Saturday, 18th November 2017  

Vijayavani

1. ಜಯಾ ನಿವಾಸದಲ್ಲಿ ಐಟಿ ಇಂಚಿಂಚೂ ಶೋಧ- ಪೋಯೆಸ್​ ಗಾರ್ಡನ್​​ನಲ್ಲಿ ದಾಖಲೆಗಳ ಪರಿಶೀಲನೆ- ಚೆನ್ನೈನಲ್ಲಿ ಕಳೆದ ರಾತ್ರಿಯಿಂದಲೂ ಹೈಡ್ರಾಮಾ 2. ಬೆಂಗಳೂರಿನಲ್ಲಿ ವ್ಯಕ್ತಿಯ ಪುಂಡಾಟ- ನಡುರೋಡಲ್ಲೇ ಟ್ರಾಫಿಕ್​​ ಪೊಲೀಸ್​ ಮೇಲೆ ಹಲ್ಲೆ- ದೊಣ್ಣೆ ಹಿಡಿದ ವ್ಯಕ್ತಿ ಈಗ ಖಾಕಿ ಅತಿಥಿ 3. ಒಂದಲ್ಲ… ಎರಡಲ್ಲ… ಬರೋಬ್ಬರಿ ಮೂರು- ಬೀಗರ ಊಟದಲ್ಲೇ ಸಿಕ್ಕಿಬಿದ್ದ ರಸಿಕ ಮಹಾಶಯ- ಹಾಸನದ ಗೊರೂರಿನಲ್ಲಿ ಬಿತ್ತು ಸಖತ್ ಗೂಸಾ 4. ಪಿಒಕೆ ವಶಪಡಿಸಿಕೊಳ್ಳಲು ಪಾಕ್​ ತೆರಿಗೆ ಹುನ್ನಾರ- ಕೋಳಿ, ಕುರಿ, ಹಸುವಿಗೂ ಟ್ಯಾಕ್ಸ್​- ಪಾಕ್​ ವಿರುದ್ಧ ಗಿಲ್ಗಿಟ್​​​ನಲ್ಲಿ ಆಕ್ರೋಶ 5. ಸಿಂಹಳೀಯರ ದಾಳಿಗೆ ಭಾರತ ತತ್ತರ- ಮೊದಲ ಇನ್ನಿಂಗ್ಸ್​​​ನಲ್ಲಿ 172ಕ್ಕೆ ಆಲೌಟ್​- ಶ್ರೀಲಂಕಾ ರಕ್ಷಣಾತ್ಮಕ ಆಟ
Breaking News :

ಅಹ್ಮದಾಬಾದ್-ಮುಂಬೈ ಟ್ರೈನ್: ನೀವು ತಿಳಿಯಲೇಬೇಕಾದ ‘ಬುಲೆಟ್’​ ಪಾಯಿಂಟ್ಸ್ ಇಲ್ಲಿದೆ!

Wednesday, 13.09.2017, 2:38 PM       No Comments

ಅಹಮದಾಬಾದ್​: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನಿನ ಪ್ರಧಾನಿ ಶಿಂಜೋ ಅಬೆ ಜಂಟಿಯಾಗಿ ನಾಳೆ ಅಹಮದಾಬಾದಿನಲ್ಲಿ ಮಹತ್ವಾಕಾಂಕ್ಷಿ ಬುಲೆಟ್ ರೈಲು ಯೋಜನೆ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಭಾರತೀಯ ರೈಲು ಮತ್ತು ಜಪಾನ್​ ಮೂಲದ ಕಂಪನಿ ಶಿಂಕಾನ್​ಸೆನ್​ ಟೆಕ್ನಾಲಜಿ ಜಂಟಿಯಾಗಿ ಕೈಗೆತ್ತಿಕೊಂಡಿರುವ ಈ ಯೋಜನೆಯು ಭಾರತೀಯ ರೈಲು ಸಾರಿಗೆ ವ್ಯವಸ್ಥೆಯಲ್ಲಿ ಮೈಲಿಗಲ್ಲಾಗಲಿದೆ.

ಬನ್ನಿ ಈ ರೈಲಿನ ಕುರಿತಾದ ಹತ್ತು ಬುಲೆಟ್​ ಪಾಯಿಂಟ್​ಗಳನ್ನು ತಿಳಿಯೋಣ:
1. ಬುಲೆಟ್ ರೈಲು ಯೋಜನೆಯು 1.10 ಲಕ್ಷ ಕೋಟಿ ರೂ ಅಂದರೆ ಇಂದಿನ ಲೆಕ್ಕದಲ್ಲಿ 1.10,00,000,000,00,000 ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಯೋಜನೆಯ ಶೇ. 81ರಷ್ಟು ಹಣವನ್ನು ಶೇ. 0.1 ಬಡ್ಡಿ ದರದಲ್ಲಿ ಭಾರತಕ್ಕೆ ಜಪಾನ್ ಸಾಲ ನೀಡಲಿದೆ. ಇದನ್ನು ಹಿಂದಿರುಗಿಸಲು ಭಾರತಕ್ಕೆ 50 ವರ್ಷ ಕಾಲಾವಕಾಶವಿದೆ.

2. ಬುಲೆಟ್ ರೈಲು 750 ಜನ ಪ್ರಯಾಣಿಕರನ್ನು ಕರೆದೊಯ್ಯುವ ಸಾಮರ್ಥ್ಯ ಹೊಂದಿದ್ದು, ಪ್ರಧಾನಿ ಮೋದಿಯವರ ತಾಯ್ನಾಡು ಗುಜರಾತಿನ ಅಹಮದಾಬಾದಿನಿಂದ ಮುಂಬೈಗೆ ಸಂಚರಿಸಲಿದೆ.

