತಿದೆ ಅಪರೇಷನ್‌ ಭಯ - ಹಾಸನದಲ್ಲಿ ಜೆಡಿಎಲ್‌ಪಿ ಮೀಟಿಂಗ್‌ - ಶಾಸಕರನ್ನ ಹಿಡದಿಟ್ಟುಕೊಳ್ಳ ಗೌಡರ ತಂತ್ರ        ಒಡಿಸ್ಸಾದಲ್ಲಿ ಪ್ರಧಾನಿ ರೌಂಡ್ಸ್‌ - ವಿವಿದ ಅಭಿವೃದ್ಧಿಕಾರ್ಯಗಳಿಗೆ ಮೋದಿ ಚಾಲನೆ - ಹೊಸ ಒಡಿಸ್ಸಾ ಕಟ್ಟೋಣ ಎಂದ ಪ್ರಧಾನಿ        ರಫೇಲ್‌ ಯುದ್ಧ ವಿಮಾನಕ್ಕೆ ಓಕೆ ಎಂದ ಐಎಎಫ್‌- ಮೊದಲ ಪರೀಕ್ಷೆಯಲ್ಲಿ ಯಶಸ್ವಿ ಹಾರಾಟ - ಮೋದಿ ಸರ್ಕಾರಕ್ಕೆ ಬಿಗ್‌ ಬೂಸ್ಟ್‌       
Breaking News

ಥಾಯ್ಲೆಂಡ್​ ಗುಹೆಯಲ್ಲಿ ಸಿಲುಕಿದ್ದ ಕೋಚ್​ ಸೇರಿ ಎಲ್ಲ ಬಾಲಕರ ರಕ್ಷಣೆ

Tuesday, 10.07.2018, 5:31 PM       No Comments

ಮೈ ಸಾಯ್​ (ಥಾಯ್ಲೆಂಡ್​): ಪ್ರವಾಹ ಪೀಡಿತ ಗುಹೆಯಲ್ಲಿ ಸಿಲುಕಿದ್ದ ಎಲ್ಲ 12 ಬಾಲಕರು ಮತ್ತು ಕೋಚ್​ ಅನ್ನು ಗುಹೆಯಿಂದ ಹೊರ ತರುವಲ್ಲಿ ರಕ್ಷಣಾ ಸಿಬ್ಬಂದಿ ಇಂದು ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಕಳೆದ ಎರಡು ವಾರಗಳಿಂದ ವಿಶ್ವಾದ್ಯಂತ ಮನೆ ಮಾಡಿದ್ದ ದುಗುಡ ಅಂತ್ಯಗೊಂಡಿದೆ.

ಎಲ್ಲರನ್ನೂ ಇಂದು ಹೊರಗೆ ಕರೆತರಲಾಗುವುದು ಎಂದು ಥಾಯ್ಲೆಂಡ್​ನ ರಕ್ಷಣಾ ಕಾರ್ಯಾಚರಣೆಯ ಮುಖ್ಯಸ್ಥರು ಮಂಗಳವಾರ ನೀಡಿದ್ದ ಹೇಳಿಕೆ ಕೊನೆಗೂ ನಿಜವಾಗಿದೆ.

ಕಳೆದ ಎರಡು ವಾರಗಳ ಹಿಂದೆ 12 ಮಂದಿ ಫುಟ್ಬಾಲ್​ ಆಟಗಾರ ಬಾಲಕರು ಮತ್ತು ತಂಡದ ಕೋಚ್​ ಗುಹೆಯಲ್ಲಿ ಸಿಲುಕಿದ್ದರು. ಅವರ ಸುರಕ್ಷಿತ ವಾಪಸಾತಿಗಾಗಿ ಇಡೀ ವಿಶ್ವವೇ ಹಾರೈಸುತ್ತಿತ್ತು. ಈಗ ಆ ಹಾರೈಕೆಗಳು ಫಲ ನೀಡಿದ್ದು ಎಲ್ಲರೂ ಹೊರಬಂದಿದ್ದಾರೆ.  ರಕ್ಷಣಾ ಕಾರ್ಯಾಚರಣೆ ಅಂತ್ಯ ಕಂಡಿದೆ.

ಇಂದು ಆರಂಭವಾದ ಮೂರನೇ ದಿನದ ರಕ್ಷಣಾ ಕಾರ್ಯಾಚರಣೆಯಲ್ಲಿ ಆರಂಭದಲ್ಲಿ ಓರ್ವ ಬಾಲಕನನ್ನು ಸ್ಟ್ರೆಚರ್​ ಮೂಲಕ ಹೊರತರಲಾಯಿತು. ಇದಾದ ಕೆಲವೇ ಗಂಟೆಗಳಲ್ಲಿ ಮತ್ತೊಬ್ಬ ಬಾಲಕನ್ನೂ ರಕ್ಷಿಸಲಾಯಿತು. ಅದಾದ ಕೆಲವೇ ಹೊತ್ತಿನಲ್ಲಿ ಕೋಚ್​ ಸೇರಿ ಎಲ್ಲರನ್ನೂ ರಕ್ಷಿಸಲಾಗಿದೆ.

ಭಾನುವಾರ ಆರಂಭವಾದ ರಕ್ಷಣಾ ಕಾರ್ಯಾಚರಣೆಯಲ್ಲಿ ಸೋಮವಾರ ಸಂಜೆಯ ಹೊತ್ತಿಗೆ 8 ಮಂದಿಯನ್ನು ರಕ್ಷಿಸಲಾಗಿತ್ತು. ಭಾನುವಾರ ನಾಲ್ವರು , ಸೋಮವಾರ ನಾಲ್ವರನ್ನು ಗುಹೆಯಿಂದ ಹೊರಗೆ ತರಲಾಗಿತ್ತು.

ಇದನ್ನೂ ಓದಿ

Watch Here: "BAODHA RAKSHEE" Digvijay Special @10.30 PM July 10

ವೀಕ್ಷಿಸಿ: ಅವರು ಹಸಿವಿಗೂ ಅಳುಕಲಿಲ್ಲ, ಸಾವಿಗೂ ಹೆದರಲಿಲ್ಲ..!18 ದಿನ ಮಕ್ಕಳಿಗೆ ಧೈರ್ಯ ತುಂಬಿ ಬದುಕಿಸಿದ್ದು ಯಾರು..?ಆ ರಕ್ಕಸ ಗುಹೆಯಲ್ಲಿ ಆಟಗಾರರನ್ನು ರಕ್ಷಿಸಿದ್ದು ಯಾವ ಶಕ್ತಿ..?‘ಬೌದ್ಧ’ ರಕ್ಷೆ..! (ದಿಗ್ವಿಜಯ ವಿಶೇಷ)ರಾತ್ರಿ 10.27ಕ್ಕೆ, ಮಧ್ಯಾಹ್ನ 12.27ಕ್ಕೆWatch Here: "BAODHA RAKSHEE" Digvijay Special @10.30 PM July 10

Dighvijay News – ದಿಗ್ವಿಜಯ ನ್ಯೂಸ್ ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಜುಲೈ 10, 2018

Leave a Reply

Your email address will not be published. Required fields are marked *

Back To Top