Sunday, 18th February 2018  

Vijayavani

ಶಾಸಕ ಹ್ಯಾರಿಸ್ ಪುತ್ರನ ಗೂಂಡಾಗಿರಿ ಕೇಸ್ - ಪ್ರಕರಣ ಸಂಬಂಧ ಐವರು ಅರೆಸ್ಟ್ - ಮಹಮ್ಮದ್‌ ಬಂಧನ ಯಾವಾಗ?        ಮಕ್ಕಳಂದ್ರೆ ಹಿಂಗೆ ಬೆಳಸ್ಪೇಕು ನೋಡಿ - ಹ್ಯಾರಿಸ್‌ ಪುತ್ರನನ್ನು ಹೊಗಳಿದ್ದ ಪ್ರಕಾಶ್ ರೈ - ಘಟನೆ ಬಳಿಕ ಉಲ್ಟಾ ಹೊಡೆದ ನಟ.        ವಿಂದ್ಯಗಿರಿಯಲ್ಲಿ ಮಹಾಮಸ್ತಕಾಭಿಷೇಕ ಸಂಭ್ರಮ - ನಾಳೆ ಮೋದಿಯಿಂದ ಜೈನಮುನಿಗಳಿಗೆ ನಮನ - ಶ್ರವಣಬೆಳಗೊಳದಲ್ಲಿ ಬಿಗಿ ಬಂದೋಬಸ್ತ್.        ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗುದ್ದಲಿಪೂಜೆ ಗುದ್ದಾಟ - ಸಿಎಂ ಪುತ್ರ ಯತೀಂದ್ರಗೆ ಘೇರಾವ್‌ - ಜೆಡಿಎಸ್‌ ಕಡೆಗಣಿಸಿದ್ದಕ್ಕೆ ಆಕ್ರೋಶ.        ತಮಿಳುನಾಡು ರಾಜಕೀಯದಲ್ಲಿ ಮಹಾಪರ್ವ - ತಲೈವಾ ಭೇಟಿ ಮಾಡಿದ ಕಮಲ್‌ - ಮೈತ್ರಿ ಕುರಿತು ಮಹತ್ವದ ಚರ್ಚೆ.       
Breaking News

4 ತಿಂಗಳ ನಂತ್ರ ಕೋಮಾದಿಂದ ಮರಳಿದ ಮಹಿಳೆ ಬಿಚ್ಚಿಟ್ಟ ಭಯಾನಕ ಸತ್ಯವೇನು?

Monday, 09.10.2017, 2:52 PM       No Comments

ನವದೆಹಲಿ: ಸತತ ನಾಲ್ಕು ತಿಂಗಳು ಕೋಮಾದಲ್ಲಿದ್ದ ಮಹಿಳೆಯೊಬ್ಬಳ ನೆನಪು ಮತ್ತೆ ಮರುಕಳಿಸಿದ ಮೇಲೆ ಭಯಾನಕ ಸತ್ಯವೊಂದನ್ನು ಹೊರ ಹಾಕಿದ್ದಾಳೆ. ತನ್ನ ಕೋಮಾ ಸ್ಥಿತಿಗೆ ಕಾರಣವಾದ ಪತ್ನಿಯ ಮೇಲೆ ಕಿಡಿಕಾರಿದ್ದಾಳೆ.

ಉತ್ತರ ಪ್ರದೇಶದ ಕನೌಜ್​ ಮೂಲದ 23 ವರ್ಷದ ಮಾಧುರಿ ಚಾಂದ್​ ಎಂಬ ಮಹಿಳೆಯೇ ಕೋಮಾ ಹಲ್ಲೆಗೊಳಗಾಗಿ ಕೋಮಾಗೆ ತುತ್ತಾಗಿದ್ದ ಮಹಿಳೆ. ಈ ಘಟನೆ ದಕ್ಷಿಣ ದೆಹಲಿಯ ಪುಲ್​ಪ್ರಹ್ಲಾದಪುರದಲ್ಲಿ ಜೂನ್ 13ರಂದು ನಡೆದಿದ್ದು, ಮಹಿಳೆ ಕೋಮಾದಿಂದ ಹೊರಬಂದ ನಂತರ ಅಸಲಿಯತ್ತು ಬಯಲಾಗಿದೆ.

ಘಟನೆ ಹಿನ್ನೆಲೆ:
ಮಾಧುರಿ ಚಾಂದ್​ ಪತಿ ರವಿ ಮದುವೆಗೂ ಮೊದಲೇ ಇನ್ನೊಬ್ಬಳೊಂದಿಗೆ ಸಂಬಂಧವಿಟ್ಟುಕೊಂಡಿದ್ದ. ಆದರೆ, ಕುಟುಂಬದವರ ಒತ್ತಾಯಕ್ಕೆ ಮಣಿದು ಮಾಧುರಿಯನ್ನು ಮದುವೆಯಾಗಿದ್ದ. ಮುಜಫರ್​ನಗರದಿಂದ ಉದ್ಯೋಗ ಕೊಡಿಸುವುದಾಗಿ ಅವಳನ್ನು ದೆಹಲಿಗೆ ಕರೆದುಕೊಂಡು ಬಂದು, ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ ಆಗ ಮಾಧುರಿ ಪ್ರಜ್ಞೆ ತಪ್ಪಿದೆ. ಇದರಿಂದ ಬೆದರಿದ ಪತಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಹಲ್ಲೆಯ ನಂತರ ಮಾಧುರಿ ಸುಮಾರು 4 ತಿಂಗಳು ಕೋಮಾದಲ್ಲಿದ್ದಳು. ಅವಳಿಗೆ ಆಗಸ್ಟ್​ನಲ್ಲಿ ಪ್ರಜ್ಞೆ ಮರುಕಳಿಸಿತ್ತು. ಆದರೂ ಅಮ್ನೇಶಿಯಾಕ್ಕೆ ಒಳಗಾಗಿದ್ದರಿಂದ ಅವಳಿಗೆ ಯಾವುದೇ ಮಾಹಿತಿ ನೀಡಲು ಆಗಿರಲಿಲ್ಲ. ವೈದ್ಯರ ಸತತ ಪ್ರಯತ್ನದಿಂದ ಇಗ ಆಕೆ ಎಚ್ಚರಗೊಂಡಿದ್ದು, ತನ್ ಕೋಮಾ ಸ್ಥಿತಿಗೆ ಕಾರಣವಾದ ಪತಿ ಕರಾಳ ಮುಖವನ್ನು ಬಯಲು ಮಾಡಿದ್ದಾಳೆ.

ಇನ್ನು ಈ ಬಗ್ಗೆ ದಾಳಿಗೊಳಗಾದ ಮಹಿಳೆ ದೂರು ದಾಖಲಿಸಿದ್ದು, ಕೊಲೆ ಯತ್ನದ ಪ್ರಕರಣದಲ್ಲಿ ದೂರು ದಾಖಲಿಸಿಕೊಂಡಿರುವ ಪೊಲೀಸರು ಭಾನುವಾರದಂದು ಆರೋಪಿ ರವಿಯನ್ನು ಬಂಧಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top