3. ಬುಲೆಟ್​ ವೇಗದ ರೈಲು ಇದಾಗಿದ್ದು, ತನ್ನ ವೇಗದಿಂದಲೇ ಎಲ್ಲರ ಗಮನ ಸೆಳೆಯಲಿದೆ. ಈ ರೈಲು ಒಂದು ದಿನದಲ್ಲಿ ಮುಂಬೈ-ಅಹಮದಾಬಾದ್ ಮಧ್ಯೆ 70 ಬಾರಿ ಸಂಚರಿಸಬಲ್ಲದು ಎಂದು ನಿರೀಕ್ಷಿಸಲಾಗಿದೆ.

4. ಈ ಬುಲೆಟ್ ರೈಲು ಗಂಟೆಗೆ 250 ಕಿ.ಮೀ. ಓಡಬಲ್ಲದು ಎಂದು ನಿರೀಕ್ಷಿಸಲಾಗಿದ್ದು ಗರಿಷ್ಠ 320 ಕಿ.ಮೀ ವೇಗದಲ್ಲಿ ಸಂಚರಿಸಬಲ್ಲದು. ಇದರ ವೇಗ ಈ ಸದ್ಯ ಭಾರತದಲ್ಲಿರುವ ಅತ್ಯಂತ ವೇಗದ ರೈಲಿಗಿಂತ ಎರಡು ಪಟ್ಟು ಹೆಚ್ಚು ಇರಲಿದೆ.

5. ಒಟ್ಟು 508 ಕಿ.ಮೀ ಮಾರ್ಗದ ಈ ಯೋಜನೆಯಲ್ಲಿ 460 ಕಿ.ಮೀ ಮಾರ್ಗವು ಎತ್ತರಿಸಿದ ಮಾರ್ಗದಲ್ಲಿ (ಎಲಿವೇಟೆಡ್) ನಿರ್ಮಿಸಲಾಗುತ್ತದೆ.

6. 460 ಕಿ.ಮೀ ಮಾರ್ಗದ ಜತೆಗೆ ಒಟ್ಟು 27 ಕಿ.ಮೀ. ಸುರಂಗ ಮಾರ್ಗದಲ್ಲಿಯೂ ಬುಲೆಟ್​ ರೈಲು ಸಾಗಲಿದೆ. ಅದರಲ್ಲಿ 7 ಕಿ.ಮೀ ಮಾರ್ಗವು ಸಮುದ್ರದ ಅಡಿ ಸಾಗಲಿದೆ.

7. ಭಾರತವು ತನ್ನ 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮಾಚರಣೆ ನಡೆಸುವ ಸಂದರ್ಭದಲ್ಲಿ ಅಂದರೆ ಆಗಸ್ಟ್ 15, 2022ರಂದು ಮುಂಬೈ – ಅಹಮದಾಬಾದ್​ ನಡುವೆ ಪ್ರಥಮ ಬುಲೆಟ್ ರೈಲು ಸಂಚಾರ ಪ್ರಾರಂಭಿಸಲಿದೆ ಎಂದು ನೂತನ ರೈಲ್ವೆ ಮಂತ್ರಿ ಪಿಯೂಷ್ ಗೋಯಲ್ ಹೇಳಿದ್ದಾರೆ.

8. ಮುಂಬೈ -ಅಹಮದಾಬಾದ್​ ನಡುವೆ ಬುಲೆಟ್ ರೈಲು ಸಂಚಾರದಲ್ಲಿ ಒಟ್ಟು 12 ನಿಲ್ದಾಣಗಳು ಇರುತ್ತವೆ. ಬುಲೆಟ್ ರೈಲು ಅಷ್ಟು ನಿಲ್ದಾಣದಲ್ಲಿ ನಿಲುಗಡೆಗೊಂಡು ಸಂಚರಿಸಿದರೆ ಮೂರು ಗಂಟೆ ವೇಳೆಯಲ್ಲಿ ಮುಂಬೈ-ಅಹಮದಾಬಾದ್​ ನಡುವೆ ಸಂಚಾರ ಪೂರ್ಣಗೊಳ್ಳಲಿದೆ.

9. ಕೇವಲ ನಾಲ್ಕು ನಿಲ್ದಾಣದಲ್ಲಿ ನಿಲುಗಡೆ ಹೊಂದಿ ಸಂಚರಿಸಿದರೆ ಎರಡು ಗಂಟೆಗಳಲ್ಲಿ ಸಂಚಾರವನ್ನು ಪೂರೈಸಲಿದೆ. ಗಮನಿಸಿ… ಪ್ರಸ್ತುತ ಮುಂಬೈ-ಅಹಮದಾಬಾದ್​ ನಡುವೆ ಸಂಚರಿಸುವ ರೈಲುಗಳು ಎಂಟು ಗಂಟೆ ಸಮಯವನ್ನು ತೆಗೆದುಕೊಳ್ಳುತ್ತಿವೆ.

10. 508 ಕಿ.ಮೀ ಉದ್ದನೆಯ ಮಾರ್ಗದಲ್ಲಿ 351 ಕಿ.ಮೀ ಗುಜರಾತಿನಲ್ಲಿ ನಿರ್ಮಾಣವಾಗಲಿದೆ. ಇನ್ನುಳಿದ, 156 ಕಿ.ಮೀ ಮಹಾರಾಷ್ಟ್ರದಲ್ಲಿ ನಿರ್ಮಾಣವಾಗಲಿದೆ.

Leave a Reply

Your email address will not be published. Required fields are marked *

Back To Top