Tuesday, 16th October 2018  

Vijayavani

ಉಪಚುನಾವಣಾ ಕದನಕ್ಕೆ ನಾಮಿನೇಷನ್​ ಫೈಲ್​- ಬಳ್ಳಾರಿಯಲ್ಲಿ ಶಾಂತಾ, ಉಗ್ರಪ್ಪ ಅಧಿಕೃತ ಅಖಾಡಕ್ಕೆ        ರಂಗೇರಿದ ಅಖಾಡದಲ್ಲಿ ಅಭ್ಯರ್ಥಿಗಳ ಶಕ್ತಿ ಪ್ರದರ್ಶನ - ರೋಡ್​​ಶೋ ನಡೆಸಿ ಎದುರಾಳಿಗೆ ಟಕ್ಕರ್​ - ನಾಳೆಯಿಂದ ಪ್ರಚಾರ ಶುರು        ಲೋನ್​ಗಾಗಿ ರೂಂಗೆ ಕರೆದ ಮ್ಯಾನೇಜರ್ - ಸಂಚು ಅರಿತು ಪ್ರತಿತಂತ್ರ ಹೆಣೆದ ನಾರಿ -ದಾವಣಗೆರೆ ಬೀದಿಯಲ್ಲೇ ಭರ್ಜರಿ ಸೇವೆ        ಯಾದಗಿರಿಯಲ್ಬಲಿ ಡವರಿಗೆ ಎರಡು ತಿಂಗಳಿನಿಂದ ಸಿಕ್ಕಿಲ್ಲ ಪಡಿತರ ಧಾನ್ಯ - ವಿತರಕನಿಂದಲೇ ಕಾಳಸಂತೆಯಲ್ಲಿ ಮಾರಾಟ        ಏಳನೇ ದಿನ ಚಾಮುಂಡಿ ದರ್ಶನಕ್ಕೆ ಜನಸಾಗರ - ಫ್ಲವರ್​ ಶೋನಲ್ಲಿ ಮುದುಡಿದ ಕಮಲಕ್ಕೆ ಹೊಸ ಮೆರಗು       
Breaking News

ಮೊಬೈಲ್ ಕಳ್ಳನೆಂದು ವ್ಯಕ್ತಿಗೆ ಭಾರಿ ಥಳಿತ

Monday, 04.06.2018, 5:00 AM       No Comments

ಆಲಮಟ್ಟಿ: ಸ್ಥಳೀಯ ವಾರದ ಸಂತೆ ದಿನ ಮೊಬೈಲ್ ಕಳ್ಳನೆಂದು ಆರೋಪಿಸಿ ಇಪ್ಪತ್ತಕ್ಕೂ ಹೆಚ್ಚು ಜನರು 25 ವರ್ಷದ ಅಪರಿಚಿತ ವ್ಯಕ್ತಿಯನ್ನು ಭಾನುವಾರ ಥಳಿಸಿದ್ದಾರೆ.

ವಾರದ ಸಂತೆಗೆ ಆಗಮಿಸಿದ್ದ ಇಬ್ಬರ ವ್ಯಕ್ತಿಗಳ ಮೊಬೈಲ್ ಹಾಗೂ ಓರ್ವ ವ್ಯಕ್ತಿಯ 5 ಸಾವಿರ ರೂ. ಹಣ ಕಳ್ಳತನವಾಗಿದೆ. ಓರ್ವ ಯುವಕ ಓಡಿ ಹೋಗುವುದನ್ನು ಕಂಡ ಸಂತೆಗೆ ಬಂದ ಜನ ಅಪರಿಚಿತ ವ್ಯಕ್ತಿಯನ್ನು ಹಿಡಿದು ಥಳಿಸಿದ್ದಾರೆ. ಹೊಡೆತ ತಾಳಲಾರದೆ ಆರೋಪಿ ಓಡಿ ಹೋಗಲು ಯತ್ನಿಸಿದ್ದಾನೆ. ಆಲಮಟ್ಟಿಯ ವಿವಿಧ ಮನೆಗಳ ಕಾಂಪೌಂಡ್ ಹಾರಿ ಒಬ್ಬರ ಮನೆಯಲ್ಲಿ ಅಡಗಿದ ವೇಳೆ ಅಲ್ಲಿಗೂ ಬಂದ ಹಲವು ಜನ ಸೇರಿ ವ್ಯಕ್ತಿಯನ್ನು ರಸ್ತೆಯಲ್ಲಿ ಎಸೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಸಂತೆಗೆ ಬಂದಿದ್ದ ಪತ್ರಕರ್ತರೊಬ್ಬರು ಆಲಮಟ್ಟಿ ಪೊಲೀಸರಿಗೆ ವಿಷಯ ತಿಳಿಸಿದರೂ ಪೊಲೀಸರು ಇದಕ್ಕೆ ಸ್ಪಂದಿಸಲಿಲ್ಲ. ಕೊನೆಗೆ ಪತ್ರಕರ್ತರೇ 108 ಆಂಬುಲೆನ್ಸ್ ತರಿಸಿ ನಿಡಗುಂದಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

