Saturday, 22nd September 2018  

Vijayavani

ಸಿಎಂ ಜನತಾ ದರ್ಶನದಲ್ಲಿ ಸಿಗಲಿಲ್ಲ ನ್ಯಾಯ - ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ - ಸಿಎಂಗೆ ಪತ್ರ ಬರೆದು ನಾಲ್ವರು ಸುಸೈಡ್‌        ಬಿಎಸ್‌ವೈ ನಿವಾಸದಲ್ಲಿ ಬಿಗ್‌ ಮೀಟಿಂಗ್‌ - ಮೈತ್ರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ರಣತಂತ್ರ        ಶೃಂಗೇರಿಯಲ್ಲಿ ಸಿಎಂ ಶತ್ರುಸಂಹಾರ ಯಾಗ - ಕಾರವಾರದಲ್ಲಿ ಡಿಸಿಎಂ ದೇವಿ ದರ್ಶನ - ಸಂಕಷ್ಟ ನಿವಾರಣೆಗೆ ದೇವರ ಮೊರೆ        ಜೆಡಿಎಸ್‌ಗೂ ಕಾಡ್ತಿದೆ ಅಪರೇಷನ್‌ ಭಯ - ಹಾಸನದಲ್ಲಿ ಜೆಡಿಎಲ್‌ಪಿ ಮೀಟಿಂಗ್‌ - ಶಾಸಕರನ್ನ ಹಿಡದಿಟ್ಟುಕೊಳ್ಳ ಗೌಡರ ತಂತ್ರ        ಒಡಿಸ್ಸಾದಲ್ಲಿ ಪ್ರಧಾನಿ ರೌಂಡ್ಸ್‌ - ವಿವಿದ ಅಭಿವೃದ್ಧಿಕಾರ್ಯಗಳಿಗೆ ಮೋದಿ ಚಾಲನೆ - ಹೊಸ ಒಡಿಸ್ಸಾ ಕಟ್ಟೋಣ ಎಂದ ಪ್ರಧಾನಿ        ರಫೇಲ್‌ ಯುದ್ಧ ವಿಮಾನಕ್ಕೆ ಓಕೆ ಎಂದ ಐಎಎಫ್‌- ಮೊದಲ ಪರೀಕ್ಷೆಯಲ್ಲಿ ಯಶಸ್ವಿ ಹಾರಾಟ - ಮೋದಿ ಸರ್ಕಾರಕ್ಕೆ ಬಿಗ್‌ ಬೂಸ್ಟ್‌       
Breaking News

ದುರ್ಬಲಗೊಳ್ಳುತ್ತಿದೆ ಆಂತರಿಕ ಬದುಕು

Wednesday, 04.04.2018, 11:08 PM       No Comments

ಆಲ್ದೂರು: ಭೌತಿಕ ಬದುಕು ಶ್ರೀಮಂತಗೊಂಡರೂ ಆಂತರಿಕ ಬದುಕು ದುರ್ಬಲಗೊಳ್ಳುತ್ತಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಕಂಚನಕಲ್ ದುರ್ಗದ ಮಠದಲ್ಲಿ ಬುಧವಾರ ನಡೆದ ಇಷ್ಟಲಿಂಗ ಮಹಾಪೂಜೆ ಹಾಗೂ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಬದುಕುವುದನ್ನು ಕಲಿಸುವುದೇ ಧರ್ಮದ ಗುರಿ. ಸಂಸ್ಕಾರಯುಕ್ತ ಮೌಲ್ಯಾಧಾರಿತ ಬದುಕಿನಿಂದ ಉಜ್ವಲ ಭವಿಷ್ಯ ಪ್ರಾಪ್ತವಾಗುತ್ತದೆ ಎಂದರು.

ಧರ್ಮದ ದಿಕ್ಸೂಚಿ ಇಲ್ಲದಿದ್ದರೆ ಬದುಕು ಬಲಗೊಳ್ಳಲು ಸಾಧ್ಯವಿಲ್ಲ. ಪರಿಶುದ್ಧ ಬದುಕಿಗೆ ಧರ್ವಚರಣೆ ಮುಖ್ಯ. ಶ್ರೀ ಜಗದ್ಗುರು ರೇಣುಕಾಚಾರ್ಯರು ದಶ ಧರ್ಮಸೂತ್ರಗಳನ್ನು ಬೋಧಿಸಿದರು. ವೀರಶೈವ ಧರ್ಮದ ಇತಿಹಾಸ ಪರಂಪರೆ ಅಪೂರ್ವ. ಸಕಲ ಜೀವಾತ್ಮರಿಗೂ ಲೇಸನ್ನು ಬಯಸಿದ ಧರ್ಮ. ಮಹಿಳೆಯರಿಗೆ ಧಾರ್ವಿುಕ ಸಂಸ್ಕಾರ ಮತ್ತು ದುರ್ಬಲರನ್ನು ಮೇಲೆತ್ತಿರುವ ಕೀರ್ತಿ ವೀರಶೈವ ಧರ್ಮಕ್ಕಿದೆ. ಜೀವನ ವಿಕಾಸಕ್ಕೆ ಮತ್ತು ಪರಿಶುದ್ಧ ಜೀವನಕ್ಕೆ ಅವಶ್ಯಕವಾಗಿವೆ ಎಂದರು. ಕಂಚಿನಕಲ್ ದುರ್ಗದ ಮಠ ಪ್ರಾಚೀನ ಗುರು ಸ್ಥಾನವಾಗಿದ್ದು ರಂಭಾಪುರಿ ಪೀಠ ಪರಂಪರೆಯಲ್ಲಿ ಬೆಳೆದುಕೊಂಡು ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮಠದ ಆಡಳಿತಾಧಿಕಾರಿ ಚಂದ್ರಶೇಖರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಡೆಯೂರು ಕ್ಷೇತ್ರದ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಹುಲಿಕೆರೆ ಮಠದ ವಿರೂಪಾಕ್ಷ ಲಿಂಗ ಶಿವಾಚಾರ್ಯ ಸ್ವಾಮೀಜಿ, ಶಂಕರದೇವರ ಮಠದ ಚಂದ್ರಶೇಖರ ಸ್ವಾಮೀಜಿ, ಪ್ರಭುದೇವ್, ಮಹೇಶ್, ಪ್ರಭಾವತಿ ಚಂದ್ರಶೇಖರಯ್ಯ, ನಿಶಾಂತಯ್ಯ, ಪ್ರಶಾಂತಯ್ಯ ಇದ್ದರು.

Leave a Reply

Your email address will not be published. Required fields are marked *

Back To Top