Friday, 23rd March 2018  

Vijayavani

ರಾಜ್ಯಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ - ವಿಧಾನಸೌಧದಲ್ಲಿ ಮತ ಎಣಿಕೆ - ಚುನಾವಣಾ ಅಧಿಕಾರಿಯಿಂದ ರಿಸಲ್ಟ್​ ಅನೌನ್ಸ್        ಕೈಗೆ ಮೂರು, ಬಿಜೆಪಿಗೆ ಒಂದು ಸೀಟು ಪಕ್ಕಾ - ಈ ಬಾರಿಯೂ ಜೆಡಿಎಸ್​ಗಿಲ್ಲ ಸ್ಥಾನ - ಎರಡನೇ ಫಾರೂಕ್​ಗಿಲ್ಲ ಅದೃಷ್ಟ        ಸ್ಪೀಕರ್​ ನೆರವಿಗೆ ಬರಲಿಲ್ಲ - ನಾಗಮೋಹನ್​ದಾಸ್​ ವರದಿಯೇ ಸರಿಯಿಲ್ಲ - ವೀರಶೈವ ಮಹಾಸಭೆಯಲ್ಲಿ ಪ್ರತ್ಯೇಕ ಧರ್ಮಕ್ಕೆ ಆಕ್ರೋಶ        SSLC ಅಲ್ಲ ಇದು ಕಾಪಿಚೀಟಿ ಪರೀಕ್ಷೆ - ಬಹುತೇಕ ಕೇಂದ್ರಗಳಲ್ಲಿ ಸಾಮೂಹಿಕ ನಕಲು - ಹುಬ್ಬಳ್ಳಿ, ವಿಜಯಪುರ, ಕಲಬುರಗಿ ಸೇರಿ ಎಂಟು ಡಿಬಾರ್​        ಮಕ್ಕಳಾಗದ್ದಕ್ಕೆ ಪತ್ನಿ ಮೇಲೆ ದೌರ್ಜನ್ಯ - ವಿಕೃತ ಪತಿಯಿಂದ ಪತ್ನಿಗೆ ನಿರಂತರ ಕಿರುಕುಳ - ಮಗನಿಗೆ ಎರಡನೇ ಮದ್ವೆ ಮಾಡಲು ಪೋಷಕರ ಪ್ಲಾನ್​       
Breaking News

ರಾಹುಲ್​ಗೆ ಸದ್ಯಕ್ಕಿಲ್ಲ ‘ಕೈ’ ಅಧ್ಯಕ್ಷ ಪಟ್ಟ..!

Tuesday, 14.11.2017, 3:43 PM       No Comments

>> ಸುಳ್ಳಾದ ಪಕ್ಷದ ನಾಯಕರ ಭವಿಷ್ಯವಾಣಿ

ನವದೆಹಲಿ: ಗುಜರಾತ್​ ವಿಧಾನಸಭೆ ಚುನಾವಣೆಗೂ ಮುನ್ನವೇ ಎಐಸಿಸಿ ಉಪಾಧ್ಯಕ್ಷ ರಾಹುಲ್​ ಗಾಂಧಿ ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೇರಲಿದ್ದಾರೆ ಎಂದು ಕೆಲವು ಕಾಂಗ್ರೆಸ್​ ನಾಯಕರು ಭವಿಷ್ಯ ನುಡುದಿದ್ದರು. ಆದರೆ ಅವರ ಭವಿಷ್ಯ ಸುಳ್ಳಾಗುವ ಲಕ್ಷಣಗಳು ಕಾಣುತ್ತಿದ್ದು, ರಾಹುಲ್​ ಪಟ್ಟಾಭಿಷೇಕ ಮತ್ತೊಮ್ಮೆ ಮುಂದಕ್ಕೆ ಹೋಗುವ ಸಾಧ್ಯತೆ ಹೆಚ್ಚಾಗಿದೆ.

ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸಭೆ ಯಾವಾಗ ನಡೆಯಲಿದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಜತೆಗೆ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಸಹ ಗೋವಾ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಹಾಗಾಗಿ ರಾಹುಲ್​ ಗುಜರಾತ್​ ಚುನಾವಣೆ ನಂತರ ಅಧ್ಯಕ್ಷ ಸ್ಥಾನಕ್ಕೆ ಏರುವ ಸಾಧ್ಯತೆ ಹೆಚ್ಚಾಗಿದೆ.

ಇಂದಿರಾಗಾಂಧಿ ಅವರ ಹುಟ್ಟುಹಬ್ಬದ ವೇಳೆಯಲ್ಲಿ ರಾಹುಲ್​ ಎಐಸಿಸಿ ಅಧ್ಯಕ್ಷನಾಗಿಯೇ ಗುಜರಾತ್​ ಚುನಾವಣೆಯಲ್ಲಿ ಪ್ರಚಾರ ಮಾಡಲಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಭರವಸೆ ಸುಳ್ಳಾಗುತ್ತಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top