ನಿಡಗುಂದಿ ಆಸ್ಪತ್ರೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅಪರಿಚಿತ ವ್ಯಕ್ತಿ, ತಾನು ಸಿಂದಗಿ ಪಟ್ಟಣದ ವಿಜಯನಗರ ಬಡಾವಣೆಯ ಹನುಮಂತ ಕಟ್ಟಿಮನಿ (25) ಎಂದು ಹೇಳಿಕೊಂಡಿದ್ದು, ಮಿತ್ರನೊಬ್ಬನ ಭೇಟಿಗಾಗಿ ಆಲಮಟ್ಟಿಗೆ ಬಂದಿರುವುದಾಗಿ ತಿಳಿಸಿದ. ಸರಾಯಿ ಕುಡಿದಿದ್ದೆ, ಆದರೆ ಮೊಬೈಲ್ ಕಳ್ಳತನ ಮಾಡಿಲ್ಲ. ಏಕಾಏಕಿ 20 ಕ್ಕೂ ಹೆಚ್ಚು ಜನ ನನ್ನನ್ನು ಹಿಗ್ಗಾಮುಗ್ಗಾ ಥಳಿಸಿದ್ದರಿಂದ ಅಲ್ಲಿಂದ ಓಡಿ ಹೋದೆ ಎಂದು ಹೇಳಿಕೆ ನೀಡಿದ್ದಾನೆ.

ಘಟನೆ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ ಆಲಮಟ್ಟಿ ಪೊಲೀಸರು ಸಂಜೆ 5 ಗಂಟೆ ವೇಳೆಗೆ ನಿಡಗುಂದಿ ಆಸ್ಪತ್ರೆಗೆ ಬಂದಾಗ ವ್ಯಕ್ತಿ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ.

ಪೊಲೀಸರ ನಿರ್ಲಕ್ಷ್ಯ

ಘಟನೆ ನಡೆದು ಹಲವು ಸಮಯ ಕಳೆದರೂ ಪೊಲೀಸರು ಮಾತ್ರ ಘಟನೆ ಸ್ಥಳಕ್ಕೆ ಬರಲಿಲ್ಲ. ವಾರದ ಸಂತೆ ಬಂದೋಬಸ್ತ್​ಗಾಗಿ ಪೊಲೀಸರು ಸುಳಿಯಲಿಲ್ಲ. ಪಿಎಸ್​ಐ ಎಸ್.ಡಿ. ಕೊಲ್ಹಾರ ಅವರಿಗೆ ದೂರವಾಣಿ ಕರೆ ಮಾಡಿ ಹೇಳಿದರೂ ಕೂಡ ಸ್ಪಂದಿಸಲಿಲ್ಲ. ಸ್ಥಳದಲ್ಲಿದ್ದ ವಿವಿಧ ಜನಪ್ರತಿನಿಧಿಗಳು ವ್ಯಕ್ತಿಗೆ ಥಳಿಸುತ್ತಿದ್ದ ಜನರನ್ನು ಬಿಡಿಸಲು ಯತ್ನಿಸಲಿಲ್ಲ.

Leave a Reply

Your email address will not be published. Required fields are marked *

Back To Top